Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುಕೆ ಅಂತಾರಾಷ್ಟ್ರೀಯ ಅಭಿವೃದ್ಧಿಯ ವಿದೇಶಾಂಗ ಕಾರ್ಯದರ್ಶಿ, ಎಂಪಿ ಪ್ರೀತಿ ಪಟೇಲ್ ರಿಂದ ಪ್ರಧಾನಿ ಭೇಟಿ

ಯುಕೆ ಅಂತಾರಾಷ್ಟ್ರೀಯ ಅಭಿವೃದ್ಧಿಯ ವಿದೇಶಾಂಗ ಕಾರ್ಯದರ್ಶಿ, ಎಂಪಿ ಪ್ರೀತಿ ಪಟೇಲ್ ರಿಂದ ಪ್ರಧಾನಿ ಭೇಟಿ


ಯುಕೆಯ ಅಂತಾರಾಷ್ಟ್ರೀಯ ಅಭಿವೃದ್ಧಿಯ ವಿದೇಶಾಂಗ ಕಾರ್ಯದರ್ಶಿ, ಎಂಪಿ ಶ್ರೀಮತಿ ಪ್ರೀತಿ ಪಟೇಲ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಅಂತಾರಾಷ್ಟ್ರೀಯ ಅಭಿವೃದ್ಧಿಯ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವುದಕ್ಕೆ ಶ್ರೀಮತಿ ಪಟೇಲ್ ಅವರಿಗೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ಪಟೇಲ್ ಅವರು ತಮ್ಮ ಹಿಂದಿನ ಕರ್ತವ್ಯಗಳಲ್ಲಿ ಭಾರತದೊಂದಿಗೆ ದೀರ್ಘ ಸಂಪರ್ಕ ಹೊಂದಿದ್ದರು ಮತ್ತು ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಸ್ಮರಿಸಿದರು.

ಕಳೆದ ವರ್ಷ ನವೆಂಬರ್ ನಲ್ಲಿ ತಾವು ಯು.ಕೆ.ಗೆ ನೀಡಿದ ಯಶಸ್ವೀ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಮ್ಮ ಭೇಟಿಯ ಫಲಶ್ರುತಿಯ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಮತಿ ಪಟೇಲ್ ಅವರು ಪ್ರಧಾನಮಂತ್ರಿಯವರಿಗೆ, ಭಾರತದಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿಯ ಮುಂದಿನ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶ್ರೀಮತಿ ಪಟೇಲ್ ಕೌಶಲ ವರ್ಧನೆ, ಮೂಲಸೌಕರ್ಯದಲ್ಲಿ ಆರ್ಥಿಕ ನೆರವು, ನಾವಿನ್ಯತೆ, ಇಂಧನ ಮತ್ತು ಸುಲಭವಾಗಿ ವಾಣಿಜ್ಯ ನಡೆಸುವುದೂ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದರು.