Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕ್ರೀಡಾ ದಿನದಂದು ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಪ್ರಧಾನಿ ಅಭಿನಂದನೆ; ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಗೆ ಗೌರವ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಹಾಕಿ ರಂಗದ ದಂತಕತೆ ಮೇಜರ್ ಧ್ಯಾನ್ ಚಂದ್ ಗೆ ಅವರು ಗೌರವ ನಮನ ಸಲ್ಲಿಸಿದ್ದಾರೆ.

”ರಾಷ್ಟ್ರೀಯ ಕ್ರೀಡಾ ದಿನದಂದು, ಕ್ರೀಡೆಯಲ್ಲಿ ಹುರುಪು ಮತ್ತು ಉತ್ಸಾಹ ತೋರಿ ಅದನ್ನು ಮುಂದುವರಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಉತ್ಸಾಹಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಹಾಕಿಯಲ್ಲಿ ಅದ್ಭುತ ಕೌಶಲ ಮೆರೆದ ದಂತಕತೆ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.

ಕ್ರೀಡೆ ಎಂಬುದು ದೈಹಿಕ, ಮಾನಸಿಕ ಜಾಗೃತಿ ಮತ್ತು ವ್ಯಕ್ತಿತ್ವ ವಿಕಾಸ ಕುರಿತಾದುದಾಗಿದೆ. ಭಾರತವು ಅಪಾರ ಕ್ರೀಡಾ ಪ್ರತಿಭೆಗಳಿಂದ ಹರಸಲ್ಪಟ್ಟಿದೆ. ಈ ಸಾಮರ್ಥ್ಯವನ್ನು ಪೋಷಿಸಲು ಭಾರತೀಯ ಕ್ರೀಡಾ ಇಲಾಖೆ ಅಂತರ್ಜಾಲ ತಾಣ ಆರಂಭಿಸಿದೆ.

ರಾಷ್ಟ್ರೀಯ ಕ್ರೀಡಾ ಪ್ರತಿಭೆ ಶೋಧ ತಾಣವು ಕ್ರೀಡಾ ಆಕಾಂಕ್ಷೆಯೊಂದಿಗೆ ಬೆಳಗಲು ಮತ್ತು ಬೆಳೆಯಲು ಇಚ್ಛಿಸುವ ಯುವ ಕ್ರೀಡಾ ಪ್ರತಿಭೆಗಳಿಗೆ ಎಲ್ಲ ಅಗತ್ಯ ನಿರ್ದೇಶನ ಮತ್ತು ಬೆಂಬಲವನ್ನು ನೀಡುತ್ತದೆ”, ಎಂದು ಪ್ರಧಾನಿ ಹೇಳಿದ್ದಾರೆ.