ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018(ಎನ್ ಡಿ ಸಿ ಪಿ-2018)ಅನ್ನು ಮತ್ತು ದೂರಸಂಪರ್ಕ ಆಯೋಗವನ್ನು ‘ಡಿಜಿಟಲ್ ಸಂವಹನ ಆಯೋಗ’ವನ್ನಾಗಿ ಮರುವಿನ್ಯಾಸಗೊಳಿಸಲು ಅನುಮೋದನೆ ನೀಡಲಾಯಿತು.
ಪರಿಣಾಮ
ಈ ಎನ್ ಡಿ ಸಿ ಪಿ – 2018 ಅಡಿಯಲ್ಲಿ ಭಾರತವನ್ನು ಡಿಜಿಟಲ್ ಸಬಲೀಕರಣ ಆರ್ಥಿಕ ಹಾಗೂ ಸಾಮಾಜಿಕವಾಗಿ ಪರಿವರ್ತನೆಗೊಳಿಸುವ ಉದ್ದೇಶ ಹೊಂದಿದೆ. ಆ ಮೂಲಕ ಜನರ ಸಂವಹನ ಮತ್ತು ಮಾಹಿತಿಯ ಅಗತ್ಯತೆಗಳನ್ನು ಪೂರೈಸುವುದು ಮತ್ತು ಡಿಜಿಟಲ್ ಮೂಲಸೌಕರ್ಯ ಹಾಗೂ ಸೇವೆಗಳನ್ನು ಕೈಗೆಟಕುವ ದರದಲ್ಲಿ ಅನಿಯಂತ್ರಿತ ರೀತಿಯಲ್ಲಿ ಒದಗಿಸುವುದು.
‘ಗ್ರಾಹಕ ಕೇಂದ್ರಿತ’ ಮತ್ತು ಅನ್ವಯಿಕ ಆಧಾರಿತ ಎನ್ ಡಿ ಸಿ ಪಿ – 2018 ಅಡಿಯಲ್ಲಿ ಹೊಸ ಚಿಂತನೆಗಳು ಮತ್ತು ಆವಿಷ್ಕಾರಗಳಿಗೆ ಅವಕಾಶವಿದ್ದು, ಇದರಡಿ 5ಜಿ, ಐಓಟಿ,ಎಂ2ಎಂ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿದ ನಂತರ ಅವು ಭಾರತದ ದೂರಸಂಪರ್ಕ ವಲಯವನ್ನು ಆಳಲಿವೆ.
ಉದ್ದೇಶ :
ಈ ನೀತಿಯ ಪ್ರಮುಖ ಧ್ಯೇಯೋದ್ದೇಶಗಳೆಂದರೆ
ಈ ಎಲ್ಲ ಉದ್ದೇಶಗಳನ್ನು 2022ರೊಳಗೆ ಸಾಧಿಸುವುದು..
ಪ್ರಮುಖಾಂಶಗಳು:
ಈ ನೀತಿಯ ಪ್ರಮುಖ ಗುರಿಗಳೆಂದರೆ
ಕಾರ್ಯತಂತ್ರ
ನೀತಿ ಈ ಕೆಳಗಿನ ಅಂಶಗಳನ್ನು ಪ್ರತಿಪಾದಿಸುತ್ತದೆ.
ಹಿನ್ನೆಲೆ:
ಪ್ರಸ್ತುತ ದೂರಸಂಪರ್ಕ ವಲಯದಲ್ಲಿ 5ಜಿ, ಐಓಟ್, ಎಂ2ಎಂ ಮತ್ತಿತರ ಆಧುನಿಕ ತಂತ್ರಜ್ಞಾನ ಬೆಳವಣಿಗೆಗಳ ಹೊಸ ಯುಗ ಜಗತ್ತಿನಲ್ಲಿ ಆರಂಭವಾಗಿದ್ದು,ಗ್ರಾಹಕ ಕೇಂದ್ರಿತ ಮತ್ತು ಅನ್ವಯಿಕ ಆಧಾರಿತ ನೀತಿಗಳು ಭಾರತ ದೂರಸಂಪರ್ಕ ವಲಯದಲ್ಲಿ ಪರಿಚಯಿಸಲ್ಪಟ್ಟಿವೆ. ಇವು ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಮುಖ ಆಧಾರ ಸ್ತಂಭಗಳಾಗಿದ್ದು, ಅದರ ಮೂಲಕ ಎದುರಾಗುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವ ಜೊತೆಗೆ ದೂರಸಂಪರ್ಕ ಸೇವೆಗಳಲ್ಲದೆ, ದೂರಸಂಪರ್ಕ ಆಧಾರಿತ ಸೇವೆಗಳನ್ನೂ ಸಹ ವಿಸ್ತರಿಸಲಾಗುತ್ತಿದೆ.
ಅದರಂತೆ ರಾಷ್ಟ್ರೀಯ ದೂರಸಂಪರ್ಕ ನೀತಿ – 2012ಕ್ಕೆ ಬದಲಾಗಿ ಹೊಸ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ 2018, ರೂಪಿಸಲಾಗಿದೆ. ಅದು ಭಾರತದ ದೂರಸಂಪರ್ಕ ವಲಯದಲ್ಲಿ ಆಧುನಿಕ ಅಗತ್ಯತೆಗಳನ್ನು ಪೂರೈಸಲಿದೆ.