Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಶಿಷ್ಯವೃತ್ತಿ (ಅಪ್ರೆಂಟಿಷಿಪ್) ಉತ್ತೇಜನ ಯೋಜನೆಗೆ ತನ್ನ ಅನುಮೋದನೆ ನೀಡಿದೆ. 10 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು 2019-20ರ ಹೊತ್ತಿಗೆ 50 ಲಕ್ಷ ತರಬೇತಿ ನಿರತರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಈ ಯೋಜನೆಯನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂ.ಎಸ್.ಡಿ.ಇ.) ಸಚಿವಾಲಯದ ಅಡಿಯಲ್ಲಿ ತರಬೇತಿ ಮಹಾನಿರ್ದೇಶಕರು (ಡಿಜಿಟಿ) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಾರೆ. ಇದು ಮಾಲೀಕರಿಗೆ ಅಪ್ರೆಂಟಿಸ್ ಗಳನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಒಬ್ಬ ಅಪ್ರೆಂಟಿಸ್ ಗೆ ನೀಡಲಾಗುವ ಒಟ್ಟ ಸ್ಟೈಫಂಡ್ ನ ಶೇ.25ರಷ್ಟನ್ನು ಭಾರತ ಸರ್ಕಾರ ನೇರವಾಗಿ ಮಾಲೀಕರೊಂದಿಗೆ ಹಂಚಿಕೊಳ್ಳುತ್ತದೆ. ಇದೇ ಮೊದಲ ಬಾರಿಗೆ ಅಪ್ರೆಂಟಿಸ್ ಗಳನ್ನು ಸೇರಿಸಿಕೊಳ್ಳಲು ಮಾಲೀಕರಿಗೆ ಆರ್ಥಿಕಪ್ರೋತ್ಸಾಹಕ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಇದರ ಜೊತೆಗೆ ಅಪ್ರೆಂಟಿಸ್ಷಿಪ್ ತರಬೇತಿಗೆ ಅತ್ಯವಶ್ಯಕವಾದ ಮೂಲಭೂತವಾದ ತರಬೇತಿಗೂ ಇದು ಬೆಂಬಲ ನೀಡುತ್ತದೆ. ಮೂಲಭೂತ ತರಬೇತಿ ನೀಡಲು ತಗಲುವ ಶೇ.50ರಷ್ಟು ವೆಚ್ಚದ ಬೆಂಬಲವನ್ನೂ ಭಾರತ ಸರ್ಕಾರ ನೀಡಲಿದೆ.

ಈ ಯೋಜನೆಯು ದೇಶದಲ್ಲಿ ಇಡೀ ಅಪ್ರೆಂಟಿಷಿಪ್ ಪರಿಸರ ವ್ಯವಸ್ಥೆಯನ್ನು ವೇಗೋತ್ಕರ್ಷಗೊಳಿಸುತ್ತದೆ ಮತ್ತು ಎಲ್ಲ ಬಾಧ್ಯಸ್ಥರಿಗೂ ವಿನ್-ವಿನ್ ಪರಿಸ್ಥಿತಿಯನ್ನು ಒದಗಿಸುತ್ತದೆ. ಇದು ದೇಶದಲ್ಲಿ ಒಂದು ಶಕ್ತಿಶಾಲಿ ಕೌಶಲ ನೀಡಿಕೆ ಸಾಧನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಿನ್ನೆಲೆ

ದೇಶದಲ್ಲಿ ನುರಿತ ಮಾನವಶಕ್ತಿಯ ಅಭಿವೃದ್ಧಿಗೆ ಅಪ್ರೆಂಟಿಷಿಪ್ ತರಬೇತಿ ಒಂದು ಸಮರ್ಥ ಮಾರ್ಗ ಎಂದು ಪರಿಗಣಿಸಲಾಗಿದೆ. ಇದು ಕೈಗಾರಿಕಾ ಮುಂದಾಳತ್ವದ ಅಭ್ಯಾಸ ಆಧಾರಿತ, ಸಮರ್ಥ ಮತ್ತು ಪರಿಣಾಮಕಾರಿ ಮಾದರಿಯ ತರಬೇತಿಯಾಗಿದೆ. ಪ್ರಧಾನಮಂತ್ರಿಯವರು ಉದ್ಘಾಟಿಸಿರುವ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ 2015 ರಾಷ್ಟ್ರೀಯ ನೀತಿ ಸಹ ಅಪ್ರೆಂಟಿಷಿಪ್ ಮೇಲೆ ಗಮನ ಹರಿಸಿದ್ದು, ಇದನ್ನು ಭಾರತದಲ್ಲಿ ನುರಿತ ಮಾನವಶಕ್ತಿಯ ನಿರ್ಮಾಣಕ್ಕೆ ಉತ್ತಮ ಸಾಧನ ಎಂದು ಪರಿಗಣಿಸಿದೆ. ಹಾಲಿ ಯೋಜನೆಯು ಸಹ ರಾಷ್ಟ್ರೀಯ ನೀತಿ 2015ರಲ್ಲಿ ತಿಳಿಸಲಾಗಿರುವ ಉದ್ದೇಶಗಳ ಈಡೇರಿಕೆಯ ಗುರಿಯನ್ನು ಹೊಂದಿದೆ. ಈ ನೀತಿಯು 2020ರ ಹೊತ್ತಿಗೆ 10ಪಟ್ಟು ಅವಕಾಶಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಕೈಗಾರಿಕೆಗಳೊಂದಿಗೆ ಅದರಲ್ಲೂ ಎಂ.ಎಸ್.ಎಂ.ಇ.ಗಳ ಜೊತೆ ಕೆಲಸ ಮಾಡುವ ಪ್ರಸ್ತಾಪವನ್ನು ಹೊಂದಿದೆ.