Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಿಯೋ ಒಲಿಂಪಿಕ್ಸ್ ಗೆ ಶುಭ ಕೋರಲು ಅಥ್ಲೀಟ್ ಗಳನ್ನು ಭೇಟಿ ಮಾಡಲಿರುವ ಪ್ರಧಾನಿ


ಮುಂಬರುವ ರಿಯೋ ಡಿ ಜನೈರೋ ಒಲಿಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಥ್ಲೀಟ್ಸ್ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಲಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಸೋಮವಾರ ಸಂಭವನೀಯ ರಿಯೋ ಅಥ್ಲೀಟ್ ಗಳನ್ನು ಭೇಟಿ ಮಾಡಲಿದ್ದಾರೆ. ಈವರೆಗೆ ರಿಯೋ ಒಲಿಂಪಿಕ್ಸ್ ಗೆ 13 ಕ್ರೀಡಾ ಸ್ಪರ್ಧೆಗಳ ಸುಮಾರು 100 ಅಥ್ಲೀಟ್ ಗಳು ಅರ್ಹತೆ ಪಡೆದಿದ್ದಾರೆ.

ಕ್ರೀಡಾಪಟುಗಳೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಲಿರುವ ಪ್ರಧಾನಮಂತ್ರಿಯವರು, ವಿಶ್ವದ ಅತಿ ದೊಡ್ಡ ಕ್ರೀಡಾ ಕಣದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಅವರಿಗೆ ಶುಭ ಕೋರಲಿದ್ದಾರೆ.

***

AKT/NT