Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ ಕೋಟ್ ನಲ್ಲಿ ಸಾಮಾಜಿಕ ಅಧಿಕಾರಿತಾ ಶಿಬಿರ ಉದ್ದೇಶಿಸಿ ಪ್ರಧಾನಿ ಭಾಷಣ

s20170629110357


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ರಾಜಕೋಟ್ ನಲ್ಲಿ ಸಾಮಾಜಿಕ್ ಅಧಿಕಾರಿತಾ ಶಿಬಿರ ಉದ್ದೇಶಿಸಿ ಭಾಷಣ ಮಾಡಿದರು, ಮತ್ತು ದಿವ್ಯಾಂಗದ ಫಲಾನುಭವಿಗಳಿಗೆ ಸಾಧನ ಮತ್ತು ಸಲಕರಣೆಗಳನ್ನು ವಿತರಿಸಿದರು.

ಕೇಂದ್ರ ಸರ್ಕಾರವು ಈ ದೇಶದ ಬಡಜನರಿಗಾಗಿ ಸಂಪೂರ್ಣ ಸಮರ್ಪಿತವಾಗಿದೆ ಎಂದು ತಿಳಿಸಿದರು.

ದಿವ್ಯಾಂಗದ ಸಹೋದರ ಮತ್ತು ಸಹೋದರಿಯರ ಜೀವನವನ್ನು ಪರಿವರ್ತಿಸುವಂತಹ ತಂತ್ರಜ್ಞಾನ ಮತ್ತು ನಾವಿನ್ಯತೆಯ ಮಾರ್ಗೋಪಾಯಗಳತ್ತ ಗಮನ ಹರಿಸುವಂತೆ ಅವರು ನವೋದ್ಯಮ ವಲಯಕ್ಕೆ ಮನವಿ ಮಾಡಿದರು.

ಕೇಂದ್ರ ಸಚಿವ ಡಾ. ಥಾವರ್ ಚಂದ್ ಗೆಹ್ಲೋಟ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಅವರು ದಿವ್ಯಾಂಗದವರ ಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯ ಐತಿಹಾಸಿಕ ಮತ್ತು ಸ್ತುತ್ಯಾರ್ಹ ಎಂದರು.

2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಯಾವೊಬ್ಬ ಭಾರತೀಯನೂ ವಸತಿರಹಿತರಾಗಿರಬಾರದು, ಮತ್ತು ಆ ಮನೆಗಳು ಸೂಕ್ತ ಸೌಲಭ್ಯಗಳನ್ನು ಹೊಂದಿರಬೇಕು ಎಂದು ಪುನರುಚ್ಚರಿಸಿದರು.

****

AK