Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯೊಗೋದ ಸತ್ಸಂಗ ಮಠದ 100ನೇ ವರ್ಷಾಚರಣೆ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಬಿಡುಗಡೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

ಯೊಗೋದ ಸತ್ಸಂಗ ಮಠದ 100ನೇ ವರ್ಷಾಚರಣೆ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಬಿಡುಗಡೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

ಯೊಗೋದ ಸತ್ಸಂಗ ಮಠದ 100ನೇ ವರ್ಷಾಚರಣೆ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಬಿಡುಗಡೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ


ಯೋಗಿ ಕುಟುಂಬದ ಎಲ್ಲ ಗೌರವಾನ್ವಿತ ಸದಸ್ಯರೇ, ಇಂದು ಮಾರ್ಚ್ 7; ಸರಿಯಾಗಿ 65 ವರ್ಷಗಳ ಹಿಂದೆ ಇದೇ ದಿನ ಮಹಾನುಭಾವ ಯೋಗಾನಂದ ಅವರ ಶರೀರ ನಮ್ಮೊಂದಿಗಿತ್ತು, ಆದರೆ ಆ ಶರೀರದಲ್ಲಿದ್ದ ಆತ್ಮ ಹೊರಬಂದು ಯುಗದ ನಂಬಿಕೆಯಾಗಿ ಮಾರ್ಪಟ್ಟಿತ್ತು.

ಇಂದು ನಾನು ಈ ವಿಶಿಷ್ಠ ಸಮಾರಂಭದಲ್ಲಿ, ಶ್ರೀ. ಶ್ರೀ. ಮಾತಾಜಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಅವರು ಲಾಸ್ ಏಂಜಲೀಸ್ ನಲ್ಲಿ ಇದೇ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ನಾನು ಕೇಳಲ್ಪಟ್ಟೆ.

ಸ್ವಾಮೀಜಿ ಅವರು ಹೇಳಿದಂತೆ, ಜಗತ್ತಿನಲ್ಲಿರುವ 95ರಷ್ಟು ಜನರು, ಯೋಗಿ ಅವರ ಆತ್ಮಕಥೆಯನ್ನು ಅವರದೇ ಮಾತೃಭಾಷೆಯಲ್ಲಿ ಓದಬಹುದಾಗಿದೆ. ಆದರೆ, ಒಂದು ವಿಷಯ ನನ್ನನ್ನು ಹೆಚ್ಚು ಕಾಡುತ್ತದೆ, ಈ ದೇಶದ ಬಗ್ಗೆ ಏನೂ ತಿಳಿಯದ, ಇದರ ಭಾಷೆ ಅರಿಯದವರಿಗೆ ಯೋಗಿ ಅವರ ಬಗ್ಗೆ ಓದಲು ಹೇಗೆ ಕೌತುಕ ಮೂಡುತ್ತದೆ, ಅದಕ್ಕೆ ಏನು ಕಾರಣ. ಇತರ ಜನರಿಗೂ ಮುಟ್ಟಿಸಲು ಅವರ ಚಿಂತನೆಗಳನ್ನು ಒಬ್ಬರು ಏಕೆ ಅವರ ಭಾಷೆಗೆ ತರ್ಜುಮೆ ಮಾಡುತ್ತಾರೆ ಇದಕ್ಕೆ ಕಾರಣ ಏನು. ಇದು ಈ ಆಧ್ಯಾತ್ಮಿಕ ಮಹಾನುಭಾವರ ಅನುಭೂತಿಯಾಗಿದೆ. ಪ್ರತಿಯೊಬ್ಬರೂ ದೇವಾಲಯಗಳಿಗೆ ಹೋದಾಗ ಚಿಂತಿಸುತ್ತಾರೆ ನಾನೂ ಕೂಡ ಸ್ವಲ್ಪ ಪ್ರಸಾದ ಹಂಚೋಣ ಎಂದು. ನಾವು ಮನೆಗೆ ಪ್ರಸಾದ ತೆಗೆದುಕೊಂಡು ಹೋದ ಬಳಿಕವೂ, ಅದರಲ್ಲಿ ಚೂರು ಚೂರು ಪ್ರಸಾದವನ್ನು ಸಾಧ್ಯವಾದಷ್ಟು ಹಂಚುತ್ತೇವೆ. ಪ್ರಸಾದ ನನ್ನದಲ್ಲ, ನಾನು ಅದನ್ನು ತಯಾರಿಸಿಲ್ಲ, ಆದರೆ ಅದು ಪವಿತ್ರವಾದ್ದು, ಇದನ್ನು ಹಂಚುವುದರಿಂದ ನನಗೆ ತೃಪ್ತಿ ದೊರಕುತ್ತದೆ ಎಂದು ಚಿಂತಿಸುತ್ತಾರೆ.

ಯೋಗಿ ಅವರು ಏನು ಈ ಜಗತ್ತಿಗೆ ಕೊಡುಗೆ ನೀಡಿದ್ದಾರೋ, ಅದನ್ನು ಪ್ರಸಾದ ರೂಪದಲ್ಲಿ ನಾವು ಹಂಚುತ್ತಾ ಹೋಗುತ್ತಿದ್ದೇವೆ ಮತ್ತು ಆಧ್ಮಾತ್ಮೀಕ ಅನುಭೂತಿ ಪಡೆಯುತ್ತಿದ್ದೇವೆ. ಇಲ್ಲಿ ಮುಕ್ತಿ ಮಾರ್ಗದ ಬಗ್ಗೆ ಚರ್ಚೆ ನಡೆಯುತ್ತಿದೆ, ಕೆಲವರು ಯೋಚಿಸುತ್ತಾರೆ, ಭವಿಷ್ಯ ಯಾರಿಗೆ ಗೊತ್ತು ಎಂದು. ಆದರೆ, ಯೋಗಿ ಅವರ ಪೂರ್ಣ ಪಯಣ, ಮುಕ್ತಿಯ ಮಾರ್ಗ ತೋರುವುದಷ್ಟೇ ಆಗಿರಲಿಲ್ಲ, ಜೊತೆಗೆ, ಅದು ಅಂತರ್ಯಾತ್ರೆಯ ಚರ್ಚೆ ಇದೆ. ನೀವು ಎಷ್ಟು ಆಳಕ್ಕೆ ಹೋಗುತ್ತೀರೋ ಅಷ್ಟು ಪಡೆಯುತ್ತೀರಿ. ಆಧ್ಯಾತ್ಮಿಕತೆ ಎಂಬುದು ಅವಿರತ, ಅನಂತ ಮಂಗಳಯಾತ್ರೆ. ಈ ಯಾತ್ರೆಯನ್ನು ನಮ್ಮ ಋಷಿ, ಮುನಿಗಳ, ವಿದ್ವಾಂಸರ, ಆಚಾರ್ಯರು ಸೂಕ್ತವಾಗಿ ನಡೆಸಲು ದೊಡ್ಡ ಕೊಡುಗೆ ನೀಡಿದ್ದಾರೆ. ಕಾಲಾನು ಕಾಲಕ್ಕೆ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ.

ಯೋಗಿ ಅವರು ಬದುಕಿದ್ದೆ ಅತ್ಯಲ್ಪ ಕಾಲ, ಇದಕ್ಕೆ ಆಧ್ಯಾತ್ಮಿಕ ಸಂಕೇತ ಇದ್ದಿರಲೂ ಬಹುದು. ಯೋಗಿ ಅವರು ಹಠಯೋಗದ ಧನಾತ್ಮಕ ಅಂಶಗಳನ್ನು ತರ್ಕಬದ್ಧರೂಪದಲ್ಲಿ ಪ್ರತಿಪಾದಿಸಿದರು ಜೊತೆಗೆ ಎಲ್ಲರನ್ನೂ ಕ್ರಿಯಾಯೋಗದ ಕಡೆಗೆ ಪ್ರೇರಣೆ ನೀಡುತ್ತಿದ್ದರು. ನಾನು ಒಪ್ಪುತ್ತೇನೆ, ಎಲ್ಲ ಸ್ವರೂಪದ ಯೋಗಗಳಲ್ಲಿ, ಕ್ರಿಯಾ ಯೋಗಕ್ಕೆ ವಿಶೇಷ ಸ್ಥಾನವಿದೆ. ಅದು ನಮ್ಮೊಳಗಿನ ಪ್ರಯಾಣಕ್ಕೆ ಆತ್ಮಬಲದ ಶಕ್ತಿ ತುಂಬುತ್ತದೆ. ಕೆಲವು ಯೋಗಗಳು ಶರೀರಕ್ಕೆ ಉಪಯುಕ್ತ, ಆದರೆ ಕ್ರಿಯಾ ಯೋಗಕ್ಕೆ ಆತ್ಮಬಲದ ಅಗತ್ಯವಿದೆ. ಜೀವನದ ಉದ್ದೇಶ ಏನು. ಕೆಲವರಿಗೆ ಮಾತ್ರವೇ ಅಂತಹ ಉದ್ದೇಶ ಇರುತ್ತದೆ. ಯೋಗಿ ಅವರು ಹೇಳುತ್ತಿದ್ದರು, ನಾನು ಆಸ್ಪತ್ರೆಯ ಹಾಸಿಗೆಯ ಮೇಲೆ ಕೊನೆಯುಸಿರೆಳೆಯಲು ಇಚ್ಛಿಸುವುದಿಲ್ಲ. ನಾನು ಪ್ರತಿಕ್ಷಣವೂ ನನ್ನ ಮಾತೃಭೂಮಿಯನ್ನು ಸ್ಮರಿಸುತ್ತಾ ನನ್ನ ಅಂತಿಮ ಕಾಲವನ್ನು ನೋಡ ಬಯಸುತ್ತೇನೆ ಎನ್ನುತ್ತಿದ್ದರು. ಅವರು ಭಾರತಕ್ಕೆ ವಂದಿಸುತ್ತಾ, ಪಾಶ್ಚಿಮಾತ್ಯ ಜಗತ್ತಿಗೆ ಸಂದೇಶವನ್ನು ಸಾರಲು ತೆರಳಿದ್ದರು. ಆದರೆ, ಅವರು ಎಂದಿಗೂ ಒಂದು ಕ್ಷಣವೂ ಅವರು ಭಾರತ ಮಾತೆಯಿಂದ ದೂರವಾಗಿರಲಿಲ್ಲ.

ನಾನು ನಿನ್ನೆ ಕಾಶಿಯಲ್ಲಿದ್ದೆ, ಬನಾರಸ್ ನಿಂದ ರಾತ್ರಿ ಆಗಮಿಸಿದೆ ಮತ್ತು ಯೋಗಿ ಅವರ ಆತ್ಮಕಥೆಯನ್ನು ಓದುತ್ತಿದ್ದೆ. ಅವರು ಗೋರಖ್ಪುರದಲ್ಲಿ ಜನ್ಮ ತಾಳಿದರು. ಅವರು ಬನಾರಸ್ ನಲ್ಲಿ ತಮ್ಮ ಬಾಲ್ಯ ಕಳೆದರು, ಅಲ್ಲಿಯೇ ಅವರು ತಾಯಿ ಗಂಗೆಯ ಸ್ಪರ್ಶದಿಂದ ಆ ಪವಿತ್ರ ನಗರಿಯ ಸಂಪ್ರದಾಯಗಳೊಂದಿಗೆ ಚಿರಪರಿಚಿತರಾಗಿದ್ದರು. ಈ ನಂಟು ಅವರನ್ನು ಬಾಲ್ಯವನ್ನು ಸಜ್ಜುಗೊಳಿಸಿತು. ಹೀಗಾಗೇ ಅವರು ಗಂಗೆಯ ಪವಿತ್ರ ಧಾರೆಯಂತೆ ಪ್ರವಹಿಸಿದರು. ಇಂದಿಗೂ ಅದು ನಮ್ಮ ಹೃದಯದಲ್ಲಿ ಪ್ರವಹಿಸುತ್ತಿದೆ. ಅವರು ದೇಹತ್ಯಾಗ ಮಾಡುವತನಕ ಆಧ್ಯಾತ್ಮಿಕವಾಗಿ ಸಕ್ರಿಯರಾಗಿದ್ದರು. ಭಾರತದ ರಾಯಭಾರಿಗೆ ಸನ್ಮಾನ ನಡೆಯುತ್ತಿದ್ದ ಸಮಾರಂಭದಲ್ಲಿ ಅವರು ಪ್ರವಚನ ನೀಡುತ್ತಿದ್ದರು. ಹಠಾತ್ ಅವರು ಅಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದರು. ಅವರು ಹೇಳಿದ ಕೊನೆಯ ಮಾತುಗಳು ದೇಶಭಕ್ತಿ ಮತ್ತು ಮಾನವತೆ. ಆಧ್ಯಾತ್ಮಿಕತೆಯ ಅಂತಿಮ ಗಮ್ಯದ ಬಗ್ಗೆ ಅವರು ನೀಡಿರುವ ಅದ್ಭುತ ವಿವರಣೆಯೇ ಅಧಿಕೃತ ಕಾರ್ಯಕ್ರಮದಲ್ಲಿ ನೀಡಿದ ಅವರ ಅಂತಿಮ ಮಾತುಗಳಾಗಿವೆ. ಯೋಗಿಜಿ ಅವರು ತಮ್ಮ ಸ್ಥಳದ ಬಗ್ಗೆ ಮಾತನಾಡುತ್ತಾರೆ, ಎಲ್ಲಿ, ಗಂಗಾ, ಅರಣ್ಯ, ಹಿಮಾಲಯ, ಗುಹೆಗಳು ಮತ್ತು ಮನುಕುಲ ಭಗವಂತನ ಕನಸು ಕಾಣುತ್ತವೆಯೋ ಅದುವೇ ತಮ್ಮ ತಾಯ್ನಾಡು. ನೀವು ಇದರಲ್ಲಿ ಅವರ ಕಲ್ಪನೆಯ ವಿಸ್ತಾರವನ್ನು ನೀವು ಕಾಣಬಹುದು. ನಾನು ಇಂಥ ಮಾತೃಭೂಮಿಯಲ್ಲಿ ಜನಿಸಿದ್ದಕ್ಕೆ ನಾನು ಧನ್ಯ. ಇದುವೇ ಅವರ ಶರೀರದಿಂದ ಹೊರ ಬಂದ ಕೊನೆಯ ಮಾತುಗಳು. ಆಗ ಅವರ ಆತ್ಮ ಅನಂತದಲ್ಲಿ ಲೀನವಾಯಿತು. ಆದಿ ಶಂಕರಾಚಾರ್ಯರು ಅದ್ವೈತದ ತತ್ವವನ್ನು ಬೋಧಿಸಿದರು, ಎಲ್ಲಿ ಎರಡಿಲ್ಲವೋ ಅದುವೇ ದ್ವೈತ. ದೇವರು ನನ್ನಲ್ಲೇ ಇದ್ದಾನೆ (ಆತ್ಮ) ಇದುವೇ ಅದ್ವೈತ. ಒಟ್ಟಾರೆ ಅಹಂ ಬ್ರಾಹ್ಮಾಸ್ಮಿ. ಆದಿ ಶಂಕರಾಚಾರ್ಯರ ಪ್ರಕಾರ ಎಂದಿಗೂ ಬದಲಾಗದ ಕಾಯ ಬ್ರಹ್ಮ ಮಾತ್ರ , ಅದುವೇ ಸತ್ಯ. ಎಲ್ಲಿ ನಾನು, ಅವನು ಇಬ್ಬರೂ ಇದ್ದಾರೆ ಎಂಬುದನ್ನು ಅವರು ಒಪ್ಪುವುದಿಲ್ಲ. ಭಗವಂತ (ಬ್ರಹ್ಮ) ನನ್ನಲ್ಲೇ ಇದ್ದಾನೆ, ನಾನು ದೇವರಲ್ಲೂ ಇದ್ದೇನೆ – ಇದುವೇ ಅದ್ವೈತ. ಯೋಗಿ ಅವರು ಕೂಡ ಇದನ್ನು ತಮ್ಮ ಗೀತೆಯಲ್ಲಿ ಬರೆದಿದ್ದಾರೆ. ನಾನು ಅದನ್ನು ಬರೆದಿರುವ ಸ್ವರೂಪದಲ್ಲಿಯೇ ನಿಖರವಾಗಿ ವಿವರಿಸಲು ಸಾಧ್ಯವಿಲ್ಲ. ಆದರೆ ಈ ಸಾಲುಗಳನ್ನು ಓದಿದಾಗ ನಂತರ ಅದರ ವ್ಯಾಖ್ಯಾನ ಮಾಡಿದಾಗ, ನನಗೆ ಇದು ಅದ್ವೈತತತ್ವಕ್ಕೆ ತೀರಾ ಹತ್ತಿರವಾಗಿದೆ ಎನಿಸಿತು. ಯೋಗೀಜಿ ಹೇಳುತ್ತಾರೆ : ಬ್ರಹ್ಮ ನನ್ನೊಳಗೆ ಸಮಾಗಮವಾಗಿದ್ದಾನೆ., ನಾನು ಬ್ರಹ್ಮನಲ್ಲಿ ಸಮಾಗಮಗೊಂಡಿದ್ದೇನೆ. ಇದು ಅದ್ವೈತ ಸಿದ್ಧಾಂತದ ಸರಳ ಸ್ವರೂಪ ‘ಜ್ಞಾನ, ಘಾತ ಮತ್ತು ಅನ್ವೇಷಿ ಎಲ್ಲವೂ ಒಂದಾಗಿದೆ. ಅದೇ ರೀತಿ ಕರ್ತ ಮತ್ತು ಕರ್ಮ ಒಂದಾದರೆ, ಸಿದ್ಧಿ ಸಹಜವಾಗಿ ಹೋಗುತ್ತದೆ. ಕರ್ತನಿಗೆ ಕ್ರಿಯಾ ಕಾಯುವುದಿಲ್ಲ. ಕರ್ತ ಮತ್ತು ಕರ್ಮ ಒಂದೇ ರೂಪ ಆಗುತ್ತದೆ. ಸಿದ್ಧಿಯ ಅನುಪಮ ಅವಸ್ಥೆ ರೂಪುಗೊಳ್ಳುತ್ತದೆ.

ಯೋಗೀಜಿ ಅವರು, ಮುಂದುವರಿದೂ ಹೇಳುತ್ತಾರೆ, ಶಾಂತಿ, ಅಖಂಡ, ರೋಮಾಂಚಕತೆ, ಶಾಂತಿ, ಅಖಂಡ, ರೋಮಾಂಚಕತೆಗಾಗಿ ಜೀವನ, ನೀತಿ, ನಿತ್ಯ ನೂತನ ಶಾಂತಿ. ನಿತ್ಯ ನವೀನ ಶಾಂತಿ ಪಡೆಯಬೇಕು. ಅಂದರೆ, ನಾಳೆಯ ಶಾಂತಿ ಇಂದು ಕೆಲಸಕ್ಕೆ ಬರುವುದಿಲ್ಲ. ಇಂದು ನನಗೆ ನಿತ್ಯ, ನೂತನ, ನವೀನ ಶಾಂತಿ ಬೇಕು. ಮತ್ತು ಇದಕ್ಕಾಗಿ ಇಲ್ಲಿ, ಸ್ವಾಮೀಜಿ ಅವರು, ಅಂತಿಮವಾಗಿ ಶಬ್ದದಲ್ಲಿ ಹೇಳಿದ್ದು “ ಓಂ ಶಾಂತಿ ಶಾಂತಿ’’ ಇದು ಶಿಷ್ಟಾಚಾರವಲ್ಲ, ಆದರೆ, ಬಹುದಿನಗಳ ತಪಸ್ಸಿನ ನಂತರ ದೊರಕುವ ಪರಿಣಿತಿಯ ಫಲ. ಆದಾದ ಬಳಿಕವಷ್ಟೇ ಈ ಸಾಲು ಓಂ ಶಾಂತಿ ಶಾಂತಿ ಬರಲು ಸಾಧ್ಯ. ಸಮಸ್ತ ಆಸೆ, ಕಲ್ಪನೆಯೊಂದಿಗೆ ಆನಂದ ನೀಡುವ ಸಮಾಧಿಯೇ ಪರಮಾನಂದ. ಯೋಗೀಜಿ ಅವರು ಇದನ್ನು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ. ಇಷ್ಟು ಸರಳವಾಗಿ ಹೇಳಿದ್ದಾರೆಂದರೆ ಅವರು ಜೀವನವನ್ನು ಗಾಳಿಯಂತೆ ಭಾವಿಸಿದ್ದಾರೆ. ನಾವು ಪ್ರಾಣವಾಯು ಇಲ್ಲದೆ ಬದುಕಲು ಸಾಧ್ಯವಿಲ್ಲ. ಗಾಳಿ ಎಲ್ಲೆಡೆ ಎಲ್ಲ ಕಾಲದಲ್ಲೂ ಇರುತ್ತದೆ. ನಾವು ಕೈ ತೋರಿಸಿದರೆ ಗಾಳಿ ನಿಲ್ಲುವುದಿಲ್ಲ. ಅದು ಎಂದಿಗೂ ನಿಲ್ಲು ಎಂದು ಹೇಳುವುದಿಲ್ಲ, ತನ್ನ ಸಾಗಾಟಕ್ಕೆ ಜಾಗವನ್ನೂ ಕೇಳುವುದಿಲ್ಲ. ಅದೇ ರೀತಿ ಯೋಗಿಜೀ ಅವರು ನಮ್ಮೊಂದಿಗೆ ನಮ್ಮ ಸುತ್ತಮುತ್ತ ಅವರ ಅಸ್ತಿತ್ವವನ್ನು ರೂಪಿಸಿದ್ದಾರೆ. ನಮಗೆ ಅದರ ಅನುಭವ ಆಗುತ್ತಿರುತ್ತದೆ ಆದರೆ ತಡೆ ಇರುವುದಿಲ್ಲ. ಅವರು ಚಿಂತಿಸುತ್ತಿದ್ದರು, ಈ ಹುಡುಗ ಇಂದು ಈ ಗುರಿ ಸಾಧಿಸಲು ಆಗಿಲ್ಲ. ಪರವಾಗಿಲ್ಲ, ನಾಳೆ ಮಾಡುತ್ತಾರೆ. ಈ ರೀತಿಯಾದ ಶಾಂತಸ್ವಭಾವ ಮತ್ತು ತಾಳ್ಮೆಯನ್ನು ಬಹಳ ಕಡಿಮೆ ಪರಂಪರೆಯಲ್ಲಿ ಕಾಣುಲು ಸಾಧ್ಯ. ಯೋಗೀಜೀ ಅವರು, ವ್ಯವಸ್ಥೆಗೆ ಎಂಥ ನಮ್ಯತೆಯನ್ನು ನೀಡಿದರು ಎಂದರೆ, ಅವರು ಸ್ಥಾಪಿಸಿದ ಸಂಸ್ಥೆಗೆ ಇಂದು ಶತಾಬ್ದಿ ಆಗಿದೆ. ಅದು ಒಂದು ಆಂದೋಲನವಾಗಿ ಮಾರ್ಪಟ್ಟಿದೆ. ಆಧ್ಯಾತ್ಮಿಕ ಚೇತನದ ನಿರಂತರ ಅವಸ್ಥೆಯಾಗಿದೆ. ಇಲ್ಲಿಯವರೆಗೆ ನಾಲ್ಕು ಪೀಳಿಗೆಗಲು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂರು ಪೀಳಿಗೆಕಳೆದಿದೆ ಆದರೆ ಈವರೆಗೆ ಅದರಲ್ಲಿ ಯಾವುದೇ ಭ್ರಮೆ ಅಥವಾ ತಿರುವುಗಳು ಅಲ್ಲಿ ಕಂಡುಬಂದಿಲ್ಲ. ಆ ಸಂಸ್ಥಿಕ ಮೋಹವಿದ್ದಿದ್ದರೆ ಅಥವಾ ವ್ಯವಸ್ಥಾ ಕೇಂದ್ರಿತ ಪ್ರಕ್ರಿಯೆ ಇದ್ದಿದ್ದರೆ ವ್ಯಕ್ತಿಯ ವಿಚಾರ, ಸಮಯ, ಪ್ರಭಾವ ಇದೆಲ್ಲದರ ಮೇಲೆ ಪ್ರಭಾವ ಆಗುತ್ತಿತ್ತು. ಆದರೆ, ಆಂದೋಲನ ಕಾಲಾತೀತವಾದರೆ, ಅದಕ್ಕೆ ಕಾಲದ ಬಂಧನವಿಲ್ಲದಿದ್ದರೆ, ಎಷ್ಟೇ ಪೀಳಿಗೆ ಬಂದರೂ, ವ್ಯವಸ್ಥೆಯಲ್ಲಿ ಯಾವುದೇ ಅಡ್ಡಿ ಆಗುವುದಿಲ್ಲ, ಅದು ನಿರಂತರವಾಗಿ ಉತ್ತಮ ಕಾರ್ಯ ನಡೆಯುತ್ತಿರುತ್ತದೆ. ಯೋಗೀಜಿ ಅಂಥ ಒಂದು ವ್ಯವಸ್ಥೆಯನ್ನು ನಮಗೆ ನೀಡಿ ಹೋಗಿದ್ದಾರೆ. ಅದರಲ್ಲಿ ಯಾವುದೇ ಬಂಧನವಿಲ್ಲ. ಪರಿವಾರಕ್ಕೆ ಯಾವುದೇ ಬಂಧನವಿಲ್ಲ. ಆದರೂ ನಡೆಯುತ್ತಿದೆ. ಯೋಗೀಜಿ ಎಂಥ ಕೊಡುಗೆ ನೀಡಿದ್ದಾರೆ. ಇಂಥ ಒಂದು ವ್ಯವಸ್ಥೆ ರೂಪಿಸಿದ್ದಾರೆ ಎಂದರೆ ಅದು ಸಹಜ ರೂಪದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಅವರು ವಿದೇಶಕ್ಕೆ ಹೋದ ಬಳಿಕವೂ ಅದು ನಡೆಯುತ್ತಿತ್ತು. ಆದರೆ ಇಂದು ಅವರ ಆತ್ಮದ ಪ್ರಭಾವದಿಂದ ನಾವು ಇದನ್ನು ನಡೆಸುತ್ತಲೇ ಇದ್ದೇವೆ. ಇದೊಂದು ಬಹು ದೊಡ್ಡ ಕೊಡುಗೆ ಎಂದು ನಾನು ಭಾವಿಸುತ್ತೇನೆ. ಜಗತ್ತು ಇಂದು ಆರ್ಥಿಕತೆಯಿಂದ, ತಂತ್ರಜ್ಞಾನದಿಂದ ಪ್ರಭಾವಿತವಾಗಿದೆ. ಜಗತ್ತಿನಲ್ಲಿ ಯಾವ ರೀತಿಯ ಅರಿವಿದೆ. ಆ ಪ್ರಕಾರವಾಗಿ ವಿಶ್ವವನ್ನು ತೂಗುತ್ತದೆ. ನನ್ನ ವಿಚಾರಕ್ಕೆ ಅನುಗುಣವಾಗಿ ನಾನು ನಿಮ್ಮನ್ನು ತೂಗುತ್ತೇನೆ. ನನ್ನ ಆಲೋಚನೆ ಬೇರೆಯಾಗಿದ್ದರೆ ನಿಮ್ಮ ಬಗ್ಗೆ ನಾನು ಬೇರೆಯದೇ ಯೋಚಿಸುತ್ತೇನೆ. ಇದು ಯೋಚಿಸುವವ ಸಾಮರ್ಥ್ಯ, ಸ್ವಭಾವ ಮತ್ತು ಆ ಸಮಯದ ಪರಿಣಾಮವಾಗಿರುತ್ತದೆ. ವಿಶ್ವ ದೃಷ್ಟಿಯಲ್ಲಿ ಕೂಡ ಭಾರತವನ್ನು ಅಳೆಯಲಾಗಿದೆ, ಅದು ಜನಸಂಖ್ಯೆಯ ಮೇಲೆ ಆಗಬಹುದು, ಜಿಡಿಪಿಯ ಸಂದರ್ಭದಲ್ಲಿ ಆಗಬಹುದು. ಉದ್ಯೋಗ, ನಿರುದ್ಯೋಗದ ಸಂದರ್ಭದಲ್ಲಿ ಆಗಬಹುದು, ವಿಶ್ವಕ್ಕೆ ತನ್ನದೇ ಆದ ಮಾನದಂಡಗಳು ಇರುತ್ತವೆ. ಆದಾಗ್ಯೂ, ಈ ವಿಶ್ವವು, ಭಾರತವನ್ನು ಸರಿಯಾಗಿ ಪರಿಚಯ ಮಾಡಿಕೊಂಡೇ ಇಲ್ಲ. ಭಾರತಕ್ಕೆ ಮತ್ತೂ ಒಂದು ವಿಶೇಷ ಮಾನದಂಡವಿದೆ. ಅದು ಭಾರತದ ಶಕ್ತಿಯಾಗಿದೆ. ಅದುವೇ ಆಧ್ಯಾತ್ಮಿಕತೆ. ದೇಶದ ದೌರ್ಭಾಗ್ಯ ಎಂದರೆ, ಈ ದೇಶದಲ್ಲಿ ಕೆಲವರು, ಆಧ್ಯಾತ್ಮಿಕತೆ ಮತ್ತು ಧರ್ಮ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಜಾತಿ, ಧರ್ಮ, ಮತ, ಸಂಪ್ರದಾಯಕ್ಕಿಂದ ಆಧ್ಯಾತ್ಮ ಬೇರೆಯದೇ ಆಗಿದೆ. ನಮ್ಮ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪದೇ ಪದೇ ಹೇಳುತ್ತಿದ್ದರು, ಆಧ್ಯಾತ್ಮಿಕತೆಯೇ ಭಾರತದ ತಾಕತ್ತು ಮತ್ತು ಇದು ಮುಂದುವರಿಯಬೇಕು ಎಂದು. ನಮ್ಮ ಋಷಿಗಳು ಮತ್ತು ಮುನಿಗಳು ಈ ಆಧ್ಯಾತ್ಮಿಕತೆಯನ್ನು ನಿರಂತರವಾಗಿ ಜಾಗತಿಕವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ನನ್ನ ಪ್ರಕಾರ ಇದಕ್ಕೆ ಯೋಗ ಅತಿ ಸುಲಭವಾದ ಪ್ರವೇಶ ದ್ವಾರ ಎಂದು ನನಗೆ ಅನಿಸುತ್ತದೆ. ಜಗತ್ತಿಗೆ ಆತ್ಮವತ್ ಸರ್ವಭೂತೇಷು ಎಂದು ಬೋಧಿಸಿದರೆ ಅರ್ಥ ಆಗುವುದಿಲ್ಲ. ಎಲ್ಲಿ ತಿನ್ನದೋ, ಕುಡಿಯೋದು ಮತ್ತು ಮದುವೆ ಮಾತು ನಡೆಯುತ್ತದೋ ಅಲ್ಲಿ, ತೇನ ತಖ್ತೇನ ಭುಂಜಿತ ಎಂದು ಹೇಳಿದರೆ ಕಂಠಶೋಷಣೆ ಆಗತ್ತೆ.

ಆದರೆ, ಯಾರಿಗಾದರೂ ನಿರ್ದಿಷ್ಟ ಭಂಗಿಯಲ್ಲಿ ಕುಳಿತು, ತಮ್ಮ ಮೂಗನ್ನು ಹೀಗೆ ಹಿಡುದುಕೊಳ್ಳಿ ನಿರಾಳವಾಗುತ್ತದೆ ಎಂದರೆ ಅವರು ಹಾಗೆ ಮಾಡುತ್ತಾರೆ. ಇದು ಯೋಗ, ಇದು ನಮ್ಮ ಆಧ್ಯಾತ್ಮಿಕ ಪಯಣದ ಪ್ರವೇಶ ಕೂಡ. ಇದನ್ನು ಅಂತಿಮ ಎಂದು ಪರಿಗಣಿಸಬಾರದು. ದೌರ್ಭಾಗ್ಯ ಎಂದರೆ, ಹಣವೇ ಪ್ರಧಾನ ಶಕ್ತಿಯಾಗಿದೆ. ಹೀಗಾಗಿ ಅಲ್ಲಿಯೂ ವಾಣಿಜ್ಯೀಕರಣ ಕಾಣುತ್ತಿದ್ದೇವೆ. ಇಂತಿಷ್ಟು ಡಾಲರ್ ಗೆ ಇಂಥ ಸಮಾಧಿ ಸ್ಥಿತಿ ದೊರಕುತ್ತದೆ ಎನ್ನುತ್ತಾರೆ. ಕೆಲವರು ಯೋಗವನ್ನೇ ಅಂತಿಮ ಎಂದು ತಿಳಿದಿದ್ದಾರೆ. ಯೋಗವೇ ಅಂತಿಮವಲ್ಲ, ಆದರೆ ಅದು ಎಲ್ಲ ಅಂತಿಮ ಹಂತಕ್ಕೆ ತಲುಪಲು ಪ್ರಥಮ ಪ್ರವೇಶದ್ವಾರವಾಗಿದೆ. ಬೆಟ್ಟವನ್ನು ಹತ್ತುವಾಗ ನಮ್ಮ ವಾಹನ ನಿಂತು ಹೋದರೆ, ಬಲವಾಗಿ ತಳ್ಳುತ್ತೇವೆ. ಒಮ್ಮೆ ಚಾಲೂ ಆದರೆ, ವೇಗವಾಗಿ ಮುನ್ನುಗ್ಗುತ್ತದೆ. ಯೋಗವೂ ಅಷ್ಟೇ. ಅದು ಎಂಥ ಪ್ರವೇಶ ಎಂದರೆ, ಒಂದು ಬಾರಿ ಗತಿ ಹಿಡಿದರೆ, ಅದು ಮುಂದೆ ಸಾಗುತ್ತಲೇ ಇರುತ್ತದೆ. ಬಳಿಕ ಅದಕ್ಕೆ ಯಾವುದೇ ತಡೆ ಇರುವುದಿಲ್ಲ. ಅದು ನಿಮ್ಮನ್ನು ಮುಂದೆ ಸಾಗಲು ಪ್ರೇರೇಪಿಸುತ್ತದೆ ಅದುವೇ ಕ್ರಿಯಾಯೋಗ.

ನಮ್ಮ ದೇಶದಲ್ಲಿ, ಕಾಶಿಯನ್ನು ಸ್ಮರಿಸುವುದು ಸ್ವಾಭಾವಿಕ. ಸಂತರಾದ ಕಬೀರದಾಸ್ ಜೀ ಅವರು ಬಹಳ ಸರಳವಾಗಿ ವಿವರಣೆಯನ್ನು ಉದಾಹರಣೆಯನ್ನು ನೀಡಿದ್ದಾರೆ. ಅವರ ಒಂದು ಸಂದೇಶದಲ್ಲಿ ಹೇಳಿರುವ ಈ ವಾಕ್ಯ ಯೋಗೀಜಿ ಅವರಿಗೆ ಸೂಕ್ತವಾಗಿ ಹೊಂದುತ್ತದೆ. ಕಬೀರರು ಹೇಳುತ್ತಾರೆ: “ಅವಧೂತ, ಯುಗನ ಯುಗನ ಹಮ್ ಯೋಗಿ, ಆವೈ ನ ಜಾಯ್ ಮಿಟೈ ನ ಕಬ್ ಹೂ, ಸಬದ್ ಅನಾಹತ ಭೋಗಿ”. ಕಬೀರ್ ದಾಸ್ ಜೀ ಅವರು ಹೇಳುತ್ತಾರೆ : ಯೋಗಿ ಯುಗಗಳ ಕಾಲ ಇರುತ್ತಾರೆ. ಅವರು ಬರುವುದೂ ಇಲ್ಲ ಹೋಗುವುದೂ ಇಲ್ಲ.. ಅವರು ನಾಶವಾಗುವುದೂ ಇಲ್ಲ. ನಾವು ಇಂದು ಯೋಗಿ ಅವರ ಆತ್ಮ ಸ್ವರೂಪದೊಂದಿಗೆ ನಾವು ಸಹಯಾತ್ರೆ ಕೈಗೊಂಡಿದ್ದೇವೆ. ಹೀಗಾಗಿಯೇ ಕಬೀರರು ಹೇಳುವಂತೆ: “ ಯೋಗಿ ಹೋಗುವುದೂ ಇಲ್ಲ, ಬರುವುದೂ ಇಲ್ಲ, ಅವರು ಸದಾ ನಮ್ಮೊಂದಿಗೇ ಇರುತ್ತಾರೆ.

ಯೋಗಿ ಅವರಿಗೆ ಪ್ರಣಾಮ ಸಲ್ಲಿಸುತ್ತಾ, ನಿಮ್ಮೊಂದಿಗೆ ನನಗೆ ಕೆಲವು ಅಪೂರ್ವ ಕ್ಷಣ ಕಳೆಯುವ ಸೌಭಾಗ್ಯ ದೊರೆತಿದೆ. ಇದಕ್ಕಾಗಿ ನಾನು ಮತ್ತೊಮ್ಮೆ ಯೋಗಿ ಪರಂಪರೆಯ ಎಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸುತ್ತಾ, ಎಲ್ಲ ಸಂತರಿಗೂ ಪ್ರಣಾಮ ಸಲ್ಲಿಸುತ್ತಾ, ಯೋಗಿಯವರ ಆಧ್ಯಾತ್ಮಿಕ ಯಾತ್ರೆಯನ್ನು ಮುಂದುವರಿಸುವ ಪ್ರಯತ್ನ ಮಾಡುವ ಎಲ್ಲ ನಾಗರಿಕರಿಗೂ ಆಧಾರ ಭಾವ ವ್ಯಕ್ತಪಡಿಸುತ್ತಾ ನನ್ನ ಮಾತು ಮುಗಿಸುತ್ತೇನೆ. ಧನ್ಯವಾದ.