ಪಿಎಂಇಂಡಿಯಾ
ಗೌರವಾನ್ವಿತ ಸಭಾಧ್ಯಕ್ಷರೇ,
ಮಹಿಮಾನ್ವಿತ ಸದನವೇ,
ರಾಜ್ಯಸಭೆಯ ಕಲಾಪಗಳಲ್ಲಿ ಪಾಲ್ಗೊಂಡು ಅನುಭವ ಪಡೆದುಕೊಂಡಿರುವ ಈ ಸದನದ ಕೆಲವು ಸದಸ್ಯರು ಇನ್ನುಮುಂದೆ ಮತ್ತಷ್ಟು ಬಲವಾಗಿ/ತೀವ್ರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ. ಇಂದು ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರ ಪೈಕಿ ಪ್ರತಿಯೊಬ್ಬರೂ ಈ ಸದನದ ಸದಸ್ಯರಾಗಿರುವ ಅವಧಿಯಲ್ಲಿ ದೇಶದ ಭವಿಷ್ಯವನ್ನು ಉಜ್ವಲವಾಗಿಸಲು ತಮ್ಮದೇ ಆದ ಕೊಡುಗೆಯನ್ನಿತ್ತಿದ್ದಾರೆ. ಇವರೆಲ್ಲರಿಗೂ ಅವರವರದೇ ಆದ ಪ್ರಾಮುಖ್ಯತೆ ಇದ್ದು, ಇವರು ನೀಡಿರುವ ಕೊಡುಗೆಗಳನ್ನು ದೇಶವು ಎಂದಿಗೂ ಮರೆಯುವುದಿಲ್ಲ.
ನೀವು ಈ ಸದನದ ಸದಸ್ಯರಾಗಿ ಮಹತ್ತರ ಕೊಡುಗೆ ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನಿಮ್ಮೆಲ್ಲರ ಭವಿಷ್ಯವು ಹಸನಾಗಿರಲಿ ಎಂದು ಹಾರೈಸುತ್ತೇನೆ.
ಈ ಸದನವು ಹಿರಿಯರ ಪಾಲಿಗೆ ಸೇರಿದ್ದಾಗಿದ್ದು, ಈ ಹಿರಿಯರ ಜೀವನಾನುಭವವು ಇದಕ್ಕೊಂದು ಮೆರುಗನ್ನು/ಬೆಲೆಯನ್ನು ತಂದುಕೊಟ್ಟಿದೆ.
ಈ ಹಿರಿಯರ ಸದನದಲ್ಲಿರುವ ಹಿರಿಯ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಸಮಾಜದ ಪಾಲಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎನ್ನುವುದನ್ನು ಅಳೆಯುವ ಶಕ್ತಿಯಿದೆ. ಅದರಲ್ಲೂ ಸಾಮಾಜಿಕ ಜೀವನದ ನಿರೀಕ್ಷೆಗಳನ್ನೂ ಆಕಾಂಕ್ಷೆಗಳನ್ನೂ ಪರಿಗಣನೆಗೆ ತೆಗೆದುಕೊಂಡು, ಇವೆಲ್ಲವನ್ನೂ ಯಾವುದೇ ಪೂರ್ವಗ್ರಹಗಳಿಲ್ಲದೆ ತೀರ್ಮಾನಿಸುವ ಸಾಮರ್ಥ್ಯ ಈ ಸದಸ್ಯರಿಗಿದೆ.
ಹೀಗಾಗಿ, ಈ ಸದನದಲ್ಲಿ ಆಡುವ ಮಾತುಗಳಿಗೆ ವಿಶೇಷವಾದ ಮೌಲ್ಯವಿದೆ, ವಿಶೇಷವಾದ ಪ್ರಾಧಾನ್ಯವಿದೆ. ಇಷ್ಟೇ ಅಲ್ಲದೆ, ಈ ಪ್ರಾಮುಖ್ಯತೆಯು ನಮ್ಮನೀತಿನಿರೂಪಣೆಯಲ್ಲಿ ನಿಜಕ್ಕೂ ತುಂಬಾ ಮಹತ್ತ್ವದ ಪಾತ್ರವನ್ನು ವಹಿಸುತ್ತದೆ.
ನಮ್ಮ ನಡುವೆ ದಿಗ್ಗಜರಾದ ಗೌರವಾನ್ವಿತ ಶ್ರೀ ಪರಶುರಾಮ್ ಅವರಂಥವರಿದ್ದಾರೆ. ಬದುಕಿನಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಿಜಕ್ಕೂ ಆಸೆ-ಆಕಾಂಕ್ಷೆಗಳಿಲ್ಲದ ವಿರಕ್ತರಂತೆ ಬದುಕಿದ್ದಾರೆ. ಇದುವರೆಗೂ ಶ್ರೀ ಪರಶುರಾಮ್ ಅವರಂಥ ದೊಡ್ಡ ವ್ಯಕ್ತಿಗಳು ಈ ಸದನದಲ್ಲಿ ನಮ್ಮೊಂದಿಗಿದ್ದರು. ಇನ್ನುಮುಂದೆ ಈ ಸದನದ ಮೂಲಕ ಅವರ ಪ್ರಯೋಜನ ನಮಗೆ ಸಿಕ್ಕುವುದಿಲ್ಲ.
ಇಂದು ನಿವೃತ್ತರಾಗುತ್ತಿರುವ ಸದಸ್ಯರ ಪೈಕಿ ಇಬ್ಬರು ವ್ಯಕ್ತಿಗಳು ನಿಜಕ್ಕೂ ಇಡೀ ಭಾರತದ ಪಾಲಿಗೇ ಹೆಮ್ಮೆಯೆನಿಸಿದ್ದಾರೆ. ಇವರಾರೆಂದರೆ, ಶ್ರೀ ದಿಲೀಪ್ ಮತ್ತು ಶ್ರೀ ಸಚಿನ್ ಅವರು. ಇನ್ನುಮುಂದೆ ಈ ಇಬ್ಬರು ಆಟಗಾರರು ನಮ್ಮೊಂದಿಗೆ ಈ ಸದನದಲ್ಲಿ ಇರುವುದಿಲ್ಲ ಮತ್ತು ಇವರ ಅನುಭವದ ಲಾಭವನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ.
ಪ್ರೊ.ಕುರಿಯನ್ ಮಹಾಶಯರನ್ನು ನಮ್ಮ ಜನರು ಎಂದಿಗೂ ಮರೆಯುವುದಿಲ್ಲ. ಅವರ ನಗುಮುಖವೇ ಅವರ ದೊಡ್ಡ ಆಸ್ತಿ; ಅದೇ ಅವರ ಅನನ್ಯತೆ. ಯಾವುದೇ ಸಂಗತಿಯನ್ನು ಇನ್ನೊಬ್ಬರಿಗೆ ಹೇಳುವಾಗ ನಗುನಗುತ್ತ ಹೇಳಬೇಕು ಎನ್ನುವುದನ್ನು ನಾವು ಅವರಿಂದ ಕಲಿಯಬೇಕು. ತಮ್ಮ ಈ ಗುಣದ ಮೂಲಕ ಶ್ರೀ ಕುರಿಯನ್ ಅವರು, ಸಂಕಷ್ಟದ ಸಮಯಗಳಲ್ಲೂ ಈ ಸದನವನ್ನು ಸುಗಮವಾಗಿ ನಡೆಸಿಕೊಡುತ್ತಿದ್ದರು.
ನಮ್ಮ ನಡುವೆ ಯಾವುದೇ ಪಕ್ಷದ ಹಿನ್ನೆಲೆಯಿಲ್ಲದ ಅಥವಾ ಯಾವುದೇ ಒಂದು ನಿರ್ದಿಷ್ಟ ಪಕ್ಷದ ಸಿದ್ಧಾಂತದೊಂದಿಗೆ ಸಂಬಂಧ ಹೊಂದದಂಥವರ ಸಂಖ್ಯೆ ತೀರಾ ಕಡಿಮೆ ಎನ್ನುವುದು ಸತ್ಯ ಸಂಗತಿ. ಅಂಥವರ ಸಂಖ್ಯೆ ನಿಜಕ್ಕೂ ತೀರಾ ಕಡಿಮೆಯೇ. ಏಕೆಂದರೆ, ನಮ್ಮಲ್ಲಿ ಹೆಚ್ಚಿನವರೆಲ್ಲ ಒಂದಿಲ್ಲೊಂದು ಬಗೆಯ ಹಿನ್ನೆಲೆಗಳನ್ನು ಹೊಂದಿರುತ್ತೇವೆ ಮತ್ತು ಸಹಜವಾಗಿ ಆ ನಿಲುವುಗಳನ್ನೇ ಸ್ಥಾಪಿಸಲು ಪ್ರಯತ್ನಿಸುತ್ತಿರುತ್ತೇವೆ. ಇದು ಅತ್ಯಂತ ಸಹಜ.
ಆದರೆ, ಸಂಸತ್ತಿನ ಇನ್ನೊಂದು ಸದನವಾದ ಲೋಕಸಭೆಯಲ್ಲಿ ನಡೆಯುವುದೆಲ್ಲವೂ ರಾಜ್ಯಸಭೆಯಲ್ಲೂ ನಡೆಯಲೇಬೇಕೆಂದೇನಿಲ್ಲ ಎನ್ನುವ ನಿರೀಕ್ಷೆಯೂ ನಮ್ಮಲ್ಲಿದೆ. ಹೀಗಾಗಿ, ಈ ಸದನದ ಪ್ರತಿಯೊಬ್ಬ ಸದಸ್ಯರೂ ತಮ್ಮದೇ ಆದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಏಕೆಂದರೆ, ಹಿರಿಯರ ಈ ಸದನಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ.
ರಾಜ್ಯಸಭೆಯ ಸದಸ್ಯರಾಗಿ ಕಟ್ಟಕಡೆಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ನೀವೆಲ್ಲರೂ ದೇಶದ ಹಿತದೃಷ್ಟಿಯಿಂದ ಮುಖ್ಯವೆನಿಸುವಂಥ ಕೆಲವು ಸಂಗತಿಗಳ ಬಗ್ಗೆ ಸದನದಲ್ಲಿ ಮಾತನಾಡಬೇಕು/ಪ್ರಸ್ತಾಪಿಸಬೇಕು ಎಂಬ ಸಿದ್ಧತೆಯೊಂದಿಗೇ ಬಂದಿರುತ್ತೀರಿ ಎಂದುಕೊಂಡಿದ್ದೇನೆ. ಜೊತೆಗೆ, ಸದನದಲ್ಲಿ ಒಂದು ಐತಿಹಾಸಿಕ ಭಾಷಣ ಮಾಡುವ ಮೂಲಕ ನಿವೃತ್ತಿ ಹೊಂದಬೇಕೆಂದು ನೀವು ಅಂದುಕೊಂಡಿದ್ದಿರಬಹುದು. ಏನಾದರೂ ಮಹತ್ತ್ವದ ಕೊಡುಗೆ ನೀಡುವ ಮೂಲಕ, ಗಮನಾರ್ಹವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಸದನಕ್ಕೆ ವಿದಾಯ ಹೇಳುವ ಇಚ್ಛೆ ನಿಮಗಿತ್ತು ಎನಿಸುತ್ತದೆ. ಆದರೆ, ನಿಮ್ಮ ನಿವೃತ್ತಿಯ ಸಮಯದಲ್ಲಿ ಇಂಥದೊಂದು ಅವಕಾಶ ನಿಮಗೆ ಸಿಗಲಿಲ್ಲವೆನ್ನುವುದು ವಾಸ್ತವ. ಇದಕ್ಕೆ ಯಾರೋ ಒಬ್ಬರು ಹೊಣೆಯಲ್ಲ. ನಿಜ ಹೇಳಬೇಕೆಂದರೆ, ನೀವು ಈ ಬಗೆಯಲ್ಲಿ ಈ ಸದನದಿಂದ ನಿವೃತ್ತರಾಗುತ್ತಿರುವುದಕ್ಕೆ ನಾವೆಲ್ಲರೂ ಕಾರಣವಾಗಿದ್ದೇವೆ.
ನೀವು ನಿಮ್ಮ ಈ ನಿವೃತ್ತಿಯ ಕ್ಷಣಗಳಲ್ಲಿ ಅತ್ಯಂತ ಮುಖ್ಯವಾದ ಸಂಗತಿಗಳಿಗೆ ಸಂಬಂಧಿಸಿದಂತೆ ಬಹುಮುಖ್ಯ ಪಾತ್ರ ವಹಿಸುವ ಮೂಲಕ, ನೀವೆಲ್ಲರೂ ನಿಮ್ಮ ಹಿಂದೆ ಒಂದು ಒಳ್ಳೆಯ ಪರಂಪರೆಯನ್ನು ಸ್ಥಾಪಿಸುವುದರೊಂದಿಗೆ ವಿದಾಯ ಹೇಳಿದ್ದಿದ್ದರೆ ನಿಜಕ್ಕೂ ಅದು ಚೆನ್ನಾಗಿರುತ್ತಿತ್ತು. ಜೊತೆಗೆ, ಈ ಮೂಲಕ ನೀವು ನಿಮ್ಮ ವಿಶೇಷ ಹೊಣೆಗಾರಿಕೆಯನ್ನು ಪ್ರದರ್ಶಿಸಿದಂತಾಗುತ್ತಿತ್ತು.
ಆದರೆ, ಸದನದಲ್ಲಿರುವ ಪರಿಸ್ಥಿತಿಯಿಂದಾಗಿ ನಿಮ್ಮ ಪಾಲಿಗೆ ಆ ಸದವಕಾಶ ತಪ್ಪಿಹೋಯಿತು. ಇದೇನೇ ಇರಲಿ, ಸಭಾಧ್ಯಕ್ಷರು ಇಷ್ಟರ ಮಧ್ಯೆಯೂ ಪ್ರತಿಯೊಬ್ಬರನ್ನೂ ಸಮಾಧಾನ ಪಡಿಸಲು ನೋಡಿದರು. ಅಂದರೆ, ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ಅವರು ಪ್ರಯತ್ನಿಸಿದರು. ಈ ವಿಷಯದಲ್ಲಿ ಶ್ರೀಮಾನ್ ವಿಜಯ್ ಅವರೂ ತಮ್ನ ಪ್ರಯತ್ನವನ್ನು ಮಾಡಿದರು.
ಹೀಗಾಗಿ, ಇಂದು ನಿವೃತ್ತರಾಗುತ್ತಿರುವ ಸದಸ್ಯರೆಲ್ಲರೂ ತಮ್ಮ ವಿಚಾರಗಳನ್ನು ಮಂಡಿಸಲು ಸಾಧ್ಯವಾಯಿತು. ಆದರೂ, ಇತಿಹಾಸವು ನಿಮ್ಮನ್ನೂ ಎಂದೆಂದೂ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಅತ್ಯಂತ ಮಹತ್ತ್ವದ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ನೀವು ನಿಮ್ಮ ಕೊಡುಗೆಯನ್ನು ನೀಡಬಹುದಾದ ಅವಕಾಶವನ್ನು ಕಳೆದುಕೊಂಡಿರಿ. ನಿಮ್ಮ ಸದಸ್ಯತ್ವದ ಅವಧಿಯಲ್ಲಿ ನಿಮಗೆ ಇಂಥದೊಂದು ಅವಕಾಶವಿತ್ತು. ಇದನ್ನು ನೀವು ಸ್ವಲ್ಪ ಮಟ್ಟಿಗೆ ಬಳಸಿಕೊಂಡಿರಿ ಎನ್ನುವುದೂ ನಿಜ. ಆದರೆ, ಇತಿಹಾಸವನ್ನು ನಿರ್ಮಿಸುವಂಥ ಕಟ್ಟಕಡೆಯ ಅವಕಾಶವನ್ನು ನೀವು ಕಳೆದುಕೊಂಡಿರಿ ಎನ್ನುವುದು ಸತ್ಯ.
ಮುಂಬರುವ ದಿನಗಳಲ್ಲಿ ಭಾರತದ ಇತಿಹಾಸದಲ್ಲಿ ತ್ರಿವಳಿ ತಲಾಖ್ ವಿಚಾರವು ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸಲಿದೆ. ಈ ಕೆಟ್ಟ ಪದ್ಧತಿಯನ್ನು ರದ್ದುಪಡಿಸುವಂಥ ಮತ್ತು ಇನ್ನೂ ಅನೇಕ ಮಹತ್ತ್ವದ ವಿಚಾರಗಳು ಸದನದ ಮುಂದಿದ್ದವು. ಇವುಗಳ ಬಗ್ಗೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅವಕಾಶ ನಿಮಗಿತ್ತು. ಆದರೆ, ಅದನ್ನು ನೀವು ಕಳೆದುಕೊಂಡಿರಿ. ನಿಮ್ಮ ಪೈಕಿ ರಾಜ್ಯಸಭೆಗೆ ಮರುಆಯ್ಕೆಯಾಗುವವರಿಗೆ
ಆ ಅವಕಾಶ ಸಿಗಲಿದೆ. ಆದರೆ, ಇಂದು ನಿವೃತ್ತರಾಗುತ್ತಿರುವ ಹಲವರು ಆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶದಿಂದ ವಂಚಿತರಾದರು. ಇಂಥ ಚಾರಿತ್ರಿಕ ಅವಕಾಶವನ್ನು ಕಳೆದುಕೊಂಡ ನೀವು ಇವತ್ತಲ್ಲದಿದ್ದರೂ ನಾಳೆ ಇದಕ್ಕಾಗಿ ಕೊರಗುತ್ತೀರಿ ಎನ್ನುವುದನ್ನು ನಾನು ಬಲ್ಲೆ. ಅಂದರೆ, ನಿಮಗೆ ಇನ್ನು ಹತ್ತು ವರ್ಷದ ನಂತರವೋ, ಇಪ್ಪತ್ತು-ಇಪ್ಪತ್ತೈದು ವರುಷಗಳ ನಂತರವೋ ಈ ನೋವು ಖಂಡಿತವಾಗಿಯೂ ಉಂಟಾಗುತ್ತದೆ ಎಂದು ನಾನು ದೃಢವಾಗಿ ಹೇಳಬಲ್ಲೆ. ಇಂಥ ಸಂಗತಿಗಳನ್ನೆಲ್ಲ ನಾವು ಈಗಲೇ ಸಾಧಿಸಿದ್ದರೆ ಅದು ನಿಜಕ್ಕೂ ಚೆನ್ನಾಗಿರುತ್ತಿತ್ತು.
ನಾನು ಮತ್ತೊಮ್ಮೆ ಈ ಸದನದ ಸದಸ್ಯರೆಲ್ಲರಿಗೂ, ಇಂದು ನಿವೃತ್ತರಾಗುತ್ತಿರುವವರೆಲ್ಲರಿಗೂ ನನ್ನ ಹೃತ್ಪೂರ್ವಕ ಹಾರೈಕೆಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರ ಸಹೋದ್ಯೋಗಿಯಾಗಿ ಒಂದು ಸಂಗತಿಯನ್ನು ನಾನು ನಿಮಗೆ ಒತ್ತಿ ಹೇಳಲು ಬಯಸುತ್ತೇನೆ. ಅದೇನೆಂದರೆ, ನೀವು ನಿವೃತ್ತರಾದ ಮಾತ್ರಕ್ಕೆ ಈ ಸದನದ ಬಾಗಿಲು ನಿಮ್ಮ ಪಾಲಿಗೆ ಶಾಶ್ವತವಾಗಿ ಮುಚ್ಚಿಹೋಯಿತು ಎಂದುಕೊಳ್ಳಬೇಡಿ. ಈ ಸದನವು ನಿಮಗಾಗಿ ಸದಾ ತೆರೆದಿರುತ್ತದೆ. ಹಾಗೆಯೇ, ಪ್ರಧಾನಮಂತ್ರಿಗಳ ಕಚೇರಿಯೂ ನಿಮಗಾಗಿ ಸದಾ ತೆರೆದಿರುತ್ತದೆ.
ದೇಶದ ಹಿತಾಸಕ್ತಿಯನ್ನು ಒಳಗೊಂಡಿರುವ ಯಾವುದೇ ವಿಚಾರಗಳು, ಚಿಂತನೆಗಳು, ಆಲೋಚನೆಗಳು ನಿಮಗಿದ್ದಲ್ಲಿ ನಿಮಗೆ ಸದಾ ಸ್ವಾಗತ ಇದ್ದೇಇದೆ. ಜೊತೆಗೆ, ಅಂತಹ ವಿಚಾರಗಳಿಗೆ ನಾನು ಸಂತೋಷದಿಂದ ಕಿವಿಗೊಡುತ್ತೇನೆ. ನಿವೃತ್ತಿಯ ನಂತರ ನೀವು ಎಲ್ಲೇ ಇರಿ, ನೀವು ನೀಡುವ ಒಳ್ಳೆಯ ಸಲಹೆಗಳನ್ನು, ಆಲೋಚನೆಗಳನ್ನು ನಾನು ಖಂಡಿತವಾಗಿಯೂ ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ.
ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತು ಶುಭಕಾಮನೆಗಳು.
****
We bid farewell to some of our MP colleagues in the Rajya Sabha. They have contributed significantly to Parliament and we have all gained from their experience and insight: PM @narendramodi in the Rajya Sabha
— PMO India (@PMOIndia) March 28, 2018
The Rajya Sabha is a distinguished House, with eminent members serving here. This House plays a vital role in our democracy: PM @narendramodi https://t.co/0Tbiv8imV6
— PMO India (@PMOIndia) March 28, 2018
We will always remember the distinguished work of Parasaran Ji. Who can forget the manner in which Professor Kurien has contributed to the Rajya Sabha: PM @narendramodi in the Rajya Sabha
— PMO India (@PMOIndia) March 28, 2018
We will always remember the distinguished work of Parasaran Ji. Who can forget the manner in which Professor Kurien has contributed to the Rajya Sabha: PM @narendramodi in the Rajya Sabha
— PMO India (@PMOIndia) March 28, 2018