ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೂ.37,500 ಕೋಟಿ ಆರ್ಥಿಕ ವೆಚ್ಚದೊಂದಿಗೆ ಮೇಲ್ಮೈ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯು ಭಾರತದ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಕಾರ್ಯಕ್ರಮವನ್ನು ವೇಗಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು 2030ರ ವೇಳೆಗೆ 100 ದಶಲಕ್ಷ ಟನ್ ಕಲ್ಲಿದ್ದಲನ್ನು ಅನಿಲೀಕರಿಸುವ ರಾಷ್ಟ್ರೀಯ ಗುರಿಯನ್ನು ಮುನ್ನಡೆಸುತ್ತದೆ, ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಎಲ್ಎನ್ಜಿ (ಶೇ. 50 ಕ್ಕಿಂತ ಹೆಚ್ಚು ಆಮದು), ಯೂರಿಯಾ (~ಶೇ. 20 ಆಮದು), ಅಮೋನಿಯಾ (~ಶೇ. 100 ಆಮದು), ಮತ್ತು ಮೆಥನಾಲ್ (~ಶೇ. 80-90 ಆಮದು) ನಂತಹ ಪ್ರಮುಖ ಉತ್ಪನ್ನಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಒಂದು ಮಹತ್ವದ ಪೂರಕ ಸುಧಾರಣೆಯಾಗಿ, ಸರ್ಕಾರವು ನಿಯಂತ್ರಣೇತರ ವಲಯದ ಸಂಪರ್ಕ ಹರಾಜು ಚೌಕಟ್ಟಿನ ಅಡಿಯಲ್ಲಿ “ಕಲ್ಲಿದ್ದಲು ಅನಿಲೀಕರಣಕ್ಕೆ ಕಾರಣವಾಗುವ ಸಿಂಗಾಸ್ ಉತ್ಪಾದನೆ” ಉಪ-ವಲಯದ ಕಲ್ಲಿದ್ದಲು ಸಂಪರ್ಕದ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಿಸಿದೆ. ಇದು ಕಲ್ಲಿದ್ದಲು ಅನಿಲೀಕರಣ ಯೋಜನೆಗಳಲ್ಲಿನ ಹೂಡಿಕೆಗೆ ದೀರ್ಘಾವಧಿಯ ನೀತಿಯ ಖಾತ್ರಿಯನ್ನು ಒದಗಿಸುತ್ತದೆ.
ಯೋಜನೆಯ ಪ್ರಮುಖ ಲಕ್ಷಣಗಳು:
ಕಾರ್ಯತಂತ್ರದ ಮತ್ತು ಆರ್ಥಿಕ ಪ್ರಯೋಜನಗಳು:
ಹಿನ್ನೆಲೆ:
ಭಾರತವು ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಒಂದನ್ನು (~401 ಬಿಲಿಯನ್ ಟನ್) ಮತ್ತು ಲಿಗ್ ನೈಟ್ ನಿಕ್ಷೇಪಗಳನ್ನು (~47 ಬಿಲಿಯನ್ ಟನ್) ಹೊಂದಿದೆ. ದೇಶದ ಒಟ್ಟು ಇಂಧನ ಬಳಕೆಯಲ್ಲಿ ಕಲ್ಲಿದ್ದಲು ಶೇ. 55 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಅನಿಲೀಕರಣವು ಕಲ್ಲಿದ್ದಲು/ಲಿಗ್ ನೈಟ್ ಅನ್ನು ‘ಸಂಶ್ಲೇಷಿತ ಅನಿಲ’ (ಸಿಂಗಾಸ್) ಆಗಿ ಪರಿವರ್ತಿಸುತ್ತದೆ; ಇದು ದೇಶೀಯವಾಗಿ ಇಂಧನಗಳು ಮತ್ತು ರಾಸಾಯನಿಕಗಳನ್ನು ತಯಾರಿಸಲು ಬೇಕಾದ ಬಹುಮುಖ ವಸ್ತುವಾಗಿದ್ದು, ಹೆಚ್ಚಿನ ಮೌಲ್ಯದ ಆಮದುಗಳನ್ನು ಬದಲಿಸಲು ಹಾಗೂ ಜಾಗತಿಕ ಪೂರೈಕೆ ಅಡೆತಡೆಗಳು ಮತ್ತು ಬೆಲೆ ಏರಿಳಿತಗಳಿಂದ ಭಾರತವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಭಾರತದ ಪ್ರಮುಖ ಪರ್ಯಾಯ ಉತ್ಪನ್ನಗಳಾದ ಎಲ್ಎನ್ಜಿ, ಯೂರಿಯಾ, ಅಮೋನಿಯಂ ನೈಟ್ರೇಟ್, ಅಮೋನಿಯಾ, ಕೋಕಿಂಗ್ ಕಲ್ಲಿದ್ದಲು, ಮೆಥನಾಲ್, ಡಿಎಂಇ ಮತ್ತು ಇತರ ವಸ್ತುಗಳ ಆಮದು ವೆಚ್ಚವು 2025ರ ಹಣಕಾಸು ವರ್ಷದಲ್ಲಿ ಸುಮಾರು ರೂ. 2.77 ಲಕ್ಷ ಕೋಟಿಯಷ್ಟಿತ್ತು. ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಇರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಈ ಅವಲಂಬನೆಯ ಅಪಾಯವನ್ನು ಮತ್ತಷ್ಟು ಉಲ್ಲೇಖಿಸಿದೆ.
ರಾಷ್ಟ್ರೀಯ ಕಲ್ಲಿದ್ದಲು ಅನಿಲೀಕರಣ ಮಿಷನ್ (2021) ಮತ್ತು ಜನವರಿ 2024 ರಲ್ಲಿ ಅಂಗೀಕರಿಸಲಾದ ರೂ. 8,500 ಕೋಟಿ ಯೋಜನೆಯನ್ನು (ಇದರ ಅಡಿಯಲ್ಲಿ ರೂ. 6,233 ಕೋಟಿ ಮೌಲ್ಯದ 8 ಯೋಜನೆಗಳು ಅನುಷ್ಠಾನದಲ್ಲಿವೆ) ಆಧರಿಸಿ, ಈ ಹೊಸ ಯೋಜನೆಯು ಗಣನೀಯವಾಗಿ ಹೆಚ್ಚಿನ ಬೆಂಬಲದೊಂದಿಗೆ ಕಾರ್ಯದ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.
*****
The scheme for Promotion of Surface Coal/Lignite Gasification Projects that has been cleared by the Cabinet will further energy security, boost investment and create job opportunities for the youth. It will add strength to our efforts to strengthen the tech and innovation system…
— Narendra Modi (@narendramodi) May 13, 2026