ಪಿಎಂಇಂಡಿಯಾ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2018 ,ರ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.
ಪ್ರಧಾನ ಮಂತ್ರಿ ಅವರು ಪ್ರಶಸ್ತಿ ಪುರಸ್ಕೃತರನ್ನು ಅವರ ವಿಶೇಷ ಕಾರ್ಯಗಳಿಗಾಗಿ ಅಭಿನಂದಿಸಿದರು. ಪ್ರತೀ ವಿದ್ಯಾರ್ಥಿಯ ಬದುಕನ್ನು ಪರಿವರ್ತಿಸಲು ಇನ್ನಷ್ಟು ಕಠಿಣ ದುಡಿಮೆಯನ್ನು ಮುಂದುವರೆಸುವಂತೆ ಅವರು ಶಿಕ್ಷಕರಲ್ಲಿ ಮನವಿ ಮಾಡಿದರು.
ಸಂವಾದದಲ್ಲಿ ಪ್ರಧಾನ ಮಂತ್ರಿ ಅವರು ಕಲಿಕೆಯಲ್ಲಿ ತಂತ್ರಜ್ಞಾನವನ್ನು ಬಳಸುವ ಮಹತ್ವದ ಬಗ್ಗೆ ಮಾತನಾಡಿದರು.ವಿವಿಧ ದೈನಂದಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಹುಡುಕಲು ವಿದ್ಯಾರ್ಥಿಗಳಲ್ಲಿ ಚಿಂತನಾಕ್ರಮವನ್ನು ಬೆಳೆಸುವ ಬಗ್ಗೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದವರು ಹೇಳಿದರು. ಪ್ರತೀ ಮಗುವಿಗೂ ಒಂದು ಅವಕಾಶ ನೀಡುವಂತೆ ಅವರು ಶಿಕ್ಷಕರಲ್ಲಿ ಮನವಿ ಮಾಡಿದರು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ಅವರು ಸೃಜನಶೀಲತೆಯನ್ನು ಉತ್ತೇಜಿಸಿದರೆ ಅದು ಮಕ್ಕಳಿಗೆ ಸ್ವಯಂ ಪ್ರೇರಣೆ ನೀಡುತ್ತದೆ ಮತ್ತು ಅವರಿಗೆ ತಮ್ಮೊಳಗೆ ಸ್ಪರ್ಧಿಸಲು ಸಮರ್ಥರನ್ನಾಗಿ ಮಾಡುತ್ತದೆ ಎಂದರು. ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಧೋರಣೆ ಏನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಶಿಕ್ಷಕರು ಪ್ರತಿಯೊಬ್ಬರಲ್ಲಿಯೂ ವಿದ್ಯಾರ್ಥಿ ಭಾವನೆಯನ್ನು ಜೀವಂತವಾಗಿಡಬೇಕು ಮತ್ತು ಅದರಿಂದ ಅವರು ಸದಾ ಕಲಿಯುತ್ತಿರುವಂತಾಗಬೇಕು ಎಂದೂ ನುಡಿದರು.
ಪ್ರಧಾನ ಮಂತ್ರಿ ಅವರ ಜೊತೆ ಸಂವಾದದಲ್ಲಿ ಪಾಲ್ಗೊಂಡ ಪ್ರಶಸ್ತಿ ಪುರಸ್ಕೃತರು ಶಾಲೆಗಳಲ್ಲಿ ಧನಾತ್ಮಕ ಪರಿವರ್ತನೆ ತಂದ ತಮ್ಮ ಪರಿವರ್ತನಾಶೀಲತೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್ ಗಳು ಹೇಗೆ ತಂತ್ರಜ್ಞಾನವನ್ನು ಬಳಸಲು ಮತ್ತು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಿವೆ ಎಂಬ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ಶ್ರೀ ರಮೇಶ್ ಪೋಖ್ರಿವಾಲ್ ಮತ್ತು ಮಾನವ ಸಂಪನ್ಮೂಲ ಖಾತೆ ಸಹಾಯಕ ಸಚಿವರಾದ ಶ್ರೀ ಸಂಜಯ್ ಶ್ಯಾಮರಾವ್ ಧೋತ್ರೆ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Good teachers, great mentors and givers of exceptional wisdom!
— Narendra Modi (@narendramodi) September 3, 2019
Congratulations to the recipients of the National Award to Teachers. I had the opportunity to interact with the awardees earlier today and hear their experiences of transforming young minds. https://t.co/yO689gYS9f pic.twitter.com/JfnfOMjTln
While interacting with National Award winning teachers, I highlighted the importance of technology as a teaching aid, the need to sharpen a spirit of creativity as well as innovation and how the Central Government is working to build an environment that stimulates innovation. pic.twitter.com/JW1vmdYNco
— Narendra Modi (@narendramodi) September 3, 2019