ಪಿಎಂಇಂಡಿಯಾ
ಗೌರವಾನ್ವಿತರಾದ ಮಾನ್ಯ ಸಭಾಧ್ಯಕ್ಷರೇ
ಎಲ್ಲಕ್ಕಿಂತ ಮೊದಲಿಗೆ ನಾನು ಹೊಸದಾಗಿ ಉಪ ಸಭಾಪತಿಯಾಗಿ ಆಯ್ಕೆಯಾದ ಶ್ರೀಮಾನ್ ಹರಿವಂಶ ಜೀ ಅವರನ್ನು ಇಡೀಯ ಸದನ ಮತ್ತು ನನ್ನ ಪರವಾಗಿ ಅಭಿನಂದಿಸುತ್ತೇನೆ. ಆರೋಗ್ಯ ಚೇತರಿಸಿಕೊಂಡ ಅರುಣ್ ಜೀ ಕೂಡಾ ನಮ್ಮೊಂದಿಗಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ. ಇಂದು ಆಗಸ್ಟ್ ತಿಂಗಳ 9 ನೇ ದಿನ . ಸ್ವಾತಂತ್ರ್ಯ ಚಳವಳಿಯಲ್ಲಿ ಆಗಸ್ಟ್ ಕ್ರಾಂತಿ ಪ್ರಮುಖ ಮೈಲಿಗಲ್ಲು ಮತ್ತು ಬಾಲಿಯಾ ಜಿಲ್ಲೆ ಆ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 1857 ರ ಸ್ವಾತಂತ್ರ್ಯ ಕದನದಿಂದ ಹಿಡಿದು ಆಗಸ್ಟ್ ಕ್ರಾಂತಿಯವರೆಗೆ ಜೀವತ್ಯಾಗ ಮಾಡುವಲ್ಲಿಯವರೆಗೂ ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಿಯಾ ಮುಂಚೂಣಿಯಲ್ಲಿತ್ತು. ಮಂಗಲ್ ಪಾಂಡೇ ಜೀ ಅಥವಾ ಚಿತ್ತು ಪಾಂಡೇ ಜಿ ಇರಲಿ ಅಥವಾ ಚಂದ್ರ ಶೇಖರ ಜೀ ಅವರ ಸಂಪ್ರದಾಯ ಇರಲಿ ಮತ್ತು ಹರಿವಂಶ ಜೀ ಅವರೂ ಇದೇ ಸರಣಿಯವರು.
ಜಯ ಪ್ರಕಾಶ್ ಜೀ ಅವರ ಗ್ರಾಮದಲ್ಲಿ ಇವರು ಜನಿಸಿದರು. ಮತ್ತು ಇಂದಿನವರೆಗೂ ಅವರು ಆ ಗ್ರಾಮದ ಜೊತೆ ಬೆಸೆದುಕೊಂಡಿದ್ದಾರೆ. ಜಯ ಪ್ರಕಾಶ್ ಜೀ ಅವರ ಕನಸುಗಳನ್ನು ಅನುಷ್ಟಾನಕ್ಕೆ ತರಲು ಸ್ಥಾಪಿಸಲಾದ ಪ್ರತಿಷ್ಟಾನದಲ್ಲಿ ಅವರು ಟ್ರಸ್ಟೀಯಾಗಿ ಕೆಲಸ ಮಾಡುತ್ತಿದ್ದಾರೆ.
ತಮಗಾಗಿ ವಿಶೇಷ ಗುರುತಿಸುವಿಕೆಯನ್ನು ರೂಪಿಸಿಕೊಂಡ ಮೆಲು ಮಾತಿನ, ಸೂಕ್ಷ್ಮ ಸಂವೇದನೆಯ ಸಂಪ್ರದಾಯಕ್ಕೆ ಸೇರಿದವರು ಹರಿವಂಶ ಜೀ ಅವರು . ಅವರು ಬನಾರಾಸಿನ ವಿದ್ಯಾರ್ಥಿಯಾಗಿದ್ದರು ಎಂಬುದೂ ನನ್ನ ಸಂತೋಷಕ್ಕೆ ಇನ್ನೊಂದು ಕಾರಣ. ಅವರು ಬನಾರಾಸಿನಲ್ಲಿ ಶಿಕ್ಷಣ ಪಡೆದರು.ಅವರು ಬನಾರಾಸಿನಲ್ಲಿಯೇ ಅರ್ಥ ಶಾಸ್ತ್ರದಲ್ಲಿ ಎಂ.ಎ. ಪಡೆದರು. ಮತ್ತು ಅವರು ರಿಸರ್ವ್ ಬ್ಯಾಂಕಿಗೆ ಆಯ್ಕೆಯಾಗಿದ್ದರು. ಆದರೆ ಅವರು ರಿಸರ್ವ್ ಬ್ಯಾಂಕಿಗೆ ಸೇರಲಿಲ್ಲ, ಬದಲು ಆ ಬಳಿಕ ಅವರು ತಮ್ಮ ಮನೆಯ ಪರಿಸ್ಥಿತಿಯಿಂದಾಗಿ ರಾಷ್ಟ್ರೀಕೃತ ಬ್ಯಾಂಕ್ ಸೇರಿದರು.
ಮಾನ್ಯ ಅಧ್ಯಕ್ಷರೇ,
ಅವರು ಹೈದರಾಬಾದಿನಲ್ಲಿ ಅವರ ಜೀವನದ ಮಹತ್ವಪೂರ್ಣವಾದ ಎರಡು ವರ್ಷ ಕೆಲಸ ಮಾಡಿದ್ದರು ಎಂಬುದನ್ನು ತಿಳಿದರೆ ತಾವು ಹರ್ಷಿಸುತ್ತೀರಿ. ಅವರು ಮುಂಬಯಿ, ಹೈದರಾಬಾದ್ , ದಿಲ್ಲಿಯಂತಹ ಹಲವು ಸ್ಥಳಗಳಲ್ಲಿ ಕೆಲಸ ಮಾಡಿದ್ದರು. ಆದಾಗ್ಯೂ ಅವರು ಆ ಹೊಳೆಯುವ ಮಹಾನಗರಗಳ ಪ್ರಭಾವಕ್ಕೆ ಒಳಗಾಗಲಿಲ್ಲ. ಅವರು ರವಿವಾರ್ ಸುದ್ದಿ ಪತ್ರಿಕೆಯಲ್ಲಿ ಕೆಲಸ ಮಾಡಲು ಕಲ್ಕತ್ತಾಗೆ ತೆರಳಿದರು. ನಮ್ಮೆಲ್ಲರಿಗೂ ತಿಳಿದಿರುವಂತೆ ಎಸ್. ಪಿ.ಸಿಂಗ್ ಓರ್ವ ದಿಗ್ಗಜ ಇದ್ದಂತೆ. ಅವರು ಟೆಲಿವಿಶನ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದವರು. ಅವರು ಎಸ್.ಪಿ.ಸಿಂಗ್ ಜೊತೆ ಕೆಲಸ ಮಾಡಿದರು. ಮತ್ತು ಅವರು ತರಬೇತಿ ಪತ್ರಕರ್ತರಾಗಿ ಧರ್ಮವೀರ ಭಾರತಿ ಅವರ ಜೊತೆಗೂ ಕೆಲಸ ಮಾಡಿದ್ದರು. ಅವರು ಅವರ ಜೀವನವನ್ನು ಅಲ್ಲಿಂದ ಆರಂಭಿಸಿದರು. ಅವರು ಧರ್ಮ ಯುಗದಲ್ಲಿಯೂ ಬಾಂಧವ್ಯದ ಭಾವನೆಯಿಂದ ಕೆಲಸ ಮಾಡಿದ್ದರು.
ಅವರು ಚಂದ್ರಶೇಖರ ಜೀ ಅವರ ನಿಕಟವರ್ತಿ ಮತ್ತು ವಿಶ್ವಾಸದ ವ್ಯಕ್ತಿಯಾಗಿದ್ದರು. ಮತ್ತು ಅವರು ಹೊಂದಿದ್ದ ಅಧಿಕಾರ ಸ್ಥಾನಗಳ ಮೌಲ್ಯ ಮತ್ತು ಘನತೆಯನ್ನು ಎತ್ತಿ ಹಿಡಿದ ವ್ಯಕ್ತಿ. ಚಂದ್ರಶೇಖರಜೀ ಅವರ ತಂಡದಲ್ಲಿ ಅವರು ಹೊಂದಿದ್ದ ಸ್ಥಾನ ಬಲದಿಂದಾಗಿ ಅವರಿಗೆ ಎಲ್ಲಾ ಮಾಹಿತಿಗಳೂ ಲಭ್ಯವಾಗುತ್ತಿದ್ದವು. ಚಂದ್ರಶೇಖರಜೀ ಅವರು ರಾಜೀನಾಮೆ ಕೊಡುವ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಇತ್ತು. ಅವರು ಒಂದು ಸುದ್ದಿಪತ್ರಿಕೆಯ ಜೊತೆ ಗುರುತಿಸಿಕೊಂಡಿದ್ದರು.ಅವರು ಪತ್ರಿಕೋದ್ಯಮ ಲೋಕದ ಜೊತೆ ಅಂಟಿಕೊಂಡಿದ್ದರು.ಆದಾಗ್ಯೂ ಅವರು ಚಂದ್ರಶೇಖರಜೀ ಅವರು ರಾಜೀನಾಮೆ ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂಬ ಸುಳಿವನ್ನೂ ತಮ್ಮದೇ ಪತ್ರಿಕೆಗೂ ತಿಳಿಸಿರಲಿಲ್ಲ. ತಮ್ಮ ಅಧಿಕಾರ ಸ್ಥಾನದ ಘನತೆಯನ್ನು ಕಾಪಾಡುವುದಕ್ಕಾಗಿ ಅವರು ಆ ಗೌಪ್ಯವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ತಮ್ಮದೇ ಪತ್ರಿಕೆ ಶ್ಲ್ಯಾಘನೆಗೆ ಪಾತ್ರವಾಗುವ ಸಂಭವ ಇದ್ದಾಗಲೂ ಅವರು ಆ ಸುದ್ದಿ ಪ್ರಕಟಗೊಳಿಸುವುದಕ್ಕೆ ಹೋಗಲಿಲ್ಲ.
ಹರಿವಂಶ ಜೀ ಅವರು ಬಿಹಾರದ ರವಿವಾರ್ ಪತ್ರಿಕೆಗೆ ಸೇರಿದ್ದರು. ಅಂದು ಬಿಹಾರ ಅವಿಭಜಿತ ಬಿಹಾರವಾಗಿತ್ತು. ಜಾರ್ಖಂಡವನ್ನು ಆ ಬಳಿಕ ರಚಿಸಲಾಯಿತು. ಅವರು ಪ್ರಭಾತ್ ಖಬರ್ ಸೇರಲು ರಾಂಚಿಗೆ ತೆರಳಿದರು. ಮತ್ತು ಅವರು ಆ ಪತ್ರಿಕೆಗೆ ಸೇರುವಾಗ ಪ್ರಸಾರ ಸಂಖ್ಯೆ ಬರೇ 400 ಇತ್ತು. ಅವರು ಬ್ಯಾಂಕಿಂಗ್ ವಲಯಕ್ಕೆ ಹೋಗಿದ್ದರೆ ಅವರಿಗೆ ಅಪಾರವಾದ ಅವಕಾಶಗಳು ಸಿಗುತ್ತಿದ್ದವು. ಆದರೆ ಅವರು ಪ್ರತಿಭಾಪೂರ್ಣ ವ್ಯಕ್ತಿಯಾಗಿದ್ದರು ಮತ್ತು ಅವರು ಬರೇ 400 ಪ್ರತಿಗಳ ಪ್ರಸಾರ ಸಂಖ್ಯೆ ಇದ್ದ ಪತ್ರಿಕೆಗೆ ಸೇರಿದರು ಮತ್ತು ಅದಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರ ನಾಲ್ಕು ದಶಕಗಳಷ್ಟು ಧೀರ್ಘ ಪತ್ರಿಕೋದ್ಯಮ ಉದ್ಯೋಗ ಶಕ್ತಿಶಾಲೀ ಪತ್ರಿಕೋದ್ಯಮ ಮತ್ತು ಸಮಾಜಕ್ಕೆ ಅದರ ಬದ್ದತೆಯನ್ನು ಪ್ರತಿಫಲಿಸುತ್ತದೆ. ಅದು ಅಧಿಕಾರದಲ್ಲಿರುವವರ ಪರವಾಗಿರಲಿಲ್ಲ.
ಮತ್ತು ನಾನು ನಂಬುತ್ತೇನೆ, ಹರಿವಂಶ ಜೀ ಅವರ ಆಯ್ಕೆಯ ಹಿಂದೆ ಅವರು ಪತ್ರಿಕೋದ್ಯಮದ ಜೊತೆ ಗುರುತಿಸಿಕೊಂಡಿರುವ ಮತ್ತು ಅದರಲ್ಲಿ ಸಾಮಾಜಿಕ ಕಾಳಜಿಯ ಧೋರಣೆಯನ್ನು ಅನುಸರಿಸಿರುವ ಅವರ ಬದ್ದತೆ ಕಾರ್ಯಾಚರಿಸಿದೆ ಎಂಬುದಾಗಿ.
ಅವರು ಪತ್ರಿಕೆಯನ್ನು ಜನಾಂದೋಲನ ಎಂಬಂತೆ ನಡೆಸುತ್ತಿದ್ದರು. ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ಪಡೆದ ಆಲ್ಬರ್ಟ್ ಎಕ್ಕಾ ದೇಶಕ್ಕಾಗಿ ಹುತಾತ್ಮರಾದಾಗ ಸುದ್ದಿ ಪತ್ರಿಕೆಯೊಂದು ಅವರ ಪತ್ನಿ ಅತ್ಯಂತ ಕಷ್ತ್ಟದ ಬದುಕನ್ನು ನಡೆಸುತ್ತಿರುವ ಬಗ್ಗೆ ಸುದ್ದಿ ಪ್ರಕಟಿಸಿತ್ತು. ಅದು ಇಪ್ಪತ್ತು ವರ್ಷಗಳ ಹಿಂದೆ. ಹರಿವಂಶ ಜೀ ಅವರು ಜವಾಬ್ದಾರಿ ಹೊತ್ತುಕೊಂಡರು. ಅವರು ಜನರಿಂದ ಹಣ ಸಂಗ್ರಹಿಸಿದರು. ಅವರು ನಾಲ್ಕು ಲಕ್ಷ ರೂ. ಸಂಗ್ರಹಿಸಿ ಆ ಹುತಾತ್ಮನ ವಿಧವೆಗೆ ನೀಡಿದರು.
ಒಮ್ಮೆ, ನಕ್ಸಲರು ಗೌರವಾನ್ವಿತ ವ್ಯಕ್ತಿಯನ್ನು ಅಪಹರಿಸಿದ್ದರು. ಹರಿವಂಶ ಜೀ ಅವರು ತಮ್ಮ ಸುದ್ದಿ ಪತ್ರಿಕೆಯ ಮೂಲಕ ಲಭ್ಯ ಇರುವ ಮೂಲಗಳನ್ನೆಲ್ಲ ಹುಡುಕಿ , ಅದರಿಂದ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ ಧೈರ್ಯದಿಂದ ನಕ್ಸಲ್ ಪ್ರದೇಶಕ್ಕೆ ಹೋದರು. ಅವರು ನಕ್ಸಲರ ಮನಒಲಿಸಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿಸಿದರು. ಅವರು ಇದಕ್ಕಾಗಿ ತಮ್ಮ ಜೀವನದ ಮೇಲೆಯೇ ಅಪಾಯ ಎಳೆದುಕೊಂಡಿದ್ದರು.
ಹೀಗೆ ಅವರ ವ್ಯಕ್ತಿತ್ವ. ಅವರು ಅತ್ಯುತ್ತಮ ಓದುಗರು, ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಕರ್ತರ ಮೇಲುಸ್ತುವಾರಿ ಮಾಡಿಕೊಂಡು ಪತ್ರಿಕೆಯನು ನಡೆಸುವುದು ಸುಲಭ ಎಂಬುದು ನನ್ನ ನಂಬಿಕೆ. ಆದರೆ ಆ ವ್ಯಕ್ತಿ ಸಾಮಾಜಿಕ ಕಾರ್ಯಕ್ಕಾಗಿ ಮತ್ತು ಸಮಾಜಕ್ಕಾಗಿ ದುಡಿಯುವ ಧೋರಣೆಯನ್ನು ಅಳವಡಿಸಿಕೊಂಡಾಗ ಅದು ಬೇರೆಯೇ ಅನುಭವ ಒದಗಿಸುತ್ತದೆ. ಮತ್ತು ಆಡಳಿತ ನಡೆಸುವವರ ಜೊತೆ ಕೆಲಸ ಮಾಡುವ ಅನುಭವ ಭಿನ್ನವಾದುದು.
ನೀವು ಸಂಸತ್ ಸದಸ್ಯರಾಗಿ ಪ್ರತಿಯೊಬ್ಬರಿಗೂ ಯಶಸ್ವೀ ಆಡಳಿತ ಒದಗಿಸಿದ ಅನುಭವ ಹೊಂದಿದ್ದೀರಿ. ಸದನದಲ್ಲಿ ಬಹುತೇಕ ಸಂಧರ್ಭಗಳಲ್ಲಿ ಆಟಗಾರರು ಸಂಕಷ್ಟ ಎದುರಿಸುವುದಕ್ಕಿಂತ ಅಂಪೈರುಗಳೇ ಹೆಚ್ಚು ತೊಂದರೆ ಎದುರಿಸುವಂತಿರುತ್ತದೆ. ಆದ್ದರಿಂದ ಇದು ದೊಡ್ಡ ಕೆಲಸ. ಪ್ರತಿಯೊಬ್ಬರೂ ನಿಯಮಗಳ ಅನ್ವಯ ಇರಬೇಕು ಮತ್ತು ಅವುಗಳನ್ನು ಅನುಸರಿಸುವಂತೆ ಮಾಡುವುದು ಸವಾಲಿನ ಕೆಲಸ. ಆದರೆ, ಹರಿವಂಶ ಜೀ ಅವರು ಇದನ್ನು ಮಾಡಲು ಖಂಡಿತವಾಗಿ ಸಮರ್ಥರು.
ಹರಿವಂಶ ಜೀ ಅವರ ಪತ್ನಿ ಶ್ರೀಮತಿ ಆಶಾ ಜೀ ಅವರು ಚಂಪಾರಣ್ ನವರು. ಈ ರೀತಿಯಲ್ಲಿ ಇಡೀಯ ಕುಟುಂಬವೇ ಒಂದಲ್ಲ ಒಂದು ರೀತಿಯಲ್ಲಿ ಜೆ.ಪಿ. ಅವರ ಜತೆ ಸಂಪರ್ಕ ಹೊಂದಿದೆ. ಗಾಂಧೀಜಿ ಅವರ ಜೊತೆಗೂ ಸಂಪರ್ಕ ಹೊಂದಿದೆ. ಮತ್ತು ಆಕೆ ರಾಜಕೀಯ ಕ್ಷೇತ್ರದಲ್ಲಿ ಎಂ.ಎ. ಪದವೀಧರೆ, ಆಕೆಯ ಶೈಕ್ಷಣಿಕ ಜ್ಞಾನ ನಿಮಗೆ ಹೆಚ್ಚು ಪ್ರಯೋಜನಕ್ಕೆ ಬರಬಹುದು.
ಸಂಸತ್ತಿನಲ್ಲಿರುವ ನಮ್ಮೆಲ್ಲರಿಗೂ ದೇವರ (ಹರಿ) ಕೃಪೆ ಇದೆ. ಇದು ಸದನದಲ್ಲೊಂದು ಮಂತ್ರವಾಗಿ ಅನುರಣಿಸುತ್ತದೆ ಎಂಬುದಾಗಿ ನಾನು ನಂಬುತ್ತೇನೆ. ಈಗ ಪ್ರತೀಯೊಬ್ಬರೂ ಹರಿ (ಹರಿವಂಶ ಜೀ ) ಯನ್ನು ಅವಲಂಬಿಸಿದ್ದಾರೆ. ನಾವೆಲ್ಲರೂ, ಈ ಬದಿಯವರು, ಮತ್ತು ಆ ಬದಿಯವರು ಸೇರಿದಂತೆ ಎಲ್ಲಾ ಸಂಸತ್ ಸದಸ್ಯರರಿಗೂ ನಿಮ್ಮ ಬೆಂಬಲ ಇರುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.
ಎರಡೂ ಕಡೆಯ ಅಭ್ಯರ್ಥಿಗಳ ಹೆಸರಿನಲ್ಲೂ ’ಹರಿ” ಎಂಬ ಪದ ಅಡಕವಾಗಿರುವವರು ಅಭ್ಯರ್ಥಿಯಾಗಿ ಸ್ಪರ್ಧಿಸಿದ ಚುನಾವಣೆ ಇದು. ಓರ್ವರ ಹೆಸರಿನ ಪೂರ್ವಾಕ್ಷರಗಳಲ್ಲಿ ಬಿ.ಕೆ. ಎಂದಿದ್ದು ಅವರ ಹೆಸರು ಬಿ.ಕೆ. ಹರಿ ಎಂಬುದಾಗಿತ್ತು. ಇವರ ಹೆಸರಿನ ಹಿಂದೆ ಬಿ.ಕೆ.ಎಂದಾಗಲೀ ವಿ.ಕೆ. ಎಂದಾಗಲೀ ಪೂರ್ವಾಕ್ಷರಗಳಾಗಲೀ, ಉತ್ತರಾಕ್ಷರಗಳಾಗಲೀ ಇರಲಿಲ್ಲ.
ಪ್ರಜಾಪ್ರಭುತ್ವದ ಘನತೆಯ ಜವಾಬ್ದಾರಿಯನ್ನು ಈಡೇರಿಸಿದ್ದಕ್ಕಾಗಿ ನಾನು ಬಿ.ಕೆ. ಹರಿಪ್ರಸಾದ ಜೀ ಅವರನ್ನು ಅಭಿನಂದಿಸುತ್ತೇನೆ. ಮತ್ತು ಪ್ರತೀಯೊಬ್ಬರೂ ಹೇಳುತ್ತಿದ್ದರು, ಫಲಿತಾಂಶ ತಮಗೆ ಗೊತ್ತಿದೆ ಎಂದು, ಆದರೆ ಅವರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಇದು ಹಲವಾರು ಹೊಸ ಜನರಿಗೆ ಮತದಾನ ಮಾಡುವುದಕ್ಕೆ ತರಬೇತಿ ಕೊಟ್ಟಿತು.
ಎಲ್ಲಾ ಗಣ್ಯರಿಗೆ , ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಇಡೀಯ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋದುದಕ್ಕಾಗಿ ಮತ್ತು ಉಪ ಸಭಾಪತಿಗಳಿಗೆ ಕೂಡಾ ನಾನು ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಅವರ ಅನುಭವ, ಸಾಮಾಜಿಕ ವಿಷಯಗಳಿಗೆ ಅವರ ಬದ್ದತೆಯ ಬಗ್ಗೆ ನನಗೆ ಭರವಸೆ ಇದೆ. ಮತ್ತು ಹರಿವಂಶಜೀ ಅವರ ವಿಶೇಷತೆ ಏನೆಂದರೆ ಅವರು ತಮ್ಮ ಪತ್ರಿಕೆಯಲ್ಲಿ ಒಂದು ಅಂಕಣವನ್ನು -“ನಮಗೆ ಎಂತಹ ಸಂಸತ್ ಸದಸ್ಯರು ಬೇಕು ? “ ಎಂಬ ಅಂಕಣವನ್ನು ಆರಂಭಿಸಿದ್ದರು. ಮತ್ತು ಆಗ ಅವರಿಗೆ ಗೊತ್ತಿರಲಿಲ್ಲ, ತಾನೂ ಮುಂದೊಂದು ದಿನ ಓರ್ವ ಸಂಸತ್ ಸದಸ್ಯರಾಗಬಹುದು ಎಂಬುದಾಗಿ. ಆದರೆ ಅವರು ’ನಮಗೆ ಎಂತಹ ಸಂಸತ್ ಸದಸ್ಯರು ಬೇಕು’ ಎಂಬುದಾಗಿ ವ್ಯಾಪಕ ಪ್ರಚಾರಾಂದೋಲನವನ್ನು ನಡೆಸಿದರು. ಅವರಿಗೀಗ ಅವರ ಕನಸುಗಳನ್ನು ನನಸು ಮಾಡುವ ದೊಡ್ಡ ಅವಕಾಶ ಲಭಿಸಿದೆ. ಜತೆಗೆ ಎಲ್ಲಾ ಸಂಸತ್ ಸದಸ್ಯರಿಗೂ ಅವರಿಂದ ತರಬೇತು ಪಡೆಯುವ ಅವಕಾಶವೂ ಲಭಿಸಿದೆ. ಮತ್ತು ದಶರಥ್ ಮಂಜಿ, ಬಗ್ಗೆ ಇಂದು ಭಾರತದಲ್ಲಿ ಬಹಳ ಧೀರ್ಘವಾಗಿ ಚರ್ಚೆಯಾಗುತ್ತಿದೆ , ಈ ಬಗ್ಗೆ ಕೆಲವರಿಗಷ್ಟೇ ಗೊತ್ತಿದೆ,- ದಶರಥ್ ಮಂಜಿಯನ್ನು ಮೊದಲ ಬಾರಿಗೆ ಹುಡುಕಿ ಅದರ ವರದಿಯನ್ನು ಪ್ರಕಟಿಸಿದವರು ಹರಿವಂಶ ಬಾಬು ಎಂಬ ಸಂಗತಿ. ಹೀಗಾಗಿ ಇಂದು ನಾವೆಲ್ಲರೂ ಸಮಾಜದ ಅತ್ಯಂತ ತಳಮಟ್ಟದಲ್ಲಿರುವ ಜನತೆಯ ಜೊತೆ ಗುರುತಿಸಲ್ಪಟ್ಟಿರುವ ಯೋಗ್ಯ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯಲಿದ್ದೇವೆ.
ನಾನು ಅವರನ್ನು ಹೃದಯ ತುಂಬಿ ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಷಯಗಳು.
——–
I congratulate Harivansh Ji on being elected the Deputy Chairperson of the Rajya Sabha: PM @narendramodi in the Rajya Sabha
— PMO India (@PMOIndia) August 9, 2018
I am happy that the Leader of the Rajya Sabha, Shri @arunjaitley is present today: PM @narendramodi in the Rajya Sabha
— PMO India (@PMOIndia) August 9, 2018
Today we mark the anniversary of the Quit India Movement. Harivansh Ji hails from Ballia, a land linked with freedom fighters. He has been inspired by Loknayak JP. He also spent time in Varanasi.
— PMO India (@PMOIndia) August 9, 2018
Here is a leader who worked with a statesman like Chandra Shekhar Ji: PM
Working closely with Chandra Shekhar Ji, Harivansh Ji knew in advance that Chandra Shekhar Ji would resign. However, he did not let his own paper have access to this news. This shows his commitment to ethics and public service: PM @narendramodi in the Rajya Sabha
— PMO India (@PMOIndia) August 9, 2018
Harivansh Ji is well read and has written a lot. He has served society for years: PM @narendramodi in the Rajya Sabha
— PMO India (@PMOIndia) August 9, 2018
I also want to congratulate BK Hariprasad Ji for being a part of the election for Deputy Chairperson of the Rajya Sabha: PM @narendramodi
— PMO India (@PMOIndia) August 9, 2018