Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯೋಗದ ಜಾಗತಿಕ ಪಯಣ ಮತ್ತು ಶಾಶ್ವತ ಪರಂಪರೆಯ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರಾಚೀನ ಗ್ರಂಥಗಳಿಂದ ಹಿಡಿದು ಜಾಗತಿಕ ಮನ್ನಣೆಯವರೆಗೆ ಯೋಗವು, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ಜೊತೆಜೊತೆಗೇ ಗಡಿಗಳನ್ನು ಮೀರಿ ಹೇಗೆ ಸಾಗಿದೆ ಎಂಬುದನ್ನು ಈ ಲೇಖನ ವಿವರಿಸಿದೆ. ಇಂದು ವಿಶ್ವಾದ್ಯಂತ ಯೋಗದ ಆಚರಣೆಯು ಈ ಕಾಲಾತೀತ ಸಂಪ್ರದಾಯದ ನವೀಕೃತ ಮೆಚ್ಚುಗೆಯ ಪ್ರತಿಬಿಂಬವಾಗಿದೆ ಎಂಬುದಾಗಿ ಲೇಖನದಲ್ಲಿ ತಿಳಿಸಲಾಗಿದೆ.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

“ಪ್ರಾಚೀನ ಗ್ರಂಥಗಳಿಂದ ಜಾಗತಿಕ ಮನ್ನಣೆಯವರೆಗೆ, ಯೋಗವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ಜೊತೆಜೊತೆಗೇ ಗಡಿಗಳನ್ನು ಮೀರಿ ಹೇಗೆ ಸಾಗಿದೆ ಎಂಬುದನ್ನು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರಾದ ಶ್ರೀ @mpprataprao ಅವರು ವಿವರಿಸಿದ್ದಾರೆ. ಇಂದು, ವಿಶ್ವಾದ್ಯಂತ ಯೋಗದ ಆಚರಣೆಯು ಈ ಕಾಲಾತೀತ ಸಂಪ್ರದಾಯದ ನವೀಕೃತ ಮೆಚ್ಚುಗೆಯ ಪ್ರತಿಬಿಂಬವಾಗಿದೆ.”

******