ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ರಾಜೇಂದ್ರ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ”ದ ಹೆಸರನ್ನು “ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ” ಎಂದು ಬದಲಾವಣೆ ಮಾಡಲು ರಾಜೇಂದ್ರ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ವಿಧೇಯಕ 2015ಕ್ಕೆ ಅಧಿಕೃತ ತಿದ್ದುಪಡಿ ತರಲು ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ.
ಪೂಸಾದಲ್ಲಿರುವ ಡಾ. ರಾಜೇಂದ್ರಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯವು, ಕೃಷಿ ಮತ್ತು ಪೂರಕ ವಿಜ್ಞಾನದಲ್ಲಿ ಶಿಕ್ಷಣ ಪಡೆದ ಮಾನವ ಶಕ್ತಿಯ ಅಗತ್ಯವನ್ನು ಪೂರೈಸಲಿದೆ ಮತ್ತು ಬೋಧನೆಯಲ್ಲಿ ಔನ್ನತ್ಯವನ್ನು ಸಾಧಿಸಲಿದೆ ಹಾಗೂ ಅಪೇಕ್ಷಿತ ಗುರಿಯನ್ನು ಸಾಧಿಸಲಿದೆ. ಇದು ವಲಯದಲ್ಲಿ ಮೀನುಗಾರಿಕೆ ಮತ್ತು ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಕೃಷಿ ಅಭಿವೃದ್ಧಿಗೆ ಕೊಡುಗೆ ನೀಡುವುದರ ಜೊತೆಗೆ ತಾಂತ್ರಿಕ ಮಾನವ ಶಕ್ತಿ ಹಾಗೂ ಮೂಲಸೌಕರ್ಯದ ಕೊರತೆಯನ್ನು ನೀಗಿಸಲಿದೆ. ಹಾಲಿ ಇರುವ ಕಾಲೇಜುಗಳು ರೈತರಿಗೆ ನೂತನ ತಂತ್ರಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು ನೆರವಾಗಲಿವೆ ಆ ಮೂಲಕ ವಲಯದಲ್ಲಿ ಕೃಷಿ ಉತ್ಪಾದನೆಗೆ ಕೊಡುಗೆ ನೀಡಲಿವೆ.