ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟವು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮತ್ತು ಸಿವಿಲ್ ಸರ್ವಿಸ್ ಕೌನ್ಸಿಲ್ ಆಫ್ ಮಂಗೋಲಿಯಾ (ಸಿ.ಎಸ್.ಸಿ.ಎಂ) ನಡುವಿನ ಒಡಂಬಡಿಕೆಯನ್ನು ಅನುಮೋದಿಸಿದೆ.
ಈ ಒಡಂಬಡಿಕೆ ಸಿ ಎಸ್ ಸಿ ಎಂ ಮತ್ತು ಯುಪಿಎಸ್ಸಿ ನಡುವಿನ ಪ್ರಸ್ತುತ ಸಂಬಂಧವನ್ನು ಬಲಪಡಿಸುತ್ತದೆ. ಇದು ನೇಮಕಾತಿ ವಲಯದಲ್ಲಿ ಎರಡೂ ಪಕ್ಷಗಳ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡಲಿದೆ.