Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೊಜಾಂಬಿಕ್ ಭೇಟಿಯ ವೇಳೆ ಔತಣಕೂಟದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಪಠ್ಯ (ಜುಲೈ 7, 2016)

ಮೊಜಾಂಬಿಕ್ ಭೇಟಿಯ ವೇಳೆ  ಔತಣಕೂಟದಲ್ಲಿ ಪ್ರಧಾನ ಮಂತ್ರಿಯವರ  ಭಾಷಣದ ಪಠ್ಯ (ಜುಲೈ 7, 2016)


ಘನತೆವೆತ್ತ ಅಧ್ಯಕ್ಷರಾದ ಫಿಲಿಪಿ ನೈಯುಸಿ ಅವರೇ,

ಮಾನ್ಯರೇ ಮತ್ತು ಮಹಿಳೆಯರೇ ,

ಮಾನ್ಯರೇ, ತಮ್ಮ ಮಾತುಗಳು ನನ್ನ ಮನ ಮುಟ್ಟಿವೆ. ಭಾರತ – ಮೊಜಾಂಬಿಕ್ ಬಾಂಧವ್ಯವನ್ನು ಬಲಪಡಿಸುವ ನಿಮ್ಮ ಚಿಂತನೆಗಳಿಗೆ ಧನ್ಯವಾದಗಳು. ನಾನು ಆತ್ಮೀಯವಾದ ಸ್ವಾಗತ ಮತ್ತು ಆತಿಥ್ಯಕ್ಕೆ ತಮಗೂ, ತಮ್ಮ ಸರ್ಕಾರಕ್ಕೂ ಮತ್ತು ಮೊಜಾಂಬಿಕ್ ಜನತೆಗೂ ಧನ್ಯವಾದಗಳನ್ನು ಅರ್ಪಿಸ ಬಯಸುತ್ತೇನೆ.

ಘನತೆವೆತ್ತರೇ, ನಮ್ಮ ದೇಶಗಳ ನಡುವಿನ ಸ್ನೇಹ ಹೊಸದೇನೂ ಅಲ್ಲ. ಸಾವಿರಾರು ಭಾರತೀಯ ಮೂಲದ ಜನರು ಮೊಜಾಂಬಿಕ್ ಅನ್ನು ತಮ್ಮ ಮನೆ ಎಂದು ಕರೆದಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ವಾಸಿಸುವ ಸಿದ್ಧಿ ಜನಾಂಗದವರ ಪೂರ್ವಜರು ಮೊಜಾಂಬಿಕ್ ನವರು ಎಂದು ನಾನು ಕೇಳಲ್ಪಟ್ಟಿದ್ದೇನೆ. ಈ ಸಮುದಾಯಗಳು ಹಲವಾರು ವರ್ಷಗಳಿಂದ ನಮ್ಮ ಜನರನ್ನು ಮತ್ತು ಅವರ ಸಂಸ್ಕೃತಿ, ವಾಣಿಜ್ಯ ಮತ್ತು ಸಂಪ್ರದಾಯದಲ್ಲಿ ಬೆಸೆದಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಘನತೆವೆತ್ತರೆ, ನಮ್ಮ ಎರಡೂ ದೇಶಗಳು ವಸಾಹತು ಆಳ್ವಿಕೆಯಲ್ಲಿ ನಲುಗಿವೆ. ಮೊಜಾಂಬಿಕ್ ವಿಚಾರದಲ್ಲಿ ಹೋರಾಟ ಬಹು ದೀರ್ಘವಾದುದಾಗಿದೆ. ಸ್ವತಂತ್ರ ಭಾರತವು ಮೊಜಾಂಬಿಕ್ ನ್ನು ವಸಾಹತು ಆಡಳಿತದಿಂದ ಸ್ವತಂತ್ರಗೊಳಿಸಲು ವಕಾಲತ್ತು ವಹಿಸಿದವರಲ್ಲಿ ಭಾರತವೂ ಪ್ರಮುಖವಾಗುತ್ತದೆ. ಮೊಜಾಂಬಿಕ್ 1975ರಲ್ಲಿ ಮುಕ್ತ ರಾಷ್ಟ್ರಗಳ ಶ್ರೇಣಿಯಲ್ಲಿ ಸೇರಿದ್ದನ್ನು ಕಂಡು ನಾವು ಹೆಮ್ಮೆಪಟ್ಟಿದ್ದೇವೆ.

ಮತ್ತು ಇಂದು, ಇತ್ತೀಚಿನ ದಶಕದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಮೊಜಾಂಬಿಕ್ ಕೂಡ ಒಂದೆಂದು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಘನತೆವೆತ್ತರೇ, ಅಭಿವೃದ್ಧಿಶೀಲ ರಾಷ್ಟ್ರಗಳಾಗಿ ನಾವಿಬ್ಬರೂ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಅಭಿವೃದ್ಧಿ ಮತ್ತು ಆರ್ಥಿಕ ಪಾಲುದಾರಿಕೆ, ನಮ್ಮ ಬಾಂಧವ್ಯದ ಅವಶ್ಯಕ ಭಾಗವಾಗಿದೆ.

ನಮ್ಮ ವಾಣಿಜ್ಯ ಮತ್ತು ಹೂಡಿಕೆ ಬಾಂಧವ್ಯ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಅಭಿವೃದ್ಧಿ ಸಾಧಿಸಿವೆ. ನಾವು ಇದರ ಮೇಲೆ ಮತ್ತಷ್ಟು ಬಾಂಧವ್ಯ ನಿರ್ಮಿಸಲು ಬಯಸುತ್ತೇವೆ. ಇದಕ್ಕಾಗಿ ಭಾರತ ಸದಾ ಸಿದ್ಧ ಮತ್ತು ತನ್ನ ಅನುಭವ, ತಂತ್ರಜ್ಞಾನ, ಸಾಮರ್ಥ್ಯ ಹಂಚಿಕೊಳ್ಳಲು ಬದ್ದವಾಗಿದೆ ಮತ್ತು ನಿಮ್ಮ ಆದ್ಯತೆಗಳಿಗೆ ಅನುಗುಣವಾಗಿ ಮೊಜಾಂಬಿಕ್ ನೊಂದಿಗೆ ರಿಯಾಯಿತಿಯ ಕ್ರೆಡಿಟ್ ಬಯಸುತ್ತದೆ.

ಕಳೆದ ವರ್ಷ ಮೊಜಾಂಬಿಕ್ 40ನೇ ಸ್ವತಂತ್ರೋತ್ಸವ ಮತ್ತು ನಮ್ಮ ರಾಜತಾಂತ್ರಿಕ ಬಾಂಧವ್ಯವನ್ನು ಆಚರಿಸಿತು. ಅದು ನಮ್ಮ ರಾಷ್ಟ್ರದೊಂದಿಗೆ ಹಿಂದೆಂದೂ ಕಾಣದಂತ ಒಂದು ಮಟ್ಟದ ಸಂವಾದವನ್ನೂ ಕಂಡಿತು. ಇದರ ಅತ್ಯುನ್ನತ ಬಿಂದು, ಆಗಸ್ಟ್ 2015ರಲ್ಲಿ ತಮ್ಮ ಭಾರತದ ಭೇಟಿಯಾಗಿದೆ. ತದನಂತರ ನಿಮ್ಮ ಪ್ರಧಾನಮಂತ್ರಿಯವರು ಭಾರತ- ಆಫ್ರಿಕ ವೇದಿಕೆಯ ಶೃಂಗದ ಮೂರನೇ ಆವೃತ್ತಿಯಲ್ಲಿ ಹಾಜರಿದ್ದು ನಮಗೆ ಗೌರವ ನೀಡಿದ್ದಾರೆ. ಘನತೆವೆತ್ತರೆ, ಕಳೆದ 34 ವರ್ಷಗಳಲ್ಲಿ ಮೊಜಾಂಬಿಕ್ ಗೆ ಭೇಟಿ ನೀಡುತ್ತಿರುವ ಪ್ರಥಮ ಭಾರತದ ಪ್ರಧಾನಿ ನಾನು ಎಂಬುದು ನನಗೆ ತಿಳಿದಿದೆ. ಈ ಅಂತರ ಇಷ್ಟು ದೀರ್ಘವಾಗಿರಬಾರದು. ಮತ್ತು ಭವಿಷ್ಯದಲ್ಲಿ ಹೀಗಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.

ಈ ಮಾತುಗಳೊಂದಿಗೆ, ಘನತೆವೆತ್ತರೇ, ಮಾನ್ಯರೇ ಮತ್ತು ಮಹಿಳೆಯರೇ, ಟೋಸ್ಟ್ ಸೇರಿಸುವಲ್ಲಿ ನೀವೂ ನಮ್ಮೊಂದಿಗೆ ಸೇರಿರಿ:

· ಘನತೆವೆತ್ತ ಅಧ್ಯಕ್ಷ ಫಿಲಿಪಿ ಜಕಿಂಟೂ ನೈಯುಸಿ ಅವರ ಆರೋಗ್ಯ, ಸಂತೋಷ ಮತ್ತು ಒಳಿತಿಗಾಗಿ;

· ಮೊಜಾಂಬಿಕ್ ಜನರಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿ ಸದಾ ನೆಲೆಸಲು; ಮತ್ತು

· ಭಾರತ ಮತ್ತು ಮೊಜಾಂಬಿಕ್ ನಡುವೆ ಬಲವಾದ ಸ್ನೇಹ ಸಂಬಂಧ ಮತ್ತು ಸಹಕಾರಕ್ಕಾಗಿ.