Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯೋಗ ಮತ್ತು ಆರೋಗ್ಯಕರ ವಯಸ್ಸಾಗುವಿಕೆ ಕುರಿತ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ಪ್ರತಾಪ್‌ ರಾವ್ ಜಾಧವ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಸದೃಢ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ನಾಗರಿಕರು ಜೀವನದ ಎಲ್ಲಾ ಹಂತಗಳಲ್ಲಿ ಆರೋಗ್ಯವಾಗಿ, ಕ್ರಿಯಾಶೀಲರಾಗಿ ಮತ್ತು ಸಮರ್ಥರಾಗಿರುವುದನ್ನು ಖಾತರಿಪಡಿಸುವ ಅಗತ್ಯವನ್ನು ಈ ಲೇಖನ ವಿವರಿಸಿದೆ. ಭಾರತದ ಕಾಲಾತೀತ ಜ್ಞಾನದಲ್ಲಿ ಬೇರೂರಿರುವ ಯೋಗಾಭ್ಯಾಸವು ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ನೀಡುತ್ತಾ ವಯಸ್ಸಾಗುವಿಕೆಯ ಪ್ರಕ್ರಿಯೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಜೀವಿತಾವಧಿಯ ಒಡನಾಡಿಯಾಗಿದೆ ಎಂದು ಲೇಖನ ಒತ್ತಿ ಹೇಳಿದೆ.

 ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಹೇಳಿದೆ:

“ವಿಶ್ವವು 2026ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ, ಕೇಂದ್ರ ಸಚಿವರಾದ ಶ್ರೀ @mpprataprao  ಅವರು ಸದೃಢ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ನಾಗರಿಕರು ಜೀವನದ ಎಲ್ಲಾ ಹಂತಗಳಲ್ಲಿ ಆರೋಗ್ಯವಾಗಿ, ಕ್ರಿಯಾಶೀಲರಾಗಿ ಮತ್ತು ಸಮರ್ಥರಾಗಿ ಉಳಿಯುವಂತೆ ನೋಡಿಕೊಳ್ಳುವ ಅಗತ್ಯದ ಬಗ್ಗೆ ಬರೆದಿದ್ದಾರೆ.

ಭಾರತದ ಕಾಲಾತೀತ ಜ್ಞಾನದಲ್ಲಿ ಬೇರೂರಿರುವ ಯೋಗಾಭ್ಯಾಸವು ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಒದಗಿಸುತ್ತಾ ಆರೋಗ್ಯಕರವಾಗಿ ವೃದ್ಧಾಪ್ಯದೆಡೆಗೆ ಸಾಗಲು ಬೆಂಬಲ ನೀಡುವ ಜೀವನಪರ್ಯಂತದ ಒಡನಾಡಿಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.”

*****