ಪಿಎಂಇಂಡಿಯಾ
ನಮಸ್ಕಾರ
ಗೌರವಾನ್ವಿತ ರಾಷ್ಟ್ರಪತಿಗಳೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಜಿ, ಸಂಜಯ್ ಧೋತ್ರೆ ಜಿ, ಎಲ್ಲಾ ಗೌರವಾನ್ವಿತ ರಾಜ್ಯಪಾಲರುಗಳೇ, ಲೆಫ್ಟಿನೆಂಟ್ ಗವರ್ನರ್ ಗಳೇ, ರಾಜ್ಯಗಳ ಶಿಕ್ಷಣ ಸಚಿವರುಗಳೇ, ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಡಾ. ಕಸ್ತೂರಿರಂಗನ್ ಜಿ ಮತ್ತು ಅವರ ತಂಡ, ನಾನಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ, ಶೈಕ್ಷಣಿಕ ತಜ್ಞರೇ ಮತ್ತು ಈ ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲಾ ಮಹಿಳೆಯರೇ ಮತ್ತು ಮಹನಿಯರೇ.
ಮೊದಲಿಗೆ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಆಭಾರಿಯಾಗಿದ್ದೇನೆ. ಈ ಸಮಾವೇಶ, ರಾಷ್ಟ್ರೀಯ ಶಿಕ್ಷಣ ನೀತಿ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಸ್ತುತವಾಗಿದೆ. ಇಂದಿನ ಸಮಾವೇಶದಲ್ಲಿ ನೂರಾರು ವರ್ಷಗಳ ಬೋಧನೆಯ ಅನುಭವ ಮೇಳೈಸಿದೆ. ನಾನು ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಮಾನ್ಯರೇ,
ಶಿಕ್ಷಣ ದೇಶದ ಆಶೋತ್ತರಗಳನ್ನು ಈಡೇರಿಸುವಲ್ಲಿ ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಶಿಕ್ಷಣದ ಜವಾಬ್ದಾರಿ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಆಡಳಿತದ ಮೇಲಿದ್ದರೂ, ನೀತಿ ನಿರೂಪಣೆಯಲ್ಲಿ ಅವರ ಹಸ್ತಕ್ಷೇಪ ಕನಿಷ್ಠವಾಗಿರಬೇಕು ಮತ್ತು ಕಡಿಮೆ ಪ್ರಭಾವವಿರುತ್ತದೆ. ಹೆಚ್ಚು ಹೆಚ್ಚು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಯೋಜನೆಯಲ್ಲಿ ತೊಡಗಿಸಿಕೊಂಡಾಗ ಶಿಕ್ಷಣ ನೀತಿಯ ಪ್ರಸ್ತುತತೆ ಮತ್ತು ಸಮಗ್ರತೆ ಹೆಚ್ಚಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯ ನಾಲ್ಕೈದು ವರ್ಷಗಳ ಹಿಂದೆ ಆರಂಭವಾಯಿತು. ನಗರ ಮತ್ತು ಹಳ್ಳಿಗಳಲ್ಲಿ ವಾಸಿಸುವ ಲಕ್ಷಾಂತರ ಜನರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅನುಭವಿ ಜನರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆಯಲಾಯಿತು. ಕರಡು ಶಿಕ್ಷಣ ನೀತಿಯ ನಾನಾ ಆಯಾಮಗಳ ಬಗ್ಗೆ ಎರಡು ಲಕ್ಷಕ್ಕೂ ಅಧಿಕ ಜನರು ತಮ್ಮ ಸಲಹೆಗಳನ್ನು ನೀಡಿದ್ದರು. ಅದರ ಅರ್ಥ ಪೋಷಕರು, ವಿದ್ಯಾರ್ಥಿಗಳು, ಶೈಕ್ಷಣಿಕ ತಜ್ಞರು, ಶಿಕ್ಷಕರು, ಶೈಕ್ಷಣಿಕ ವ್ಯವಸ್ಥಾಪಕರು, ವೃತ್ತಿಪರರು ಸೇರಿ ಎಲ್ಲರೂ ಇದಕ್ಕೆ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇದೀಗ ಎಲ್ಲರೂ ಸ್ವಾಗತಿಸಿದ್ದಾರೆ ಮತ್ತು ಅದು ವ್ಯಾಪಕ ಮತ್ತು ವಿಸ್ತೃತ ಸಮಾಲೋಚನೆ ನಂತರ ಅತ್ಯಂತ ಬಲಿಷ್ಠವಾಗಿದೆ.
ಅದು ಗ್ರಾಮಗಳಲ್ಲಿನ ಶಿಕ್ಷಕರಾಗಿರಬಹುದು ಅಥವಾ ಹೆಸರಾಂತ ಶೈಕ್ಷಣಿಕ ತಜ್ಞರಾಗಿರಬಹುದು, ಪ್ರತಿಯೊಬ್ಬರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಮ್ಮದೇ ಶಿಕ್ಷಣ ನೀತಿ ಎಂದು ಪರಿಗಣಿಸುತ್ತಿದ್ದಾರೆ. ಪ್ರತಿಯೊಬ್ಬರೂ ಇಂತಹ ಸುಧಾರಣೆಗಳನ್ನು ಹಿಂದಿನ ಶಿಕ್ಷಣ ನೀತಿಯಲ್ಲೇ ಬರಬೇಕಿತ್ತು ಎಂದು ಬಯಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದರ ಹಿಂದೆ ಇದೊಂದು ಪ್ರಮುಖ ಕಾರಣವಿದೆ.
ಶಿಕ್ಷಣ ನೀತಿಯ ವಿಧಾನವನ್ನು ನಿರ್ಧರಿಸಿದ ನಂತರ ರಾಷ್ಟ್ರ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅನುಷ್ಠಾನ ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಶಾಲಾ ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಸೀಮಿತವಾದುದಲ್ಲ, ಹಾಗಾಗಿ ಇಂತಹ ಸಮಗ್ರ ಸಮಾಲೋಚನೆಗಳು ಅತ್ಯಗತ್ಯ. 21ನೇ ಶತಮಾನದ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪಗಳಿಗೆ ಹೊಸ ದಿಕ್ಕನ್ನು ಈ ಶಿಕ್ಷಣ ನೀತಿ ನೀಡಲಿದೆ.
ಈ ನೀತಿಯು ಭಾರತವನ್ನು ಸ್ವಾವಲಂಬಿ ಅಥವಾ ಆತ್ಮನಿರ್ಭರ ಮಾಡುವ ಗುರಿ ಹೊಂದಿದೆ. ಸಹಜವಾಗಿಯೇ ನಮ್ಮ ಸಿದ್ಧತೆಗಳು ಮತ್ತು ಜಾಗೃತಿ ಕೂಡ ಒಂದಕ್ಕೊಂದು ಸಮ್ಮಿಳಿತವಾಗಬೇಕು. ಬಹುತೇಕ ಮಂದಿ ರಾಷ್ಟ್ರೀಯ ಶಿಕ್ಷಣ ನೀತಿಯ ಸೂಕ್ಷ್ಮ ಅಂಶಗಳನ್ನು ಅಧ್ಯಯನ ಮಾಡಿದ್ದೀರಿ. ಆದ್ದರಿಂದ ಆ ಅಂಶಗಳ ಕುರಿತು ಮತ್ತು ಸುಧಾರಣೆಯ ತೀವ್ರತೆಯ ಉದ್ದೇಶಗಳ ಕುರಿತು ನಿರಂತರ ಸಮಾಲೋಚನೆಗಳು ಅತ್ಯಂತ ಪ್ರಮುಖವಾಗಿವೆ. ಎಲ್ಲ ಸಂದೇಹ ಮತ್ತು ಪ್ರಶ್ನೆಗಳನ್ನು ನಿವಾರಿಸಿದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.
ಮಾನ್ಯರೇ,
ಇಂದು ಜಗತ್ತಿನಲ್ಲಿ ಬದಲಾಗುತ್ತಿರುವ ಉದ್ಯೋಗ ಮತ್ತು ದುಡಿಯುವ ಸ್ವರೂಪದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಅತ್ಯಂತ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. ಈ ನೀತಿ ದೇಶದ ಯುವ ಜನಾಂಗವನ್ನು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಜ್ಞಾನ ಮತ್ತು ಕೌಶಲ್ಯ ಎರಡನ್ನೂ ನೀಡಿ ಸಜ್ಜುಗೊಳಿಸಲಿದೆ. ಹೊಸ ಶಿಕ್ಷಣ ನೀತಿಯು ಓದುವುದಕ್ಕಿಂತ ಹೆಚ್ಚಾಗಿ ಕಲಿಕೆಯ ಮೇಲೆ ಗಮನ ಹರಿಸುತ್ತದೆ ಮತ್ತು ಪಠ್ಯಕ್ರಮವನ್ನು ಮೀರಿ ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡುತ್ತದೆ. ಪ್ರಕ್ರಿಯೆಗಿಂತ ಭಾವೋದ್ರೇಕಕ್ಕೆ, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಶಿಕ್ಷಣ ನೀತಿಯು ಕಲಿಕೆಯ ಫಲಶ್ರುತಿ ಮತ್ತು ಶಿಕ್ಷಕರ ತರಬೇತಿ ಮತ್ತು ಪ್ರತಿ ವಿದ್ಯಾರ್ಥಿಯ ಸಬಲೀಕರಣದತ್ತ ಕೇಂದ್ರೀಕರಿಸುತ್ತದೆ.
ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ‘ಒಂದು ಗಾತ್ರ ಎಲ್ಲರಿಗೂ ಹೊಂದುತ್ತದೆ’ ಎಂಬ ಮನೋಭಾವದಿಂದ ಹೊರತರುವ ಒಂದು ಗಂಭೀರ ಪ್ರಯತ್ನವಾಗಿದೆ ಮತ್ತು ನೀವೆಲ್ಲಾ ಹಿರಿಯರು, ಇದು ಒಂದು ಸಾಮಾನ್ಯ ಪ್ರಯತ್ನವಲ್ಲ, ಅಸಮಾನ್ಯ ಪ್ರಯತ್ನ ಎಂದು ಭಾವಿಸಬಹುದು. ಈ ನೀತಿಯಲ್ಲಿ ಹಲವು ದಶಕಗಳ ಹಿಂದಿನ ಶಿಕ್ಷಣ ನೀತಿಯಲ್ಲಿನ ಎಲ್ಲ ನ್ಯೂನತೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಮಗ್ರ ಸಮಾಲೋಚನೆ ನಡೆಯಲಿದೆ. ದೀರ್ಘಕಾಲದಿಂದ ಮಕ್ಕಳಿಗೆ ಶಾಲಾ ಚೀಲಗಳು ಮತ್ತು ಮಂಡಳಿ ಪರೀಕ್ಷೆಗಳಿಂದ ಭಾರೀ ಹೊರೆಯಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಇದರಿಂದ ಕುಟುಂಬದ ಮತ್ತು ಸಮಾಜದ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನೀತಿ, ಆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುವುದು. सा विद्या या विमुक् ಅಂದರೆ ಜ್ಞಾನ ನಮ್ಮ ಮನಸ್ಸನ್ನು ಮುಕ್ತಗೊಳಿಸುತ್ತದೆ ಎಂದು.
ಮಕ್ಕಳು ಮೂಲ ಹಂತದಲ್ಲಿ ತಮ್ಮ ಸಂಸ್ಕೃತಿ, ಭಾಷೆ ಮತ್ತು ಪರಂಪರೆ ಜೊತೆ ಬೆರೆತರೆ, ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗುವುದು ಮಾತ್ರವಲ್ಲದೆ, ಅತ್ಯಂತ ಸುಲಭವಾಗಲಿದೆ. ಮಕ್ಕಳೂ ಕೂಡ ಅದರ ಜೊತೆ ಹೊಂದಿಕೊಳ್ಳುತ್ತಾರೆ. ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಒತ್ತಡ, ಕೊರತೆ, ಪ್ರಭಾವವಿಲ್ಲದೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲಾಗುವುದು. ವಾಸ್ತವ ಅರ್ಥದಲ್ಲಿ ಅದು ನಮ್ಮ ಶಿಕ್ಷಣ ನೀತಿಯ ಭಾಗವಾಗಿದೆ. ಬೇರೆ ಬೇರೆ ಬಗೆಯ ಕೋರ್ಸ್ ಗಳ ಬಗೆಗಿನ ವಿದ್ಯಾರ್ಥಿಗಳ ಮೇಲಿನ ಒತ್ತಡಗಳು ತಗ್ಗಲಿವೆ.
ಇದೀಗ ನಮ್ಮ ಯುವಕರು ತಮ್ಮ ಆಸಕ್ತಿ ಮತ್ತು ಯೋಗ್ಯತೆಗೆ ಅನುಗುಣವಾಗಿ ವ್ಯಾಸಂಗ ಮಾಡಬಹುದಾಗಿದೆ. ಮೊದಲು ವಿದ್ಯಾರ್ಥಿಗಳು ಒತ್ತಡದ ಕಾರಣಕ್ಕೆ ತಮ್ಮ ಸಾಮರ್ಥ್ಯ ಮೀರಿದ ವಿಭಾಗಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳುತ್ತಿದ್ದರು. ಅವರು ಅದನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ತುಂಬಾ ತಡವಾಗಿರುತ್ತಿತ್ತು. ಅದರ ಪರಿಣಾಮ ವಿದ್ಯಾರ್ಥಿಗಳು ಒಂದೊ ಕಾಲೇಜಿನಿಂದ ಹೊರಗುಳಿಯುತ್ತಿದ್ದ ಅಥವಾ ಹೇಗೋ ಪದವಿಯನ್ನು ಪೂರೈಸುತ್ತಿದ್ದರು. ನನಗೆ ಅದು ಅರ್ಥವಾಗುತ್ತದೆ, ವಾಸ್ತವದಲ್ಲಿ ನನಗಿಂತ ನಿಮಗೆ ಚೆನ್ನಾಗಿ ಗೊತ್ತು, ಇದು ನಮ್ಮ ದೇಶದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂಬುದು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರವಿದೆ. ವಿದ್ಯಾರ್ಥಿಗಳಿಗೂ ಕೂಡ ಇದರಿಂದ ಶೈಕ್ಷಣಿಕವಾಗಿ ಹೆಚ್ಚಿನ ಪ್ರಯೋಜನವಾಗಲಿದೆ.
ಮಾನ್ಯರೇ,
ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಯುವಕರನ್ನು ಕೌಶಲ್ಯ ಹೊಂದಿದವರನ್ನಾಗಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ನಮ್ಮ ಯುವಕರು ಬಾಲ್ಯದಿಂದಲೇ ವೃತ್ತಿಪರ ಕಲಿಕೆಯ ಬೆಳವಣಿಗೆಗೆ ತೆರೆದುಕೊಳ್ಳುವುದರಿಂದ ಭವಿಷ್ಯಕ್ಕೆ ಉತ್ತಮ ರೀತಿಯಲ್ಲಿ ಸಜ್ಜಾಗಲಿದ್ದಾರೆ. ಪ್ರಾಯೋಗಿಕ ಕಲಿಕೆ, ದೇಶದಲ್ಲಿ ನಮ್ಮ ಯುವ ಮಿತ್ರರ ಉದ್ಯೋಗದ ಸಂಭವನೀಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ. आ नो भद्राः क्रतवो यन्तु विश्वतः ಅಂದರೆ ಯಾವುದೇ ದಿಕ್ಕಿನಿಂದ ಬಂದರೂ ಸರಿಯೇ, ಎಲ್ಲರೂ ಒಳ್ಳೆಯ ಚಿಂತನೆಗಳನ್ನು ಸ್ವೀಕರಿಸಬೇಕೆಂದು. ಪುರಾತನ ಕಾಲದಿಂದಲೂ ಭಾರತ, ಜ್ಞಾನದ ಕೇಂದ್ರವಾಗಿದೆ. 21ನೇ ಶತಮಾನದಲ್ಲಿ ಭಾರತವನ್ನು ಜ್ಞಾನದ ಆರ್ಥಿಕತೆಯನ್ನಾಗಿ ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಒಂದು ದಿಟ್ಟ ಹೆಜ್ಜೆಯಾಗಿದೆ.
ಹೊಸ ಶಿಕ್ಷಣ ನೀತಿ, ಸಾಮಾನ್ಯ ಕುಟುಂಬಗಳ ಯುವಕರಿಗಾಗಿ ಭಾರತದಲ್ಲಿ ಉತ್ತಮ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಬಾಗಿಲುಗಳನ್ನು ತೆರೆಯಲಿದೆ ಮತ್ತು ಪ್ರತಿಭಾ ಪಲಾಯನ ಸಮಸ್ಯೆಯನ್ನು ತಡೆಯಲಿದೆ. ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಗ್ರ ಕ್ಯಾಂಪಸ್ ಗಳು ಸ್ಥಾಪನೆಯಾದರೆ, ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಪ್ರವೃತ್ತಿ ತಗ್ಗುತ್ತದೆ ಮತ್ತು ನಮ್ಮ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕಗೊಳ್ಳುತ್ತವೆ. ಆನ್ ಲೈನ್ ಶಿಕ್ಷಣ ಇದರ ಇನ್ನೊಂದು ಆಯಾಮವಾಗಿದ್ದು, ಅದು ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಶಾಲಾ ಪದ್ಧತಿಯ ಎಲ್ಲ ಮಿತಿಗಳನ್ನು ದೂರ ಮಾಡಲಿವೆ.
ಮಾನ್ಯರೇ,
ಯಾವುದೇ ಒಂದು ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳನ್ನು ಮಾಡಲು ಹೊರಟಾಗ ಕೆಲವು ಸಂದೇಹಗಳು ಮತ್ತು ಆತಂಕಗಳು ಕಾಡುವುದು ಸಹಜ ಮತ್ತು ನಾವು ಅವುಗಳನ್ನು ನಿವಾರಿಸಿ ಹೊಸ ವ್ಯವಸ್ಥೆಯ ಸೃಷ್ಟಿಯತ್ತ ಸಾಗಬೇಕಿದೆ. ವಿದ್ಯಾರ್ಥಿಗಳು ಸಾಕಷ್ಟು ಸ್ವಾತಂತ್ರ್ಯವನ್ನು ಪಡೆಯುವುದರಿಂದ ಪೋಷಕರು ಯೋಚಿಸಬಹುದು. ಈ ವಿಭಾಗಗಳು ದೂರವಾದರೆ ಅವರು ಹೇಗೆ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆಯುತ್ತಾರೆ ಮತ್ತು ತಮ್ಮ ಮಕ್ಕಳ ಭವಿಷ್ಯ ಏನಾಗುತ್ತದೆ ಎಂದು ಯೋಚಿಸಬಹುದು. ಅಂತೆಯೇ ಶಿಕ್ಷಕರು ಮತ್ತು ಪ್ರೊಫೆಸರ್ ಗಳ ಮನಸ್ಸಿನಲ್ಲಿಯೂ ಸಹ ಹೊಸ ಬದಲಾವಣೆಗಳಿಗೆ ಹೇಗೆ ತಮಗೆ ತಾವೇ ಸಜ್ಜುಗೊಳಿಸಿಕೊಳ್ಳುವುದು? ಹೇಗೆ ಹೊಸ ಪಠ್ಯಕ್ರಮಗಳನ್ನು ನಿರ್ವಹಿಸುವುದು ಎಂಬ ಪ್ರಶ್ನೆಗಳು ಮೂಡಬಹುದು.
ಮಾನ್ಯರೇ,
ಹಲವು ಪ್ರಶ್ನೆಗಳು ನಿಮ್ಮಲ್ಲೂ ಮೂಡಬಹುದು ಮತ್ತು ನೀವು ಆ ಬಗ್ಗೆ ಚರ್ಚೆಗಳನ್ನೂ ಮಾಡಬಹುದು. ಬಹುತೇಕ ಈ ಪ್ರಶ್ನೆಗಳು ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದವು. ಅವು ಹೇಗೆಂದರೆ ಯಾವ ರೀತಿ ಪಠ್ಯಕ್ರಮವನ್ನು ಸಿದ್ಧಪಡಿಸುವುದು?, ಸ್ಥಳೀಯ ಭಾಷೆಗಳಲ್ಲಿ ಹೇಗೆ ಪಠ್ಯಕ್ರಮ ಮತ್ತು ವಿಷಯವನ್ನು ರೂಪಿಸುವುದು?, ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಶಿಕ್ಷಣದ ಆನ್ ಲೈನ್ ಮತ್ತು ಡಿಜಿಟಲ್ ಪಠ್ಯವನ್ನು ಸಿದ್ಧಪಡಿಸಲು ನೀತಿಯಡಿ ಉದ್ದೇಶಿಸಲಾಗಿದ್ದು, ಅದು ಹೇಗೆ ರೂಪುಗೊಳ್ಳುತ್ತದೆ. ಸಂಪನ್ಮೂಲಗಳ ಕೊರತೆಯಲ್ಲಿ ನಾವು ನಮ್ಮ ಗುರಿಗಳನ್ನು ತಲುಪುತ್ತೇವೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸ್ವಾಭಾವಿಕವಾಗಿ ಆಡಳಿತದ ಬಗ್ಗೆ ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಈ ಎಲ್ಲ ಪ್ರಶ್ನೆಗಳು ಅತ್ಯಂತ ಪ್ರಮುಖವಾದವು ಕೂಡ.
ಈ ಎಲ್ಲ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸಲು ನಾವೆಲ್ಲಾ ಸೇರಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣ ಸಚಿವಾಲಯದಲ್ಲಿ ನಿರಂತರ ಸಮಾಲೋಚನೆಗಳು ನಡೆಯುತ್ತಿವೆ. ಎಲ್ಲ ರಾಜ್ಯಗಳಲ್ಲಿನ ಸಂಬಂಧಿಸಿದವರ ಪ್ರತಿಯೊಂದು ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಮುಕ್ತವಾಗಿ ಆಲಿಸಲಾಗುತ್ತಿದೆ. ಅಂತಿಮವಾಗಿ ನಾವೆಲ್ಲರೂ ಸೇರಿ ಸಂದೇಹಗಳು ಮತ್ತು ಆತಂಕಗಳನ್ನು ನಿವಾರಿಸಬೇಕಾಗಿದೆ. ದೂರದೃಷ್ಟಿಯ ಸರಳೀಕರಣದೊಂದಿಗೆ ಈ ನೀತಿಯನ್ನು ರೂಪಿಸಲಾಗಿದ್ದು, ಅದೇ ರೀತಿ ಅದರ ಅನುಷ್ಠಾನಕ್ಕೂ ಕೂಡ ನಾವು ಅತ್ಯಂತ ಗರಿಷ್ಠ ಪ್ರಮಾಣದ ಸರಳತೆಯನ್ನು ಪ್ರದರ್ಶಿಸಬೇಕಿದೆ.
ಈ ಶಿಕ್ಷಣ ನೀತಿ ಕೇವಲ ಸರ್ಕಾರದ ಶಿಕ್ಷಣ ನೀತಿಯಲ್ಲ, ಇದು ದೇಶದ ಶಿಕ್ಷಣ ನೀತಿ. ಹೇಗೆ ವಿದೇಶಾಂಗ ಮತ್ತು ರಕ್ಷಣಾ ನೀತಿಗಳು ರಾಷ್ಟ್ರದ ನೀತಿಗಳಾಗಿರಲಿವೆಯೋ ಹಾಗೂ ಯಾವುದೇ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುವುದಿಲ್ಲವೋ ಅಂತೆಯೇ ಈ ಶಿಕ್ಷಣ ನೀತಿ ಕೂಡ ದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಯಾವುದೇ ಸರ್ಕಾರವಿದ್ದರೂ ಅಥವಾ ದೇಶವನ್ನು ಯಾರೇ ಆಳುತ್ತಿದ್ದರೆ ಎಂಬುದು ಮುಖ್ಯವಲ್ಲ. 30 ವರ್ಷಗಳ ನಂತರ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದ್ದು, ಇದು ದೇಶದ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ.
ಮಾನ್ಯರೇ, ಕ್ಷಿಪ್ರವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮಗ್ರ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನ ನಮ್ಮ ಗ್ರಾಮಗಳಿಗೂ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ದೇಶದ ಅತ್ಯಂತ ಕಡುಬಡವರಿಗೂ ಅದು ಲಭ್ಯವಾಗುತ್ತಿರುವುದರಿಂದ, ದುರ್ಬಲರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರಿಗೂ ಸಹ ಮಾಹಿತಿ ಲಭ್ಯವಾಗುತ್ತಿದ್ದು, ಅವರ ಜ್ಞಾನವೂ ಸಹ ಹೆಚ್ಚುತ್ತಿದೆ.
ನಾನು ಗಮನಿಸುತ್ತಿದ್ದೇನೆ ಇಂದು ನಮ್ಮ ಹಲವು ಯುವ ಮಿತ್ರರು ತಮ್ಮ ವಿಡಿಯೋ ಬ್ಲಾಗ್ ಮೂಲಕ ವಿಡಿಯೋ ಸ್ಟ್ರೀಮಿಂಗ್ ಚಾನಲ್ ಗಳನ್ನು ನಡೆಸುತ್ತಿದ್ದಾರೆ ಮತ್ತು ಪ್ರತಿಯೊಂದು ವಿಷಯದ ಕುರಿತು ಉತ್ತಮ ಬೋಧನೆಯನ್ನು ಲಭ್ಯವಾಗುವಂತೆ ಮಾಡಿದ್ದಾರೆ. ಇದು ಬಡ ಬಾಲಕ ಅಥವಾ ಬಾಲಕಿ ಊಹಿಸಿಕೊಳ್ಳಲು ಸಹ ಸಾಧ್ಯವಿರಲಿಲ್ಲ. ತಂತ್ರಜ್ಞಾನ ಸುಲಭವಾಗಿ ತಲುಪುತ್ತಿರುವುದರಿಂದ ಪ್ರಾದೇಶಿಕ ಮತ್ತು ಸಾಮಾಜಿಕ ಅಸಮತೋಲನ ಸಮಸ್ಯೆ ಅತ್ಯಂತ ಪರಿಣಾಮಕಾರಿಯಾಗಿ ತಗ್ಗುತ್ತಿದೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಗರಿಷ್ಠ ಪ್ರಮಾಣದ ತಾಂತ್ರಿಕ ಪರಿಹಾರಗಳ ಬಳಕೆಯನ್ನು ಉತ್ತೇಜಿಸುವುದು ನಮ್ಮ ಹೊಣೆಗಾರಿಕೆಯಾಗಿದೆ.
ಮಾನ್ಯರೇ,
ಯಾವುದೇ ವ್ಯವಸ್ಥೆ, ಅದರ ಒಳಗೊಳ್ಳುವಿಕೆ ಮತ್ತು ಸೇರ್ಪಡೆಯಿಂದಾಗಿ ಅದು ಪರಿಣಾಮಕಾರಿಯಾಗುತ್ತದೆ ಮತ್ತು ಅದು ಆಡಳಿತ ಪದ್ಧತಿಯನ್ನು ಅವಲಂಬಿಸಿದೆ. ಈ ನೀತಿ ಕೂಡ ಆಡಳಿತಕ್ಕೆ ಸಂಬಂಧಿಸಿದಂತೆ ಅದೇ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಉನ್ನತ ಶಿಕ್ಷಣದ ಪ್ರತಿಯೊಂದು ಅಂಶಗಳಲ್ಲಿಯೂ ಅದು ಶೈಕ್ಷಣಿಕವಾಗಿರಬಹುದು, ತಾಂತ್ರಿಕ ಅಥವಾ ವೃತ್ತಿಪರವಾಗಿರಬಹುದು, ಶಿಕ್ಷಣದ ಪ್ರತಿಯೊಂದು ವಿಧಾನದಲ್ಲೂ ಸೋಮಾರಿತನವನ್ನು ಹೋಗಲಾಡಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆಡಳಿತಾತ್ಮಕ ಹಂತಗಳನ್ನು ಕನಿಷ್ಠಗೊಳಿಸುವ ಮೂಲಕ ಉತ್ತಮ ಸಮನ್ವಯ ಖಾತ್ರಿಪಡಿಸುವ ನಿಟ್ಟಿನಲ್ಲಿ ನೀತಿಯಡಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಉನ್ನತ ಶಿಕ್ಷಣದ ನಿಯಂತ್ರಣವನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು ಮತ್ತು ಈ ನೀತಿಯ ಮೂಲಕ ಇನ್ನಷ್ಟು ಉನ್ನತೀಕರಿಸಲಾಗುವುದು.
ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಆರೋಗ್ಯಕರ ಸ್ಪರ್ಧೆಗಳನ್ನು ಉತ್ತೇಜಿಸುವ ಮೂಲಕ ಶ್ರೇಣೀಕೃತ ಸ್ವಾಯತ್ತತೆ ಪದ್ಧತಿಯನ್ನು ಪರಿಚಯಿಸಲು ಪ್ರಯತ್ನಗಳು ನಡೆದಿವೆ ಮತ್ತು ಆ ಮೂಲಕ ಸಂಸ್ಥೆಗಳಿಗೆ ಅವರ ಸಾಧನೆ ಆಧರಿಸಿ ಬಹುಮಾನ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020)ಅನ್ನು ಅಕ್ಷರಶಃ ಜಾರಿಗೊಳಿಸುವುದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ನಿಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೆಪ್ಟೆಂಬರ್ 25ರೊಳಗೆ ಇಂತಹ ವರ್ಚುಯಲ್ ಸಮಾವೇಶಗಳನ್ನು ಆಯೋಜಿಸಬೇಕೆಂದು ನಾನು ನಿಮ್ಮೆಲ್ಲರಲ್ಲೂ ವಿಶೇಷ ಮನವಿಯನ್ನು ಮಾಡುತ್ತೇನೆ. ಅದರ ಉದ್ದೇಶ ನಾವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು ಎಂಬುದಾಗಿದೆ. ಬಿಡುವು ಮಾಡಿಕೊಂಡು ಈ ಸಮಾವೇಶದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮತ್ತೊಮ್ಮೆ ನನ್ನ ಕೃತಜ್ಞತೆಗಳನ್ನು ಹೇಳಲು ಬಯಸುತ್ತೇನೆ. ನಿಮ್ಮೆಲ್ಲರಿಗೂ ಶುಭಾಶಯಗಳು.
ಧನ್ಯವಾದಗಳು.
देश की Aspirations को पूरा करने का महत्वपूर्ण माध्यम शिक्षा नीति और शिक्षा व्यवस्था होती है।
— PMO India (@PMOIndia) September 7, 2020
शिक्षा व्यवस्था की जिम्मेदारी से केंद्र , राज्य सरकार, स्थानीय निकाय, सभी जुड़े होते हैं।
लेकिन ये भी सही है कि शिक्षा नीति में सरकार, उसका दखल, उसका प्रभाव, कम से कम होना चाहिए: PM
शिक्षा नीति से जितना शिक्षक, अभिभावक जुड़े होंगे, छात्र जुड़े होंगे, उतना ही उसकी प्रासंगिकता और व्यापकता, दोनों ही बढ़ती है।
— PMO India (@PMOIndia) September 7, 2020
देश के लाखों लोगों ने, शहर में रहने वाले, गांव में रहने वाले, शिक्षा क्षेत्र से जुड़े लोगों ने, इसके लिए अपना फीडबैक दिया था, अपने सुझाव दिए थे: PM
गांव में कोई शिक्षक हो या फिर बड़े-बड़े शिक्षाविद, सबको राष्ट्रीय शिक्षा नीति, अपनी शिक्षा शिक्षा नीति लग रही है।
— PMO India (@PMOIndia) September 7, 2020
सभी के मन में एक भावना है कि पहले की शिक्षा नीति में यही सुधार तो मैं होते हुए देखना चाहता था।
ये एक बहुत बड़ी वजह है राष्ट्रीय शिक्षा नीति की स्वीकारता की: PM
आज दुनिया भविष्य में तेजी से बदलते Jobs, Nature of Work को लेकर चर्चा कर रही है।
— PMO India (@PMOIndia) September 7, 2020
ये पॉलिसी देश के युवाओं को भविष्य की आवश्यकताओं के मुताबिक knowledge और skills, दोनों मोर्चों पर तैयार करेगी: PM
नई शिक्षा नीति, Studying के बजाय Learning पर फोकस करती है और Curriculum से और आगे बढ़कर Critical Thinking पर ज़ोर देती है।
— PMO India (@PMOIndia) September 7, 2020
इस पॉलिसी में Process से ज्यादा Passion, Practicality और Performance पर बल दिया गया है: PM
इसमें foundational learning और languages पर भी फोकस है।
— PMO India (@PMOIndia) September 7, 2020
इसमें learning Outcomes और teacher training पर भी फोकस है।
इसमें access और assessment को लेकर भी व्यापक रिफॉर्म्स किए गए हैं।
इसमें हर student को empower करने का रास्ता दिखाया गया है: PM
लंबे समय से ये बातें उठती रही हैं कि हमारे बच्चे बैग और बोर्ड एग्ज़ाम के बोझ तले, परिवार और समाज के दबाव तले दबे जा रहे हैं।
— PMO India (@PMOIndia) September 7, 2020
इस पॉलिसी में इस समस्या को प्रभावी तरीके से address किया गया है: PM
21वीं सदी में भी भारत को हम एक Knowledge Economy बनाने के लिए प्रयासरत हैं।
— PMO India (@PMOIndia) September 7, 2020
नई शिक्षा नीति ने Brain Drain को tackle करने के लिए और सामान्य से सामान्य परिवारों के युवाओं के लिए भी Best International Institutions के Campus भारत में स्थापित करने का रास्ता खोला है: PM
जब किसी भी सिस्टम में इतने व्यापक बदलाव होते हैं, तो कुछ शंकाएं-आशंकाएं स्वाभाविक ही हैं।
— PMO India (@PMOIndia) September 7, 2020
माता-पिता को लगता होगा कि अगर इतनी आज़ादी बच्चों को मिलेगी, अगर Stream खत्म हो जाएंगी तो आगे कॉलेज में उनको दाखिला कैसे मिलेगा, करियर का क्या होगा?: PM
प्रोफेसर्स, टीचर्स के मन में सवाल होंगे कि वो खुद को इस बदलाव के लिए तैयार कैसे कर पाएंगे? इस प्रकार का पाठयक्रम कैसे मैनेज हो पाएगा?
— PMO India (@PMOIndia) September 7, 2020
आप सभी के पास भी अनेक सवाल होंगे, जिन पर आप चर्चा भी कर रहे हैं: PM
प्रोफेसर्स, टीचर्स के मन में सवाल होंगे कि वो खुद को इस बदलाव के लिए तैयार कैसे कर पाएंगे? इस प्रकार का पाठयक्रम कैसे मैनेज हो पाएगा?
— PMO India (@PMOIndia) September 7, 2020
आप सभी के पास भी अनेक सवाल होंगे, जिन पर आप चर्चा भी कर रहे हैं: PM
ये सभी सवाल महत्वपूर्ण हैं,
— PMO India (@PMOIndia) September 7, 2020
हर सवाल के समाधान के लिए सब मिलकर काम कर रहे हैं। शिक्षा मंत्रालय की तरफ से भी लगातार संवाद जारी है।
राज्यों में हर स्टेकहोल्डर की पूरी बात,हर राय को खुले मन से सुना जा रहा है।
आखिर हम सभी को मिलकर ही तो तमाम शंकाओं और आशंकाओं का समाधान करना है: PM
ये शिक्षा नीति, सरकार की शिक्षा नीति नहीं है। ये देश की शिक्षा नीति है।
— PMO India (@PMOIndia) September 7, 2020
जैसे विदेश नीति देश की नीति होती है,
रक्षा नीति देश की नीति होती है,
वैसे ही शिक्षा नीति भी देश की ही नीति है: PM
कोई भी System, उतना ही Effective और Inclusive हो सकता है, जितना बेहतर उसका गवर्नेंस मॉडल होता है।
— PMO India (@PMOIndia) September 7, 2020
यही सोच Education से जुड़ी गवर्नेंस को लेकर भी ये पॉलिसी रिफ्लेक्ट करती है: PM
कोशिश ये की जा रही है कि Higher Education के हर पहलू, चाहे वो Academic हो, Technical हो, Vocational हो, हर प्रकार की शिक्षा को Silos से बाहर निकाला जाए।
— PMO India (@PMOIndia) September 7, 2020
Administrative Layers को कम से कम रखा जाए, उनमें अधिक समन्वय हो, ये प्रयास भी इस पॉलिसी के माध्यम से किया गया है: PM
Graded Autonomy के concept के पीछे भी कोशिश यही है कि हर कॉलेज, हर यूनिवर्सिटी के बीच healthy competition को encourage किया जाए और जो संस्थान बेहतर perform करते हैं उनको reward किया जाए: PM
— PMO India (@PMOIndia) September 7, 2020
अब हम सभी का ये सामूहिक दायित्व है कि NEP-2020 की इस भावना को हम Letter and Spirit में लागू कर सकें: PM
— PMO India (@PMOIndia) September 7, 2020