Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳಿಗೆ ಪ್ರಧಾನಿ ಶುಭಾಶಯ; ವಿಜ್ಞಾನಕ್ಕೆ ನೀಡಿರುವ ಕೊಡುಗೆಗೆ ಸರ್.ಸಿ.ವಿ. ರಾಮನ್ ಅವರಿಗೆ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳಿಗೆ ಶುಭ ಕೋರಿದ್ದಾರೆ. ವಿಜ್ಞಾನ ಲೋಕಕ್ಕೆ ನೀಡಿರುವ ಕೊಡುಗೆಗಾಗಿ ಸರ್. ಸಿ.ವಿ. ರಾಮನ್ ಅವರಿಗೆ ಪ್ರಧಾನಿಯವರು ಗೌರವ ವಂದನೆ ಸಲ್ಲಿಸಿದ್ದಾರೆ.

“ರಾಷ್ಟ್ರೀಯ ವಿಜ್ಞಾನ ದಿನದಂದು, ನಮ್ಮ ವೈಜ್ಞಾನಿಕ ಸಮುದಾಯಕ್ಕೆ ನನ್ನ ಶುಭ ಹಾರೈಕೆಗಳು ಹಾಗೂ ಶುಭಾಶಯಗಳು. ದೇಶ ಕಟ್ಟುವ ಮತ್ತು ಅದರ ಪ್ರಗತಿಯಲ್ಲಿ ಅವರ ಪಾತ್ರ ಮಹತ್ವವಾದ್ದು.

ವಿಜ್ಞಾನಕ್ಕೆ ನೀಡಿದ ಅಗ್ರಮಾನ್ಯ ಕೊಡುಗೆಗಾಗಿ ಸರ್. ಸಿ.ವಿ. ರಾಮನ್ ಅವರಿಗೆ ನಾವು ವಂದಿಸುತ್ತೇವೆ, ಅದು ಪೀಳಿಗೆಗಳಿಂದ ವಿಜ್ಞಾನ ಕುತೂಹಲಿಗಳಿಗೆ ಪ್ರೇರೇಪಣೆ ನೀಡುತ್ತಿದೆ’’ ಎಂದು ಪ್ರಧಾನಿ ಹೇಳಿದ್ದಾರೆ.

*****