ಪಿಎಂಇಂಡಿಯಾ
ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಆಂಧ್ರ ಪ್ರದೇಶದ ಜನರಿಗೂ ಪ್ರಧಾನಿಯವರು ಶುಭ ಕಾಮನೆಗಳನ್ನು ತಿಳಿಸಿದ್ದಾರೆ.
“ತೆಲಂಗಾಣ ರಾಜ್ಯದ ಸಂಸ್ಥಾಪನಾ ದಿನದಂದು, ಈ ಅದ್ಭುತವಾದ ರಾಜ್ಯದ ಜನರಿಗೆ ನನ್ನ ಶುಭ ಕಾಮನೆಗಳು. ತೆಲಂಗಾಣವು ದೇಶದ ಅಭಿವೃದ್ಧಿಗಾಗಿ ಮಹತ್ತರ ಕೊಡುಗೆ ನೀಡುತ್ತಿರುವ ಕಠಿಣ ಪರಿಶ್ರಮಿ ಜನರಿಗೆ ಹೆಸರುವಾಸಿಯಾಗಿದೆ. ತೆಲಂಗಾಣದ ಪ್ರಗತಿಗಾಗಿ ನಾನು ಪ್ರಾರ್ಥಿಸುತ್ತೇನೆ.
ಆಂಧ್ರ ಪ್ರದೇಶದ ನನ್ನ ಸೋದರ, ಸೋದರಿಯರಿಗೆ ಶುಭಾಶಯಗಳು. ವಿಜ್ಞಾನದಿಂದ ಕ್ರೀಡೆಯವರೆಗೆ, ಶಿಕ್ಷಣದಿಂದ ಉದ್ದಿಮೆಯವರೆಗೆ, ಆಂಧ್ರ ಪ್ರದೇಶದ ಕೊಡುಗೆ ಅಪಾರವಾದುದು. ಮುಂಬರುವ ದಿನಗಳಲ್ಲಿ ರಾಜ್ಯವು ಪ್ರಗತಿ ಕಾಣಲಿ” ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.
****
On Telangana’s Statehood Day, my best wishes to the people of this wonderful state. Telangana is known for its hardworking citizens who are making great contributions to our nation’s development. I pray for the progress of Telangana.
— Narendra Modi (@narendramodi) June 2, 2019