Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯು.ಎಸ್. ಮಾಜಿ ಅಧ್ಯಕ್ಷ ಶ್ರೀ ಜಾರ್ಜ್ ಹೆಚ್. ಡಬ್ಲ್ಯೂ. ಬುಷ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಯು .ಎಸ್ ನ ಮಾಜಿ ಅಧ್ಯಕ್ಷ ಶ್ರೀ ಜಾರ್ಜ್ ಹೆಚ್. ಡಬ್ಲ್ಯೂ. ಬುಷ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ಯು.ಎಸ್ ನ ಮಾಜಿ ಅಧ್ಯಕ್ಷ ಶ್ರೀ ಜಾರ್ಜ್ ಹೆಚ್. ಡಬ್ಲ್ಯೂ. ಬುಷ್ ಅವರ ನಿಧನಕ್ಕೆ ಬುಷ್ ಕುಟುಂಬಕ್ಕೆ ಮತ್ತು ಅಮೇರಿಕಾದ ಜನತೆಗೆ ಸಂತಾಪ ಸೂಚಿಸುತ್ತೇನೆ. ಜಾಗತಿಕ ಇತಿಹಾಸದ ಸಂಕ್ರಮಣ ಕಾಲಘಟ್ಟದಲ್ಲಿ ಅವರೊಬ್ಬ ಧೀಮಂತ ರಾಷ್ಟ್ರನಾಯಕರಾಗಿದ್ದರು.

ಮಾಜಿ ಯು. ಎಸ್. ಅಧ್ಯಕ್ಷ ಶ್ರೀ ಜಾರ್ಜ್ ಹೆಚ್. ಡಬ್ಲ್ಯೂ. ಬುಷ್ ಅವರು ಭಾರತ ಮತ್ತು ಯು.ಎಸ್.ಎ ನಡುವೆ ಸದೃಢ ಸಂಬಂಧವನ್ನು ಸದಾ ಬಯಸಿದ್ದರು. ಅವರ ಸಾನಿಧ್ಯವನ್ನು ಬಹಳವಾಗಿ ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ.” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***