ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಕ್ರೀಡಾ ನೀತಿ (ಎನ್ ಎಸ್ ಪಿ) 2025ಕ್ಕೆ ಅನುಮೋದನೆ ನೀಡಿದೆ. ಇದು ದೇಶದ ಕ್ರೀಡಾ ಕ್ಷೇತ್ರವನ್ನು ಮರುರೂಪಿಸುವ ಮತ್ತು ಕ್ರೀಡೆಗಳ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ವದ ಉಪಕ್ರಮವಾಗಿದೆ.
ಹೊಸ ನೀತಿಯು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕ್ರೀಡಾ ನೀತಿ, 2001 ಅನ್ನು ರದ್ದುಗೊಳಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಮತ್ತು 2036 ರ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೇಷ್ಠತೆಗಾಗಿ ಪ್ರಬಲ ಸ್ಪರ್ಧಿಯಾಗಿ ಸ್ಥಾಪಿಸಲು ದೂರದೃಷ್ಟಿಯ ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುತ್ತದೆ.
ಕೇಂದ್ರ ಸಚಿವಾಲಯಗಳು, ನೀತಿ ಆಯೋಗ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್ ಎಸ್ ಎಫ್), ಕ್ರೀಡಾಪಟುಗಳು, ವಲಯತಜ್ಞರು ಮತ್ತು ಸಾರ್ವಜನಿಕ ಪಾಲುದಾರರನ್ನು ಒಳಗೊಂಡ ವ್ಯಾಪಕ ಸಮಾಲೋಚನೆಗಳ ನಂತರ ಎನ್ ಎಸ್ ಪಿ 2025 ರೂಪಿಸಲಾಗಿದೆ. ಈ ನೀತಿಯು ಐದು ಪ್ರಮುಖ ಸ್ತಂಭಗಳನ್ನು ಆಧರಿಸಿದೆ.
1. ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠತೆ
ಈ ಸ್ತಂಭವು ಕೆಳಕಂಡ ಗುರಿಗಳನ್ನು ಹೊಂದಿದೆ:
2. ಆರ್ಥಿಕ ಅಭಿವೃದ್ಧಿಗಾಗಿ ಕ್ರೀಡೆ
ಎನ್ ಎಸ್ ಪಿ 2025 ಕ್ರೀಡೆಗಳ ಆರ್ಥಿಕ ಸಾಮರ್ಥ್ಯವನ್ನು ಗುರುತಿಸುತ್ತದೆ ಮತ್ತು ಕೆಕಳಕಂಡ ಗುರಿಗಳನ್ನು ಹೊಂದಿದೆ:
3. ಸಾಮಾಜಿಕ ಅಭಿವೃದ್ಧಿಗಾಗಿ ಕ್ರೀಡೆ
ಸಾಮಾಜಿಕ ಸೇರ್ಪಡೆಯನ್ನು ಮುನ್ನಡೆಸುವಲ್ಲಿ ಕ್ರೀಡೆಗಳ ಪಾತ್ರವನ್ನು ನೀತಿಯು ಒತ್ತಿಹೇಳುತ್ತದೆ:
4. ಜನಾಂದೋಲನವಾಗಿ ಕ್ರೀಡೆ
ಕ್ರೀಡೆಯನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಮಾಡುವಲ್ಲಿ ನೀತಿಯು ಈ ಕೆಳಗಿನ ಗುರಿಗಳನ್ನು ಹೊಂದಿದೆ:
5. ಶಿಕ್ಷಣದೊಂದಿಗೆ ಏಕೀಕರಣ (ಎನ್ ಇ ಪಿ 2020)
ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ, ಎನ್ ಎಸ್ ಪಿ 2025 ಈ ಕೆಳಗಿನವುಗಳನ್ನು ಪ್ರಸ್ತಾಪಿಸುತ್ತದೆ:
6. ಕಾರ್ಯತಂತ್ರದ ಚೌಕಟ್ಟು
ತನ್ನ ಉದ್ದೇಶಗಳನ್ನು ಸಾಧಿಸಲು, ಎನ್ ಎಸ್ ಪಿ 2025 ಸಮಗ್ರ ಅನುಷ್ಠಾನ ತಂತ್ರವನ್ನು ರೂಪಿಸುತ್ತದೆ, ಅದು ಇವುಗಳನ್ನು ಒಳಗೊಂಡಿದೆ:
ತನ್ನ ರಚನಾತ್ಮಕ ದೃಷ್ಟಿಕೋನ ಮತ್ತು ದೂರದೃಷ್ಟಿಯ ಕಾರ್ಯತಂತ್ರದೊಂದಿಗೆ, ರಾಷ್ಟ್ರೀಯ ಕ್ರೀಡಾ ನೀತಿ 2025 ಭಾರತವನ್ನು ಜಾಗತಿಕವಾಗಿ ಪ್ರಮುಖ ಕ್ರೀಡಾ ರಾಷ್ಟ್ರವಾಗಲು ಪರಿವರ್ತನಾ ಹಾದಿಯಲ್ಲಿ ಇರಿಸುತ್ತದೆ, ಜೊತೆಗೆ ಆರೋಗ್ಯವಂತ, ಹೆಚ್ಚು ತೊಡಗಿಸಿಕೊಂಡ ಮತ್ತು ಸಬಲೀಕೃತ ನಾಗರಿಕರನ್ನು ಸೃಷ್ಟಿಸುತ್ತದೆ.
*****