ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಟುನೇಷಿಯಾ ನಡುವೆ ಯುವ ವ್ಯವಹಾರಗಳ ಕ್ಷೇತ್ರದ ಸಹಕಾರದ ಉತ್ತೇಜನಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರಿಸಲಾಯಿತು. ಈ ಎಂ.ಓ.ಯು.ಗೆ ದೆಹಲಿಯಲ್ಲಿ 30-10-2017ರಂದು ಅಂಕಿತ ಹಾಕಲಾಗಿತ್ತು.
ಭಾರತೀಯ ಯುವಕರ ನಡುವೆ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಮೂಡಿಸುವುದು, ಕಲ್ಪನೆಗಳು, ಮೌಲ್ಯಗಳು ಮತ್ತು ಸಂಸ್ಕೃತಿಯ ವಿನಿಮಯ ಉತ್ತೇಜನ ಮತ್ತು ಶಾಂತಿ ಮತ್ತು ತಿಳಿವಳಿಕೆಯನ್ನು ಉತ್ತೇಜಿಸಲು ಅವರನ್ನು ತೊಡಗಿಸಿಕೊಳ್ಳುವುದುಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.
ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಅವಧಿವರೆಗೆ ಇರುತ್ತದೆ. ಈ ಎಂ.ಓ.ಯು. ಅಡಿಯಲ್ಲಿನ ಸಹಕಾರ ಕ್ಷೇತ್ರಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
iii. ಮುದ್ರಿತ ವಸ್ತುಗಳು, ಚಲನಚಿತ್ರ, ಅನುಭವ, ಸಂಶೋಧನೆ ಮತ್ತು ಇತರ ಮಾಹಿತಿಯ ವಿನಿಮಯ;
***