Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕ್ರೀಡಾ ದಿನದಂದು ಪ್ರಧಾನಮಂತ್ರಿಯವರ ಸಂದೇಶ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ದೇಶಾದ್ಯಂತ ಇರುವ ಎಲ್ಲ ಕ್ರೀಡಾ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ನಮ್ಮ ಸಮಾಜದಲ್ಲಿ ಕ್ರೀಡೆ ಮತ್ತು ಕ್ರೀಡಾ ಮನೋಭಾವ ಸದಾ ಪ್ರಕಾಶಿಸುತ್ತಿರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ರಾಷ್ಟ್ರೀಯ ಕ್ರೀಡಾ ದಿನದಂದು ನಾನು ಭಾರತದಾದ್ಯಂತ ಇರುವ ಎಲ್ಲ ಕ್ರೀಡಾ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಕ್ರೀಡೆ ಹಾಗೂ ಕ್ರೀಡಾ ಮನೋಭಾವ ಸದಾ ಕಾಲ ನಮ್ಮ ಸಮಾಜದಲ್ಲಿ ಪ್ರಕಾಶಿಸುತ್ತಿರುತ್ತದೆ ಎಂದು ಆಶಿಸುತ್ತೇನೆ” , ಎಂದು ಪ್ರಧಾನಿ ಹೇಳಿದ್ದಾರೆ.