ಪಿಎಂಇಂಡಿಯಾ

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಅವರೇ, ನನ್ನ ಹಿರಿಯ ಸಂಪುಟ ಸಹೋದ್ಯೋಗಿಗಳೇ ಮತ್ತು ಇದೇ ಕ್ಷೇತ್ರದ ಪ್ರತಿನಿಧಿಯಾಗಿರುವ ಶ್ರೀ ರಾಜನಾಥ್ ಸಿಂಗ್ ಅವರೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ ಅವರೇ, ಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ ಜೀ, ಶ್ರೀ ದಿನೇಶ್ ಶರ್ಮಾಜಿ, ವಿಧಾನ ಸಭೆ ಸ್ಪೀಕರ್ ಶ್ರೀ ನಾರಾಯಣ ದೀಕ್ಷಿತ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರುಗಳೇ. ಉತ್ತರ ಪ್ರದೇಶದ ಸಂಸತ್ ಸದಸ್ಯರೇ ಮತ್ತು ಇಲ್ಲಿ ಹಾಜರಿರುವ ಮಹಿಳೆಯರೇ ಹಾಗು ಮಹನೀಯರೇ. !
ಲಕ್ನೋದ ಸಂಸತ್ ಸದಸ್ಯರು ನನ್ನನ್ನು ಸ್ವಾಗತಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಸ್ವಾಗತಿಸಿದರು. ಮತ್ತು ಕಾಶಿಯ ಸಂಸತ್ ಸದಸ್ಯರು ನನಗೆ ಬಹಳ ಕೃತಜ್ಞತೆ ಸಲ್ಲಿಸಿದರು. ಇಂದು ನಾನು ಎರಡನೇ ಬಹು ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದಿರುವ ಅದೃಷ್ಟವಂತನಾಗಿದ್ದೇನೆ. ಮತ್ತು ನನಗೆ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಬಗ್ಗೆ ಮಾತನಾಡುವ ಅವಕಾಶ ಹಾಗು ಎರಡೂ ಕಾರ್ಯಕ್ರಮಗಳಲ್ಲಿ ಅವರ ಚಿಂತನೆ ಮತ್ತು ಮುನ್ನೋಟವನ್ನು ಗೌರವಿಸುವ ಅವಕಾಶವನ್ನೂ ಗಳಿಸಿಕೊಂಡಿದ್ದೇನೆ.
ಇಲ್ಲಿಗೆ ಬರುವುದಕ್ಕೆ ಮೊದಲು, ನಾನು ದಿಲ್ಲಿಯಲ್ಲಿ ಅಟಲ್ ಜಲ್ ಯೋಜನಾವನ್ನು ಕಾರ್ಯಾರಂಭ ಮಾಡಿದೆ. ಈ 6000 ಕೋ.ರೂ.ಗಳ ಯೋಜನೆ ಅಡಿಯಲ್ಲಿ ಉತ್ತರ ಪ್ರದೇಶ ಸಹಿತ ದೇಶದ 7 ರಾಜ್ಯಗಳಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯ ಆಗಲಿದೆ.
ಇದರೊಂದಿಗೆ, ಲಡಾಕ್ ನೊಂದಿಗೆ ಹಿಮಾಚಲವನ್ನು ಜೋಡಿಸುವ ರೋಹ್ಟಾಂಗ್ ಸುರಂಗಕ್ಕೆ ಅಟಲ್ ಸುರಂಗವೆಂದು ಹೆಸರಿಡಲಾಗಿದೆ.
ಯೋಗಾಯೋಗವಿರಬಹುದು, ಇಂದು ನಾವು ಉತ್ತಮ ಆಡಳಿತ ದಿನವನ್ನುಆಚರಿಸುತ್ತಿದ್ದೇವೆ. ಉತ್ತರ ಪ್ರದೇಶ ಸರಕಾರ ಕಾರ್ಯಾಚರಿಸುವ ಕಟ್ಟಡದಲ್ಲಿ ಅಟಲ್ ಜೀ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಅವರ ಬೃಹತ್ ಪ್ರತಿಮೆಯು ಲೋಕ ಭವನದಲ್ಲಿ ಕೆಲಸ ಮಾಡುವ ಜನತೆಗೆ ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ಪ್ರೇರಣೆ ನೀಡುವುದನ್ನು ಮುಂದುವರೆಸಲಿದೆ.
ಸ್ನೇಹಿತರೇ, ಅಟಲ್ ಜೀ ಅವರ ಸ್ಮರಣಾರ್ಥ ಅಟಲ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ಹಾಕಲಾಗಿದೆ. ಹಲವಾರು ವರ್ಷಗಳ ಕಾಲ ಅಟಲ್ ಜೀ ಅವರ ಕರ್ಮ ಭೂಮಿಯಾಗಿದ್ದ ಲಕ್ನೋ ಅವರ ಸಂಸತ್ ಸ್ಥಾನವೂ ಆಗಿತ್ತು. ಮತ್ತು ಅಲ್ಲಿಗೆ ಯಾರೇ ಆದರೂ ಹೋಗಿ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಸಂಸ್ಥೆಗೆ ಶಿಲಾನ್ಯಾಸ ಮಾಡುವ ಅವಕಾಶ ಪಡೆಯುವುದು ಅವರಿಗೆ ಒಂದು ಗೌರವ ಎಂದು ಪರಿಗಣಿಸಲ್ಪಡುತ್ತದೆ. ನಾನು ಈ ಘಟನೆಗಳ ಅದೃಷ್ಟಶಾಲಿಯಾಗಿದ್ದೇನೆ.
ಅಟಲ್ ಜೀ ಅವರು ಲಕ್ನೋದ ಸಂದತ್ ಸದಸ್ಯರಾಗಿದ್ದಾಗ, ಅವರಿಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಆರಂಭಿಸಿದ್ದರು. ಅದು ರಿಂಗ್ ರಸ್ತೆ ಕಾಮಗಾರಿ ಇರಲಿ, ಹಳೆಯ ಲಕ್ನೋದ ಚರಂಡಿ ವ್ಯವಸ್ಥೆ ಕಾಮಗಾರಿಯಾಗಲಿ, ವಿಮಾನ ನಿಲ್ದಾಣದ ಆಧುನೀಕರಣ , ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನಾ, ಜೈವಿಕ ತಂತ್ರಜ್ಞಾನ ಪಾರ್ಕ್, ಇವೆಲ್ಲ ಲಕ್ನೋಗೆ ಅಟಲ್ ಜೀ ಅವರು ನೀಡಿದ ಹೊಸ ಗುರುತುಗಳು. ಈಗ ಸಂಸತ್ ಸದಸ್ಯರಾಗಿ ಶ್ರೀ ರಾಜನಾಥ್ ಜೀ ಅವರು ಈ ಆಡಳಿತವನ್ನು ನಿಭಾಯಿಸುತ್ತಿದ್ದಾರೆ. ಅವರೂ ನಗರವನ್ನು ಅಭಿವೃದ್ದಿ ಮಾಡುತ್ತಿದ್ದಾರೆ.
ಸ್ನೇಹಿತರೇ , ಅಟಲ್ ಜೀ ಅವರು ಜೀವನವನ್ನು ಸಣ್ನ ಸಣ್ಣ ತುಂಡುಗಳಾಗಿ ನೋಡಬಾರದು ಎನ್ನುತ್ತಿದ್ದರು. ಅದನ್ನು ಇಡೀಯಾಗಿ ಗೃಹಿಸಬೇಕು ಎನ್ನುತ್ತಿದ್ದರು. ಇದು ಸರಕಾರಕ್ಕೂ ಅಷ್ಟೇ ಸತ್ಯವಾದ ಮಾತು ಮತ್ತು ಉತ್ತಮ ಆಡಳಿತಕ್ಕೂ ಅನ್ವಯಿಸುವಂತಹದ್ದು. ಉತ್ತಮ ಆಡಳಿತಕ್ಕೆ ಇದೂ ಒಂದು ವಿಷಯ ಸೂಚಿ.
ಸಮಸ್ಯೆಗಳನ್ನು ಇಡೀಯಾಗಿ ಪರಿಗಣಿಸದ ಹೊರತು ಮತ್ತು ಅವುಗಳನ್ನು ಅದೇ ರೀತಿಯಲ್ಲಿ ಪರಿಹರಿಸಲು ಸಾಧ್ಯವಾಗದ ಹೊರತು, ಉತ್ತಮ ಆಡಳಿತ ನೀಡಲು ಸಾಧ್ಯವಾಗದು. ಯೋಗೀ ಜೀ ಅವರ ಸರಕಾರ ಎಲ್ಲರನ್ನೂ ಒಳಗೊಳ್ಳುವ ಚಿಂತನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವುದು ನನಗೆ ತೃಪ್ತಿ ತಂದಿದೆ.
ಅಟಲ್ ವೈದ್ಯಕೀಯ ವಿಶ್ವವಿದ್ಯಾಲಯವು ಅದೇ ಚಿಂತನೆಯನ್ನು ಪ್ರತಿಫಲಿಸುತ್ತದೆ. ಈ ವಿಶ್ವವಿದ್ಯಾಲಯವು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಏಕರೂಪತೆಯನ್ನು ಒದಗಿಸುತ್ತದೆ. ವೈದ್ಯ ಶಿಕ್ಷಣದಲ್ಲಿ ತರಗತಿ ಪಠ್ಯದಿಂದ ಹಿಡಿದು ಪರೀಕ್ಷೆಗಳವರೆಗೆ ಏಕರೂಪತೆ ಮತ್ತು ಸಹಜ ವಿಶಿಷ್ಟತೆ ಇರಲಿದೆ.
ಅದು ವೈದ್ಯಕೀಯ ಕಾಲೇಜು ಇರಲಿ, ದಂತ ವೈದ್ಯಕೀಯ ಕಾಲೇಜು ಇರಲಿ, ಅರೆ ವೈದ್ಯಕೀಯ ಕಾಲೇಜು ಇರಲಿ, ನರ್ಸಿಂಗ್ ಯಾ ಇನ್ನಾವುದೇ ಇರಲಿ ಮತ್ತು ವೈದ್ಯಕೀಯ ಸಂಬಂಧಿತ ಪದವಿ ಇರಲಿ ಈ ವಿಶ್ವವಿದ್ಯಾಲಯ ಈ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತದೆ ಮತ್ತು ಅದೇ ಮೇಲುಸ್ತುವಾರಿಯಲ್ಲಿ ಶಿಸ್ತನ್ನು ತರುತ್ತದೆ.
ಸರಕಾರಿ, ಅರೆ ಸರಕಾರಿ ಅಥವ ಖಾಸಗಿ ವೈದ್ಯ ಸಂಸ್ಥೆಗಳು ಸಹಿತ ಎಲ್ಲಾ ಸಂಸ್ಥೆಗಳ ಸಂಲಗ್ನತೆಯು ಈ ವಿಶ್ವವಿದ್ಯಾಲಯದಿಂದಾಗುತ್ತದೆ. ಎಲ್ಲಾ ಕಡೆಯೂ ಒಂದೇ ಶೈಕ್ಷಣಿಕ ಅಧಿವೇಶನದ ವೇಳಾ ಪಟ್ಟಿ ಅನ್ವಯವಾಗುತ್ತದೆ ಮತ್ತು ಪರೀಕ್ಷೆಗಳು ಪಾರದರ್ಶಕ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ನಡೆಯುತ್ತವೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯೊಂದಿಗೆ ಉತ್ತರ ಪ್ರದೇಶದಲ್ಲಿ ವೈದ್ಯ ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಲಿದೆ.
ಸ್ನೇಹಿತರೇ, ಉತ್ತರ ಪ್ರದೇಶ ಸಹಿತ ಇಡೀ ದೇಶದಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ದಿಗಾಗಿ ನಮ್ಮ ಮುನ್ನೋಟ ಮತ್ತು ದಿಕ್ಕು ಮೊದಲ ದಿನದಿಂದಲೇ ಸ್ಪಷ್ಟವಾಗಿದೆ. ನಾವು ಆರೋಗ್ಯವನ್ನು ಸುಧಾರಿಸಲು ಆದ್ಯತೆ ನೀಡಿದ್ದೇವೆ ಮಾತ್ರವಲ್ಲ ಅದಕ್ಕೆ ಸಂಬಂಧಿಸಿದ ಸೌಕರ್ಯಗಳನ್ನೂ ಸುಧಾರಿಸಲೂ ಗಮನ ಕೊಟ್ಟಿದ್ದೇವೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರದ ಪ್ರಗತಿ ಪಥದಲ್ಲಿ – ಮೊದಲನೆಯದಾಗಿ ರೋಗ ತಡೆ ಆರೋಗ್ಯ ರಕ್ಷಣಾ ವಲಯಕ್ಕೆ ಒತ್ತು ನೀಡಲಾಗುತ್ತದೆ. ಎರಡನೆಯದಾಗಿ ಸಾಧ್ಯವಿದ್ದಷ್ಟು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ವಿಸ್ತರಿಸುವುದು. ಮೂರನೆಯದಾಗಿ ಪೂರೈಕೆ ಕ್ಷೇತ್ರದಲ್ಲಿ ಮಧ್ಯಪ್ರವೇಶಗಳು- ಅಂದರೆ ಈ ವಲಯದ ಪ್ರತೀ ಬೇಡಿಕೆಯೂ ಪೂರೈಕೆಯಾಗುವಂತೆ ಖಾತ್ರಿಪಡಿಸುವುದು.
ಮತ್ತು ನಾಲ್ಕನೇ ಆಂದೋಲನ ಮಾದರಿಯ ಮಧ್ಯಪ್ರವೇಶಗಳೆಂದರೆ ಆರೋಗ್ಯ ಸಂಬಂಧಿ ಯೋಜನೆಗಳನ್ನು ಆಂದೋಲನ ಮಾದರಿಯಲ್ಲಿ ಜಾರಿ ಮಾಡುವುದು. ನೀವು ಸರಕಾರದ ಎಲ್ಲಾ ಯೋಜನೆಗಳನ್ನು/ಕಾರ್ಯಕ್ರಮಗಳನ್ನು ನೋಡಿದರೆ , ಅವು ಇದೇ ದಾರಿಯಲ್ಲಿ ಸಾಗುತ್ತವೆ ಮತ್ತು ಈ ಮಾದರಿ ಪಥದ ಅನ್ವಯ ಮುಂದುವರಿಯುತ್ತವೆ.
ಸ್ನೇಹಿತರೇ, ಅನಾರೋಗ್ಯದ ಮೇಲಿನ ಖರ್ಚನ್ನು ಕಡಿಮೆ ಮಾಡಬೇಕೆಂದರೆ ಅನಾರೋಗ್ಯಕ್ಕೆ ಈಡಾಗುವುದನ್ನು ತಪ್ಪಿಸಬೇಕು. ಇದೇ ರೋಗ ಪ್ರತಿಬಂಧಕ ಆರೋಗ್ಯ ರಕ್ಷಣೆ. ಮತ್ತು ಇದಕ್ಕಾಗಿ , ನಾವು ಜನರಿಗೆ ಹೆಚ್ಚು ಹೆಚ್ಚು ಸಾಕ್ಷಾಧಾರಗಳ ಮೂಲಕ ಜಾಗೃತಿ ಮೂಡಿಸಿದರೆ ಅಥವಾ ಹೆಚ್ಚು ಮಂದಿ ಸಾಮಾನ್ಯ ನಾಗರಿಕರು ಈ ಬಗ್ಗೆ ಗಂಭೀರವಾಗಿ ಕಾರ್ಯಾಚರಿಸಿದರೆ ಅವರಲ್ಲಿ ರೋಗ ನಿಧಾನ ಶಕ್ತಿ ಹೆಚ್ಚಿ, ಅವರ ದೇಹ ಆರೋಗ್ಯವಂತವಾಗುತ್ತದೆ.
ಸ್ವಚ್ಚ ಭಾರತ್- ಈ ಮಾದರಿಯಲ್ಲಿ ರೋಗ ಪ್ರತಿಬಂಧಕ ಆರೋಗ್ಯ ರಕ್ಷಣೆ ಬಗ್ಗೆ ಬೃಹತ್ ಪ್ರಚಾರಾಂದೋಲನ ಮಾಡುವುದಾದರೆ , ರೋಗ ಪ್ರತಿಬಂಧಕ ಆರೋಗ್ಯ ರಕ್ಷಣೆಗೆ ಆಗ ಯೋಗವು ಶೂನ್ಯ ಖರ್ಚಿನ ಆರೋಗ್ಯ ರಕ್ಷಣಾ ಸೇವೆಯಾಗಿ ಒದಗಿ ಬರುತ್ತದೆ.
ಮಾತೆಯರನ್ನು ಹೊಗೆಯಿಂದ ಮುಕ್ತಗೊಳಿಸಲು ಜಾರಿಗೆ ತಂದ ಉಜ್ವಲಾ ಯೋಜನಾ ರೋಗ ತಡೆ ಆರೋಗ್ಯ ರಕ್ಷಣಾ ಕಾರ್ಯಕ್ರಮ. ಇದೇ ವೇಳೆ, ದೇಶದ ಪ್ರತೀ ನಾಗರಿಕರೂ ಉತ್ತಮ ದೇಹ ದಾರ್ಢ್ಯ ಹೊಂದಿರಬೇಕೆಂಬ ಕಾರಣಕ್ಕೆ , ಅದಕ್ಕೆ ಉತ್ತೇಜನ ನೀಡಲು ಫಿಟ್ ಇಂಡಿಯಾ ಆಂದೋಲನವನ್ನು , ಅದರ ಜೊತೆಗೆ ರೋಗ ಪ್ರತಿಬಂಧಕ ಆರೋಗ್ಯ ರಕ್ಷಣಾ ವ್ಯವಸ್ಥೆಯಾಗಿ ಆಯುರ್ವೇದವನ್ನು ಉತ್ತೇಜಿಸಲಾಯಿತು. ಇದನ್ನು ಯಾಕೆ ಮಾಡಲಾಯಿತೆಂದರೆ, ಈಗ ಸಮಗ್ರ ಆರೋಗ್ಯ ರಕ್ಷಣೆಯ ಬೇಡಿಕೆ ಹೆಚ್ಚುತ್ತಿದೆ.
ಪ್ರತಿಯೊಬ್ಬರೂ ಈಗ ಔಷಧಿಗಳ ಅಡ್ದ ಪರಿಣಾಮವನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಮತ್ತು ಆಯುಷ್ ; ಆಯುರ್ವೇದ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು. ಆದುದರಿಂದ ಇಂತಹ ಉಪಕ್ರಮಗಳು ರೋಗ ತಡೆ ನಿಟ್ಟಿನಲ್ಲಿ ಪ್ರಮುಖ ಕೊಡುಗೆಯನ್ನು ನೀಡುತ್ತಿವೆ. ನಾವು ರೋಗ ತಡೆ ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದಷ್ಟು ಆರೋಗ್ಯ ವಲಯದಲ್ಲಿ ನಮ್ಮ ಕಳವಳಗಳು ಕಡಿಮೆಯಾಗುತ್ತವೆ. ಒಂದೆಡೆ ಇದು ಅಂಟು ರೋಗ ತಡೆಗೆ ಸಹಕಾರಿಯಾಗುವುದಲ್ಲದೆ, ಇನ್ನೊಂದೆಡೆ ಅದು ಜೀವನ ವಿಧಾನದಿಂದಾಗಿ ಬರುತ್ತಿರುವಂತಹ ರೋಗಗಳನ್ನು ಗುಣಪಡಿಸುವಲ್ಲಿ ಕ್ರಿಯಾಶೀಲವಾಗಿ ಸಹಕಾರಿಯಾಗುತ್ತಿದೆ.
ಸ್ನೇಹಿತರೇ, ರೋಗ ತಡೆ ಆರೋಗ್ಯ ರಕ್ಷಣೆಯ ಒಂದು ಕೊಂಡಿ ಎಂದರೆ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಸ್ಥ್ಯ/ ಕ್ಷೇಮ ಕೇಂದ್ರಗಳ ಸ್ಥಾಪನೆ. ಈ ಕೇಂದ್ರಗಳು ರೋಗಗಳ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತಿವೆ. ಅದೇ ರೀತಿ ಸರಕಾರವು ಲಸಿಕೆ ಕಾರ್ಯಕ್ರಮಕ್ಕೆ ವಿಶೇಷ ಒತ್ತನ್ನು ಕೊಟ್ಟು ಅದನ್ನು ವಿಸ್ತರಿಸುತ್ತಿದೆ. ಹೊಸ ಲಸಿಕೆಗಳ ಸೇರ್ಪಡೆಯೊಂದಿಗೆ ನಾವು ದುರ್ಗಮ ಪ್ರದೇಶಗಳಲ್ಲಿಯೂ ಲಸಿಕೆ ಆಂದೋಲನ ನಡೆಸಲು ಯಶಸ್ವಿಯಾಗಿದ್ದೇವೆ.
ಜಾನುವಾರು/ ಪಶುಗಳ ಆರೋಗ್ಯಕ್ಕಾಗಿ ಕಾಲು ಬಾಯಿ ರೋಗದ ಲಸಿಕೆಯನ್ನು ಇತ್ತೀಚೆಗೆ ನಾವು ಕಾನ್ಪುರದಲ್ಲಿ ಆರಂಭಿಸಿದೆವು. ಇದು ಕೂಡಾ ಜಾನುವಾರು ಆರೋಗ್ಯಕ್ಕೆ ಹೇಗೆ ಉಪಯುಕ್ತವೋ, ಮಾನವರಲ್ಲಿ ರೋಗ ತಡೆಗೂ ಉಪಯುಕ್ತ. ಜಾನುವಾರಿಗೆ ಯಾವುದೇ ರೋಗಗಳು ಬಾರದಿದ್ದರೆ , ಅಲ್ಲಿ ರೋಗ ವಾಹಕ, ರೋಗ ಪ್ರಸರಣಕ್ಕೆ ಕಾರಣಗಳಿಲ್ಲ. ಹೀಗೆ ಸಮಗ್ರ ಧೋರಣೆಯನ್ನು ಆವಶ್ಯಕತೆಗಳಿಗೆ ತಕ್ಕಂತೆ ಕೈಗೊಳ್ಳಬೇಕಾಗುತ್ತದೆ. .
ಸ್ನೇಹಿತರೇ , ಆರೋಗ್ಯ ರಕ್ಷಣೆಯ ಎರಡನೇಯ ಆಯಾಮವನ್ನು ಉತ್ತೇಜಿಸಲು , ಅಂದರೆ ಕೈಗೆಟಕುವ ದರದಲ್ಲಿ ಲಭ್ಯತೆಗಾಗಿ ಸರಕಾರ ಹಲವು ಚಾರಿತ್ರಿಕ ನಿರ್ಧಾರಗಳನ್ನು ಕೈಗೊಂಡಿದೆ.
ಆಯುಷ್ಮಾನ್ ಭಾರತ್ ನಿಂದಾಗಿ, ದೇಶದ 70 ಲಕ್ಷ ಬಡ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಆಯುಷ್ಮಾನ ಭಾರತ್ ಯೋಜನಾ ವಿಶ್ವದಲ್ಲಿಯೇ ಅತೀ ದೊಡ್ದ ಯೋಜನೆ. ಭಾರತದಲ್ಲಿ ಆಯುಷ್ಮಾನ ಭಾರತದ ಯೋಜನೆಯ ಪ್ರಯೋಜನ ಪಡೆದವರ ಪಟ್ಟಿಯು ಅಮೆರಿಕಾ, ಕೆನಡಾ, ಮತ್ತು ಮೆಕ್ಸಿಕೋಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು. 70 ಲಕ್ಷ ಜನ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇವರಲ್ಲಿ ಬಹು ಪಾಲು ಜನತೆ ಸಾವನ್ನು ಕಾಯುತ್ತಾ ಕುಳಿತುಕೊಳ್ಳುವುದು ಉತ್ತಮ ಎಂದು ಭಾವಿಸಿದ್ದರು. ಬೇಗ ಸಾವು ಬಂದರೆ ಒಳಿತು ಎಂದು ನಂಬಿದ್ದವರು. ಅವರು ಸಾಧ್ಯವಾದಷ್ಟು ದಿನ ತೊಂದರೆಗಳಿಂದ ಬಳಲುವುದಕ್ಕೆ ತಯಾರಿದ್ದರೇ ಹೊರತು ಚಿಕಿತ್ಸೆ ಪಡೆದು ಅಥವಾ ಶಸ್ತ್ರಚಿಕಿತ್ಸೆ ಪಡೆದು ಸಾಲವನ್ನು ಮಕ್ಕಳ ಮೇಲೆ ಬಿಟ್ಟು ಹೋಗಲು ತಯಾರಿರಲಿಲ್ಲ. ಅವರು ಹೃದಯ ಖಾಯಿಲೆ ಅಥವಾ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯಲು ತಯಾರಾಗುತ್ತಿರಲಿಲ್ಲ, ಅವರು ಎಲ್ಲಾ ಆಶಾವಾದಗಳನ್ನೂ ಕಳೆದುಕೊಂಡವರಾಗಿದ್ದರು.
ಆದರೆ ಆಯುಷ್ಮಾನ ಭಾರತ್ ಬಳಿಕ ಅವರು ಹೊಸ ಬದುಕನ್ನು ಕಂಡು ಕೊಂಡರು, ಹೊಸ ಭರವಸೆ, ಹೊಸ ಉತ್ಸಾಹವನ್ನು ತುಂಬಿಕೊಂಡರು ಮತ್ತು 70 ಲಕ್ಷ ಜನ ಒಂದು ರೂಪಾಯಿಯನ್ನು ಕೂಡಾ ವ್ಯಯಿಸದೆ ಚಿಕಿತ್ಸೆ ಪಡೆದುಕೊಂಡರು. ಮತ್ತು ಉತ್ತರ ಪ್ರದೇಶವು ಈ ಕಾರ್ಯಕ್ರಮವನ್ನು ಕ್ರಿಯಾಶೀಲವಾಗಿ ಕೈಗೆತ್ತಿಕೊಂಡಿರುವುದಕ್ಕೆ ನನಗೆ ಸಂತೋಷವಿದೆ. ಉತ್ತರ ಪ್ರದೇಶವೊಂದರಲ್ಲಿಯೇ , ಸುಮಾರು 11 ಲಕ್ಷ ಜನ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ಅದೇ ರೀತಿ , ಜನ ಔಷಧಿ ಯೋಜನೆಯ ಮೂಲಕ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡಲಾಗಿದೆ. ಅಂದರೆ ನೀವು ಕೆಮಿಸ್ಟ್ ಅಂಗಡಿಗೆ ಹೋದರೆ ಮತ್ತು ಅಲ್ಲಿ ಖರೀದಿಸಿದರೆ 100 ರೂಪಾಯಿ ಆಗುವ ಔಷಧಿಯು ಜನ ಔಷಧಿ ಕೇಂದ್ರಗಳಲ್ಲಿ ಬರೇ 30-40 ರೂಪಾಯಿಗಳಿಗೆ ಸಿಗುತ್ತದೆ. ದಿನ ನಿತ್ಯ ಔಷಧಿ ತೆಗೆದುಕೊಳ್ಳಬೇಕಾದವರು ತಮ್ಮ ಔಷಧಿ ಬಿಲ್ ನಲ್ಲಿ ತಿಂಗಳೊಂದಕ್ಕೆ 800, 1000, 1,200, 1,500 ರೂಪಾಯಿ ಉಳಿತಾಯ ಮಾಡುತ್ತಿದ್ದಾರೆ. ಅದರಿಂದಾಗಿ ಈ ಜನ ಔಷಧಿ ಕೇಂದ್ರಗಳು ದೇಶಾದ್ಯಂತ ಜನಪ್ರಿಯಗೊಳ್ಳುತ್ತಿವೆ ಮತ್ತು ಜನ ಔಷಧಿ ಕೇಂದ್ರಗಳ ಔಷಧಿಗಳನ್ನು ಜನ ಮೆಚ್ಚುತ್ತಿದ್ದಾರೆ. ಇದೇ ವೇಳೆಗೆ ಸ್ಟೆಂಟ್ ಗಳು ಮತ್ತು ಮೊಣ ಕಾಲು ಜೋಡಣೆಗಳ ದರದಲ್ಲಿ ಗಮನೀಯ ಇಳಿಕೆ ಆಗಿದೆ.
ಸ್ನೇಹಿತರೇ, ಬಡವರಲ್ಲಿ ಬಡವರಿಗೂ ಆರೋಗ್ಯ ರಕ್ಷಣ ಸೇವೆ ಲಭ್ಯವಾಗುತ್ತಿದೆ.ಆರೋಗ್ಯ ರಕ್ಷಣಾ ಸೇವೆಯ ಬೇಡಿಕೆಯೂ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚಿದಂತೆ , ಹೊಸ ಆಸ್ಪತ್ರೆಗಳಿಗೆ , ಹೊಸ ಕ್ಲಿನಿಕ್ ಗಳಿಗೆ , ಮತ್ತು ಹೊಸ ನರ್ಸಿಂಗ್ ಹೋಂ ಗಳಿಗೆ ಅವಕಾಶ ಹೆಚ್ಚಿ ಅವುಗಳು ತೆರೆಯಲ್ಪಡುತ್ತಿವೆ.
ಕಳೆದ 5 ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗಿದೆ. ಈ ವರ್ಷ ದೇಶಾದ್ಯಂತ 75 ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ ನೀಡಲು ನಿರ್ಧರಿಸಲಾಗಿದೆ. ಪ್ರತೀ ಮೂರು ಲೋಕ ಸಭಾ ಕ್ಷೇತ್ರಗಳಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ನಮ್ಮ ಮುನ್ನೋಟವನ್ನು ನಾವು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಮತ್ತು ಉತ್ತರ ಪ್ರದೇಶಕ್ಕೂ ಇದರಿಂದ ಬಹಳಷ್ಟು ಪ್ರಯೋಜನವಾಗುತ್ತಿದೆ. ಕಳೆದ 2-3 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಎರಡು ಡಜನ್ನಿಗೂ ಅಧಿಕ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನವು ಈಗಾಗಲೇ ಆರಂಭಗೊಂಡಿವೆ ಅಥವಾ ನಿರ್ಮಾಣ ಪ್ರಕ್ರಿಯೆಯಲ್ಲಿವೆ.
ಸ್ನೇಹಿತರೇ, ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲು , ಸರಕಾರಗಳು ರಾಷ್ತ್ರೀಯ ಪೋಷಣಾ ಅಭಿಯಾನ ಸಹಿತ ಹಲವಾರು ಹೊಸ ಕಾರ್ಯಕ್ರಮಗಳನ್ನು ಆಂದೋಲನ ರೀತಿಯಲ್ಲಿ ಅನುಷ್ಟಾನಿಸುತ್ತಿವೆ. 2025 ರೊಳಗೆ ಕ್ಷಯರೋಗವನ್ನು ಭಾರತದಿಂದ ಮೂಲೋತ್ಪಾಟನೆ ಮಾಡಲು ರಾಷ್ಟ್ರೀಯ ಆಂದೋಲನ ನಡೆಯುತ್ತಿದೆ. ಈ ನಾಲ್ಕು ಆಯಾಮಗಳು ದೇಶದ ಜನರ ಆರೋಗ್ಯವನ್ನು ಸುಧಾರಿಸಿ , ರೋಗ ಚಿಕಿತ್ಸೆಗೆ ಸಂಬಂಧಿಸಿ ಅವರ ವೆಚ್ಚವನ್ನು ಕಡಿಮೆ ಮಾಡುತ್ತಿವೆ.
ಸ್ನೇಹಿತರೇ,
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಈ ಕೆಲಸದ ಪ್ರಯೋಜನ ಉತ್ತರ ಪ್ರದೇಶದಲ್ಲಿಯೂ ಕಾಣಸಿಗುತ್ತಿದೆ. ಈ ವರ್ಷ ಯೋಗೀ ಜೀ ಮತ್ತು ಅವರ ತಂಡ ಹಾಗು ಉತ್ತರ ಪ್ರದೇಶದ ಜನತೆ ಮೆದುಳು ಜ್ವರ ನಿಯಂತ್ರಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.ಮತ್ತು ನಾನು ನಿಮ್ಮೆಲ್ಲರಿಗೂ ಅದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ಸಂಸ್ಥೆಗಳು ಉತ್ತರ ಪ್ರದೇಶದ ಈ ಯಶೋಗಾಥೆಯನ್ನು ಕೊಂಡಾಡಿವೆ.
ಪ್ರತೀ ಹಳ್ಳಿಗೂ ನೈರ್ಮಲ್ಯ ಮತ್ತು ಆರೋಗ್ಯ ಸವಲತ್ತುಗಳು ಲಭ್ಯವಾಗುವಂತೆ ಮಾಡಲು ಇಲ್ಲಿ ಸರಕಾರ ಆರಂಭಿಸಿರುವ ಆಂದೋಲನವು ಉತ್ತರ ಪ್ರದೇಶದ ಜನತೆಯ ಬದುಕನ್ನು ಸುಲಭ ಸಾಧ್ಯಗೊಳಿಸುವ ನಿಟ್ಟಿನಲ್ಲಿಯ ಪ್ರಮುಖ ಹೆಜ್ಜೆ.
ಈಗ ನಾವು ರಾಷ್ತ್ರೀಯ ಪೋಷಣಾ ಅಭಿಯಾನ ಮತ್ತು ಇಂದ್ರಧನುಷ್ ಆಂದೋಲನವನ್ನು ಗಮನಿಸಬೇಕು. ಇವುಗಳನ್ನು ಉತ್ತರ ಪ್ರದೇಶದ ಪ್ರತೀ ಮಗುವೂ ಸುರಕ್ಷಿತವಾಗಿರುವಂತೆ ಮತ್ತು ಪ್ರತೀ ನಾಗರಿಕರೂ ಆರೋಗ್ಯಪೂರ್ಣವಾಗಿರುವಂತೆ ತ್ವರಿತಗೊಳಿಸಲಾಗಿದೆ.
ಸರಕಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ ಆಂದೋಲನ ಇಲ್ಲಿ , ಉತ್ತರ ಪ್ರದೇಶದ ಜನತೆಯ ಬದುಕನ್ನು ಸರಳ, ಸುಲಭ ಸಾಧ್ಯಗೊಳಿಸುವತ್ತ ದೊಡ್ಡ ಹೆಜ್ಜೆಯನ್ನಿಟ್ಟಿದೆ.
ರಾಷ್ಟ್ರೀಯ ಪೋಷಣೆ ಅಭಿಯಾನ ಮತ್ತು ಇಂದ್ರಧನುಷ್ ಆಂದೋಲನ ಈಗ ನಮ್ಮ ಆದ್ಯತೆಯಾಗಬೇಕು. ಇವೆರಡನ್ನೂ ಉತ್ತರ ಪ್ರದೇಶದ ಪ್ರತಿಯೊಂದು ಮಗುವೂ ಸುರಕ್ಷಿತವಾಗಿರುವಂತೆ , ಪ್ರತಿಯೊಬ್ಬ ನಾಗರಿಕನೂ ಆರೋಗ್ಯ ಪೂರ್ಣವಾಗಿರುವಂತೆ ತ್ವರಿತಗೊಳಿಸಬೇಕು.
ಸ್ನೇಹಿತರೇ, ಇಂದು ಉತ್ತಮ ಆಡಳಿತದ ದಿನ, ನಾವು ಹೊಸ ವರ್ಷದತ್ತ ಸಾಗುತ್ತಿದ್ದೇವೆ ಮತ್ತು ಹೊಸ ದಶಕಕ್ಕೆ ಕಾಲಿಡುತ್ತಿದ್ದೇವೆ, ಆಗ ನಾವು ಅಟಲ್ ಜೀ ಅವರು ಹೇಳಿದ ಇನ್ನೊಂದು ಮಾತನ್ನು ನೆನಪಿಸಿಕೊಳ್ಲಬೇಕು. ಅಟಲ್ ಜೀ ಅವರು ಭಾರತಕ್ಕೆ ಪ್ರತೀ ತಲೆಮಾರಿನ ಕೊಡುಗೆಗಳನ್ನು ಎರಡು ನೆಲೆಗಳಲ್ಲಿ ಮೌಲ್ಯಮಾಪನ ಮಾಡಬೇಕಾಗುತ್ತದೆ ಎನ್ನುತ್ತಿದ್ದರು. ಮತ್ತು ಈ ಎರಡೂ ಗುಣಮಾನಕಗಳು ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತಹವು. ನಾವು ಈ ಎರಡು ಗುಣಮಾನಕಗಳನ್ನು ಎದುರಿಟ್ಟುಕೊಂಡು ಎಲ್ಲವನ್ನೂ ಮಾಡಬೇಕಾಗುತ್ತದೆ. ಅಟಲ್ ಜೀ ಅವರು ನಮಗೆ ದಾರಿ ತೋರಿಸಿಕೊಟ್ಟಿದ್ದಾರೆ. ಎರಡು ಗುಣಮಾನಕಗಳಲ್ಲಿ ಮೊದಲನೆಯದ್ದು ನಮಗೆ ಮೊದಲಿನಿಂದ ಬಂದ ಸಮಸ್ಯೆಗಳಲ್ಲಿ ಎಷ್ಟನ್ನು ನಾವು ಪರಿಹರಿಸಿಕೊಂಡಿದ್ದೇವೆ ಎಂಬುದು?. ಹೌದು, ನಾವು ಇತರ ಸಂಗತಿಗಳ ಜೊತೆ ಸಮಸ್ಯೆಗಳನ್ನು ಪರಂಪರೆಯಾಗಿ ಹೊಂದಿದ್ದೇವೆ. ಆದರೆ ನಾವು ಪರಂಪರೆಯಂತೆ ಬಂದ ಎಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದೇವೆ?. ಮತ್ತು ಎರಡನೇಯದಾಗಿ ನಾವು ನಮ್ಮ ಪ್ರಯತ್ನಗಳ ಮೂಲಕ ರಾಷ್ಟ್ರದ ಭವಿಷ್ಯದ ಅಭಿವೃದ್ದಿಗೆ ಎಂತಹ ಬಲಿಷ್ಟವಾದ ಅಡಿಗಲ್ಲುಗಳನ್ನು ಹಾಕಿದ್ದೇವೆ? ಎಂಬುದು.
ಸ್ನೇಹಿತರೇ, ಈ ಎರಡು ಪ್ರಶ್ನೆಗಳ ಹಿನ್ನೆಲೆಯಲ್ಲಿ , ನಾವಿಂದು ಹೇಳಬಹುದಾಗಿದೆ, 2020 ರ ವರ್ಷದಲ್ಲಿ ಭಾರತವು ಅಭೂತಪೂರ್ವ ಸಾಧನೆಗಳತ್ತ ಸಾಗಲಿದೆ ಎಂಬುದಾಗಿ. ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಸಮಸ್ಯೆಗಳು ಏನೇ ಇರಲಿ, ನಮಗೆ ಪರಂಪರೆಯಿಂದ ಬಂದಿರುವ ಸವಾಲುಗಳು ಏನೇ ಇರಲಿ, ನಾವು ಅವುಗಳನ್ನು ಸತತವಾಗಿ ಪರಿಹರಿಸಲು ಪ್ರಯತ್ನಿಸುತ್ತೇವೆ.
ಈ ಸಂವಿಧಾನದ ವಿಧಿ 370 ರ ಖಾಯಿಲೆ ಎಷ್ಟು ಹಳೆಯದು! ಅದು ಎಷ್ಟೊಂದು ಕಠಿಣತಮವಾಗಿ ಕಾಣುತ್ತಿತ್ತು! ನಮಗೆ ಈ ಸಮಸ್ಯೆ ಪರಂಪರೆಯಾಗಿ ಬಂದಿತ್ತು, ಆದರೆ ಇಂತಹ ಗುರುತರ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಮತ್ತು ಅದನ್ನು ಸುಲಭವಾಗಿ ಮಾಡಲಾಯಿತು. ಪ್ರತಿಯೊಬ್ಬರ ನಂಬಿಕೆಗಳೂ ನುಚ್ಚುನೂರಾದವು.
ಅಂತಹ ಹಳೆಯ ಪ್ರಕರಣವಾದ ರಾಮ ಜನ್ಮ ಭೂಮಿ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ತರಲಾಯಿತು. ಭಾರತ ಸ್ವತಂತ್ರಗೊಂಡು , ವಿಭಾಜಿಸಲ್ಪಟ್ಟ ಬಳಿಕ ಅಲ್ಲಿಂದ ಲಕ್ಷಾಂತರ ಬಡವರು, ದಲಿತರು, ಶೋಷಿತರು, ದುರ್ಬಲರು ಪಾಕಿಸ್ತಾನದಿಂದ, ಬಾಂಗ್ಲಾ ದೇಶದಿಂದ ಮತ್ತು ಅಪಘಾನಿಸ್ತಾನದಿಂದ ತಮ್ಮ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ಪುತ್ರಿಯರ ಮಾನ ಉಳಿಸುವುದಕ್ಕಾಗಿ ನಿರಾಶ್ರಿತರಾಗಿ ಭಾರತಕ್ಕೆ ಬರುವಂತಾಯಿತು. ಪೌರತ್ವ ಕಾಯ್ದೆಯು ಇಂತಹ ನಿರಾಶ್ರಿತರಿಗೆ ಘನತಯನ್ನು ಕೊಡಮಾಡುತ್ತದೆ. 130 ಕೋಟಿ ಭಾರತೀಯರು ಹಲವು ಇಂತಹ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.
ಇಂತಹ ಭರವಸೆಯ, ಆತ್ಮವಿಶ್ವಾಸದ ಭಾರತ 2020 ನ್ನು ಪ್ರವೇಶಿಸುತ್ತಿದೆ, ಹೊಸ ದಶಕಕ್ಕೆ ಕಾಲಿಡುತ್ತಿದೆ. ಮತ್ತು ಈಗಲೂ ಪ್ರತೀ ಭಾರತೀಯರೂ ಉಳಿದ ಸಮಸ್ಯೆಗಳನ್ನು ಪರಿಹರಿಸಲು ಕಠಿಣ ಪ್ರಯತ್ನ ಮಾಡುತ್ತಿದ್ದಾರೆ. ಅದು ಪ್ರತಿ ಬಡವರಿಗೆ ಮನೆ ಒದಗಿಸುವುದಿರಲಿ ಅಥವಾ ಪ್ರತೀ ಮನೆಗೆ ನೀರು ಒದಗಿಸುವುದಿರಲಿ , ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.
ಸವಾಲುಗಳು ಎಷ್ಟೇ ದೊಡ್ದದಿರಲಿ , ನಾವು ಸವಾಲುಗಳಿಗೆ ಸವಾಲು ಹಾಕುವ ರೀತಿಯಲ್ಲಿ ಮುಂದುವರೆಯುತ್ತಿದ್ದೇವೆ.
ಸ್ನೇಹಿತರೇ, 2014 ರಿಂದ 2019 ರ ನಡುವಿನ ಅವಧಿಯಲ್ಲಿ ನಾವು ಸವಾಲುಗಳಿಗೆ ಸವಾಲೊಡ್ಡುವ ಯಾವುದೇ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳಲಿಲ್ಲ. 2014 ಕ್ಕೆ ಮೊದಲು ದೇಶದ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ಶೌಚಾಲಯಗಳನ್ನು ಹೊಂದಿರಲಿಲ್ಲ, ಈಗ ಶೌಚಾಲಯಗಳು ಅವರನ್ನು ತಲುಪಿವೆ.
ಕೋಟ್ಯಾಂತರ ಬಡ ಕುಟುಂಬಗಳು , ನಮ್ಮ ಮಾತೆಯರು ಮತ್ತು ಸಹೋದರಿಯರು ಅಡುಗೆ ಮನೆಯ ಹೊಗೆಯಲ್ಲಿ ಜೀವನ ಕಳೆಯುತ್ತಿದ್ದರು, ಆದರೆ ಈಗ ಅಡುಗೆ ಅನಿಲ ಪ್ರತೀ ಮನೆಯನ್ನೂ ತಲುಪುತ್ತಿದೆ.
ಸಾವಿರಾರು ಹಳ್ಳಿಗಳು , ಸಾವಿರಾರು ಕುಟುಂಬಗಳು ಕತ್ತಲಿನಲ್ಲಿ ಬದುಕುವಂತಾಗಿತ್ತು, ಆದರೆ ಈಗ ಅವರ ಮನೆಗಳಿಗೆ ವಿದ್ಯುತ್ ತಲುಪುತ್ತಿದೆ.
ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಬ್ಯಾಂಕುಗಳ ಜೊತೆ ಜೋಡಿಸಲ್ಪಟ್ಟಿರಲಿಲ್ಲ. , ಈಗ ಅವರಿಗಾಗಿ ಬ್ಯಾಂಕುಗಳ ಬಾಗಿಲುಗಳು ತೆರೆದುಕೊಂಡಿವೆ.
ಕೋಟ್ಯಾಂತರ ಬಡ ಕುಟುಂಬಗಳಿಗೆ ತಮ್ಮದೇ ಸ್ವಂತದ ಮನೆ ಇರಲಿಲ್ಲ. ಆದರೆ ಈಗ 2 ಕೋಟಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲಾಗಿದೆ. ಪ್ರತೀ ಬಡ ವಸತಿ ರಹಿತ ವ್ಯಕ್ತಿಗೆ 2022 ರೊಳಗೆ ಮನೆ ಒದಗಿಸುವ ಕಾರ್ಯ ತ್ವರಿತಗತಿಯಿಂದ ನಡೆಯುತ್ತಿದೆ.
ಹಳ್ಳಿಗಳಿಗೆ, ಗ್ರಾಮಗಳಿಗೆ ರಸ್ತೆ ಮತ್ತು ರೈಲು ಸಂಪರ್ಕ ಒದಗಿಸುವ ಕಾಮಗಾರಿಯೂ ತ್ವರಿತಗತಿಯಿಂದ ಸಾಗಿದೆ. ಪ್ರತೀ ಮನೆಗೂ ಕೊಳವೆ ನೀರು ಪೂರೈಸುವ ಗೊತ್ತುವಳಿಯನ್ನು ಈಡೇರಿಸಲು ನಾವು ಪೂರ್ಣವಾಗಿ ಸಿದ್ದರಾಗಿದ್ದೇವೆ. ಈ ಪರಿಹಾರಗಳು ನವ ಭಾರತದ ಪ್ರಗತಿಗೆ ಬಲಿಷ್ತ ನೆಲೆಗಟ್ಟನ್ನು ಒದಗಿಸುತ್ತಿವೆ. ಮತ್ತು ಈ ದೃಢ ನೆಲೆಗಟ್ಟಿನ ಮೇಲೆ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ನಿರ್ಧಾರ ಮತ್ತು ಕೋಟ್ಯಾಂತರ ಭಾರತೀಯರ ಜೀವನ ಮಟ್ಟವನ್ನು ಎತ್ತರಿಸುವ ಕೆಲಸವನ್ನು ಮಾಡಲು ಯತ್ನಿಸುತ್ತಿದ್ದೇವೆ. ಆ ಮೂಲಕ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದರಿಂದ ಬಡವರಲ್ಲಿ ಬಡವರು ಕೂಡಾ ಘನತೆ ಮತ್ತು ಗೌರವದೊಂದಿಗೆ ಬದುಕಬಹುದಾಗಿದೆ.
ಸ್ನೇಹಿತರೇ , ಇದು ಒಳ್ಳೆಯ ಆಡಳಿತ ; ಇದು ಸ್ವರಾಜ್, ಈ ಚಿಂತನೆಯನ್ನು ಅಟಲ್ ಬಿಹಾರಿ ವಾಜಪೇಯಿ ಜೀ ಮತ್ತು ಮಹಾತ್ಮಾ ಮಾಳವೀಯಜೀ ಸಹಿತ ಎಲ್ಲಾ ರಾಷ್ಟ್ರ ನಿರ್ಮಾಪಕರೂ ಹೊಂದಿದ್ದರು. ನಮ್ಮ ಸರಕಾರಕ್ಕೆ ಉತ್ತಮ ಆಡಳಿತ ಎಂದರೆ –
ಪ್ರತಿಯೊಬ್ಬರ ಕುಂದು ಕೊರತೆಗಳಿಗೂ ಪರಿಹಾರ; ಪ್ರತೀ ನಾಗರಿಕರಿಗೂ ಪ್ರಯೋಜನಗಳ ಲಭ್ಯವಾಗುವಿಕೆ; ಪ್ರತೀ ಭಾರತೀಯರಿಗೂ ಅವಕಾಶಗಳ ಲಭ್ಯತೆ, ಪ್ರತೀ ಭಾರತೀಯರಿಗೂ ಭದ್ರತೆ ಮತ್ತು ಲಭ್ಯತೆ. ಸರಕಾರದ ಪ್ರತೀ ವ್ಯವಸ್ಥೆಯೂ ಈ ಸಂಗತಿಗಳನ್ನು ಖಾತ್ರಿಪಡಿಸಬೇಕು.
ನಾವು ಉತ್ತಮ ಆಡಳಿತಕ್ಕೆ ಒಂದೇ ಒಂದು ಮಂತ್ರವನ್ನು ಹೊಂದಿದ್ದೇವೆ, ಅದೆಂದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಔರ್ ಸಬ್ ಕಾ ವಿಶ್ವಾಸ್. ನಾವೆಲ್ಲರೂ ಈ ಸ್ಪೂರ್ತಿಯಿಂದ ಮತ್ತು ಸ್ವಭಾವದಿಂದ ಒಗ್ಗೂಡಿದ್ದೇವೆ.
ಸ್ನೇಹಿತರೇ ನಾವು ಅಧಿಕಾರದ ಮೋಹದಿಂದ ದೂರ ಉಳಿಯಲು ಸತತ ಪ್ರಯತ್ನ ಮಾಡಿದ್ದೇವೆ. ಮತ್ತು ಜನತೆಯ ಸೇವೆಗಳ ಮೌಲ್ಯದ ಬಗ್ಗೆ ಗಮನ ಹರಿಸಿದ್ದೇವೆ. ಸಾಮಾನ್ಯ ನಾಗರಿಕರ ಬದುಕಿನಲ್ಲಿ ಸರಕಾರದ ಮಧ್ಯಪ್ರವೇಶ ಸಾದ್ಯವಿರುವಷ್ಟು ಕಡಿಮೆ ಪ್ರಮಾಣದಲ್ಲಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಗೊಂದಲ ಸೃಷ್ಟಿ ಮತ್ತು ಅಡೆ-ತಡೆ ನಿರ್ಮಾಣ ಮಾಡುವುದಕ್ಕೆ ಬದಲು ಸರಕಾರ ಸಾಮರಸ್ಯದ ಸಾಧನವಾಗಿರಬೇಕು ಎಂಬುದನ್ನು ಖಾತ್ರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ನೀವು ಮೌಲ್ಯಮಾಪನ ಮಾಡಿದರೆ , ನೀವಿದನ್ನು ಪ್ರತೀ ಹಂತದಲ್ಲಿಯೂ ಗಮನಿಸಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ.
ಪರಿಶೀಲನೆಗಾಗಿ ದಾಖಲೆಗಳ ದೃಢೀಕರಣದ ಯುಗದಿಂದ ದೇಶವೀಗ ಹೊರಗೆ ಬಂದಿದೆ. ನಿಮ್ಮನ್ನು ನೀವೇ ಅಂಗೀಕರಿಸಿದರೆ, ಮತ್ತು ಜವಾಬ್ದಾರಿ ತೆಗೆದುಕೊಂಡರೆ ಸರಕಾರಕ್ಕೆ ಅದು ಸಾಕು.
ಇಂದು ಬಹುತೇಕ ಸರಕಾರೀ ಸೇವೆಗಳನ್ನು ಆನ್ ಲೈನಿನಲ್ಲಿ ದೊರೆಯುವಂತೆ ಮಾಡಲಾಗಿದೆ ಮತ್ತು ಡಿಜಿಟಲೀಕರಣಗೊಳಿಸಲಾಗಿದೆ. ಹೆಚ್ಚಿನ ಸೇವೆಗಳು ಆನ್ ಲೈನಿನಲ್ಲಿವೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಪಿಂಚಣಿದಾರರಿಗೆ ಅವಶ್ಯವಾದ ಜೀವಿತ ಪ್ರಮಾಣಪತ್ರಗಳೂ ಇದರಲ್ಲಿ ಲಭ್ಯ. ಮೊದಲು ಸಾಮಾನ್ಯ ನಾಗರಿಕರು ದಾಖಲೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು.ಈಗ ಜೀವನ ಬಹಳ ಸುಲಭವಾಗಿದೆ.
ಸ್ನೇಹಿತರೇ, ನಾವು ಉತ್ತಮ ಆಡಳಿತದ ಹಂತದತ್ತ ಸಾಗುತ್ತಿದ್ದೇವೆ. ಅಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಬದಲು ಸರಕಾರ ಅವರ ಮನೆಗಳಿಗೆ ಹೋಗುತ್ತದೆ ಮತ್ತು ಅವರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಆಲಿಸುತ್ತದೆ. ನೀವಿದನ್ನು ಇಂದು ಜಾರಿಯಲ್ಲಿರುವ ಸಾರ್ವಜನಿಕ ಹಿತಾಸಕ್ತಿಯ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಣುತ್ತೀರಿ. ಯೋಜನೆಗಳ ಪ್ರಯೋಜನ ಒದಗಿಸಲು, ಫಲಾನುಭವಿಗಳನ್ನು ಗುರುತಿಸಲು ತಂತ್ರಜ್ಞಾನ ಮತ್ತು ದತ್ತಾಂಶ ವಿಜ್ಞಾನವನ್ನು ಬಳಸಲಾಗುತ್ತಿದೆ.
ನಾವು ನೇರ ನಗದು ವರ್ಗಾವಣೆಯನ್ನು ತರಲು ಪ್ರಯತ್ನ ಮಾಡಿದೆವು ಮತ್ತು ಸರಕಾರದ ಕೆಲಸದ ಸಂಸ್ಕೃತಿಯಲ್ಲಿ ತ್ವರಿತವಾಗಿ ಹಾಗು ಗುರಿ ನಿಗದಿತ ಪೂರೈಕೆಯನ್ನು ತಂದೆವು. ಇದು ಪಾರದರ್ಶಕತೆಯನ್ನು ತರುತ್ತಿದೆ, ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಗಳನು ಪೂರೈಸುತ್ತಿದೆ ಮತ್ತು ದೇಶದ ಪ್ರಾಮಾಣಿಕ ತೆರಿಗೆದಾರರ ಹಣ ಕೂಡಾ ಉಳಿತಾಯವಾಗುತ್ತಿದೆ.
ಸ್ನೇಹಿತರೇ, ಇಂದು ಈ ನೆಲದಿಂದ , ನಾನು ಮತ್ತೊಂದು ಕೋರಿಕೆಯನ್ನು ಯುವ ಸ್ನೇಹಿತರಿಗೆ ಮತ್ತು ಉತ್ತರ ಪ್ರದೇಶದ ಪ್ರತಿಯೊಬ್ಬ ನಿವಾಸಿಗೂ ಮಾಡಲು ಇಚ್ಚಿಸುತ್ತೇನೆ.
ಸ್ವಾತಂತ್ರ್ಯದ ಬಳಿಕದ ವರ್ಷಗಳಲ್ಲಿ ನಾವು ಹಕ್ಕುಗಳ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದೆವು, ಆದರೆ ಈಗ ನಾವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯತ್ತ ಸಾಗುತ್ತಿದ್ದೇವೆ. ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕನಸುಗಳತ್ತ ನೋಡುತ್ತಿದ್ದೇವೆ. ಈ ಕ್ಷಣದ ಅಗತ್ಯವೆಂದರೆ ನಾವು ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸಮಾನ ಒತ್ತನ್ನು ನೀಡಬೇಕಾಗಿದೆ.
ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿದವರು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರು ತಮ್ಮ ತಮ್ಮ ಮನೆಗಳಲ್ಲಿ ಕುಳಿತು ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಳ್ಳಬೇಕು-ಇದು ಸರಿಯಾದ ದಾರಿಯಾಗಿತ್ತೇ ಎಂಬುದಾಗಿ, ಇದು ಮೌಲ್ಯಯುತವಾದ ಪ್ರಚೋದನೆಯೇ? ಬೆಂಕಿ ಹಚ್ಚಲ್ಪಟ್ಟ ಮತ್ತು ಹಾಳು ಮಾಡಲಾದ ವಸ್ತುಗಳು ಅವರ ಮಕ್ಕಳ ಯಾವುದೇ ಬಳಕೆಗೆ ಲಭಿಸುವುದಿಲ್ಲವಲ್ಲವೇ?
ನಾವು ಒಂದು ಕ್ಷಣ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಬಗ್ಗೆ ಯೋಚಿಸೋಣ.ಪ್ರತಿಭಟನೆಯಲ್ಲಿ ಗಾಯಗೊಂಡ ಸಾಮಾನ್ಯ ನಾಗರಿಕರು, ಪೊಲೀಸರು ಮತ್ತು ಅವರ ಕುಟುಂಬ ವರ್ಗದವರ ಬಗ್ಗೆ ಯೋಚಿಸೋಣ. ಗಾಳಿ ಸುದ್ದಿಗಳನ್ನು ಅನುಸರಿಸುವವರಿಗೆ ಮತ್ತು ಹಿಂಸಾಚಾರದಲ್ಲಿ ತೊಡಗಿಲೊಳ್ಳುವವರಿಗೆ , ಹಾಗು ಸರಕಾರದ ಆಸ್ತಿಗೆ ಹಾನಿ ಮಾಡುವವರಿಗೆ ನಾನು ಕೇಳಿಕೊಳ್ಳುತೇನೆ ಏನೆಂದರೆ ಉತ್ತಮ ರಸ್ತೆಗಳ ಸಂಪರ್ಕ , ಉತ್ತಮ ಸಾರಿಗೆ ವ್ಯವಸ್ಥೆಗಳು , ಉತ್ತಮ ಚರಂಡಿ ವ್ಯವಸ್ಥೆಗಳು ನಾಗರಿಕರ ಹಕ್ಕುಗಳಾಗಿವೆ, ಹಾಗಿರುವಾಗ ಅವುಗಳನ್ನು ಸುರಕ್ಷಿತವಾಗಿಡಿ, ಸ್ವಚ್ಚವಾಗಿಡಿ ಮತ್ತು ಅದು ನಾಗರಿಕರ ಜವಾಬ್ದಾರಿ ಕೂಡಾ.
ನಾವು ಸದಾ ನಮ್ಮ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಏಕ ಕಾಲಕ್ಕೆ ನೆನಪಿಟ್ಟುಕೊಳ್ಳಬೇಕು.
ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಣ ಸುಲಭದಲ್ಲಿ ಲಭ್ಯ ಇರಬೇಕು ಎನ್ನುವುದು ನಮ್ಮ ಹಕ್ಕುಗಳು, ಆದರೆ ಶಿಕ್ಷಣದ ಸಂಸ್ಥೆಗಳ ಸುರಕ್ಷೆ ಖಾತ್ರಿಪಡಿಸುವಿಕೆ ಮತ್ತು ಶಿಕ್ಷಕರಿಗೆ ಗೌರವ ನಮ್ಮ ಜವಾಬ್ದಾರಿಗಳು.
ವೈದ್ಯಕೀಯ ಸೌಲಭ್ಯ ನಮ್ಮ ಹಕ್ಕು, ಆದರೆ ವೈದ್ಯರನ್ನು ಗೌರವಿಸುವುದು ಮತ್ತು ಬೆಂಬಲಿಸುವುದು ನಮ್ಮ ಕರ್ತವ್ಯ.
ಸುರಕ್ಷಿತ ಪರಿಸರ ಹೊಂದಿರುವುದು ನಮ್ಮ ಹಕ್ಕು, ಆದರೆ ಭದ್ರತೆಯ ಜವಾಬ್ದಾರಿ ಹೊಂದಿರುವ ಪೊಲೀಸರು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಹಕ್ಕುಗಳಿಗೆ ಒಂದು ಗಡಿ ಇದೆ. ಕರ್ತವ್ಯದ ಭಾವನೆ ಮತ್ತು ಅದರ ಬದ್ದತೆ ಬಹಳ ವಿಸ್ತಾರವಾದುದಾಗಿದೆ. .
ಸ್ನೇಹಿತರೇ, ಈ ಭಾವನೆಯು ಸರಕಾರಕ್ಕೆ ಮತ್ತು ನಾಗರಿಕರಿಗೆ ಸಮಾನವಾಗಿ ಬಹಳ ಮುಖ್ಯವಾದುದಾಗಿದೆ. ಸರಕಾರದ ಜವಾಬ್ದಾರಿಯೆಂದರೆ ಅದು ಮುಂದಿನ 5 ತಲೆಮಾರುಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಕೆಲಸ ಮಾಡಬೇಕೇ ವಿನಹ, ಬರೇ 5 ವರ್ಷಗಳನ್ನು ಗಮನದಲ್ಲಿಟ್ಟು ಕೊಂಡಲ್ಲ ಎಂಬುದನ್ನು ಖಾತ್ರಿಪಡಿಸುವುದು. ಉತ್ತರ ಪ್ರದೇಶ ಸರಕಾರ ಈ ಜವಾಬ್ದಾರಿಯನ್ನು ಸಾಕಾರಗೊಳಿಸಲು ತನ್ನಿಂದಾದ ಎಲ್ಲವನ್ನೂ ಮಾಡುತ್ತಿರುವುದಕ್ಕೆ ನಾನು ತೃಪ್ತನಾಗಿದ್ದೇನೆ.
ಅಟಲ್ ಜೀ ಅವರ ನೆನಪಿನಾರ್ಥ , ಈ ದಿನ ನಮ್ಮ ನಿರ್ಧಾರ ಏನಿರಬೇಕೆಂದರೆ –ನಾವು ನಮ್ಮ ಜವಾಬ್ದಾರಿಗಳನ್ನು ಈಡೇರಿಸೋಣ, ನಮ್ಮ ಗುರಿಗಳನ್ನು ಸಾಧಿಸೋಣ ಮತ್ತು ಉತ್ತಮ ಆಡಳಿತವನ್ನು ಮುನ್ನಡೆಸೋಣ. ಇದು ಜನತೆಯ ನಿರೀಕ್ಷೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಪಾಠ.
ಮತ್ತೊಮ್ಮೆ , ನಾನು ಉತ್ತರ ಪ್ರದೇಶದ ಜನತೆಗೆ ಅಟಲ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕಾಗಿ ಅಭಿನಂದಿಸುತ್ತೇನೆ. ಮತ್ತು ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಲಲಿರುವ ಹೊಸ ವರ್ಷಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಹೊಸ ವರ್ಷ ಬಹಳ ದೂರದಲ್ಲಿಲ್ಲದ ಮತ್ತು ಬರೇ ಒಂದು ವಾರವಷ್ಟೇ ಉಳಿದಿರುವ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಜನತೆಗೆ 2020 ಅತ್ಯುತ್ತಮವಾಗಿರಲಿ ಎಂದು ಹಾರೈಸುತೇನೆ.
ತುಂಬಾ ಧನ್ಯವಾದಗಳು !
***
In Lucknow today, I had the honour of laying the foundation stone for the Atal Bihari Vajpayee Medical University.
— Narendra Modi (@narendramodi) December 25, 2019
As you all know, Atal Ji and Lucknow had a strong bond. As Lucknow’s MP, he undertook numerous efforts to transform the city. pic.twitter.com/mo8K32AOxC
Comprehensive roadmap towards a healthier India. pic.twitter.com/iJpg17whoC
— Narendra Modi (@narendramodi) December 25, 2019
Atal Ji had two very simple benchmarks to assess how a government could contribute towards national progress.
— Narendra Modi (@narendramodi) December 25, 2019
We have always worked keeping in mind the tenets of Atal Ji. pic.twitter.com/Wp1jAmGZdK
In addition to rights, let us give as much importance to our duties as citizens. pic.twitter.com/3L6xdIsFOd
— Narendra Modi (@narendramodi) December 25, 2019
ये भी संयोग है कि आज सुशासन दिवस के दिन, यूपी का शासन जिस भवन से चलता है, वहां अटल जी की प्रतिमा का अनावरण किया गया है।
— PMO India (@PMOIndia) December 25, 2019
उनकी ये भव्य प्रतिमा, लोकभवन में कार्य करने वाले लोगों को सुशासन की, लोकसेवा की प्रेरणा देगी: PM @narendramodi
इसके अलावाअटल जी को समर्पित अटलमेडिकल यूनिवर्सिटी का शिलान्यास किया गया है।
— PMO India (@PMOIndia) December 25, 2019
जो लखनऊ, बरसों तक अटल जी की संसदीय सीट रही हो, वहां आकर, शिक्षा से जुड़े, स्वास्थ्य से जुड़े संस्थान का शिलान्यास करना मेरे लिए सौभाग्य की बात है: PM @narendramodi
अटल जी कहते थे, कि जीवन को टुकड़ों में नहीं देखा जा सकता, उसको समग्रता में देखना होगा। यही बात सरकार के लिए भी सत्य है, सुशासन के लिए भी सत्य है। सुशासन भी तब तक संभव नहीं है, जब तक हम समस्याओं को संपूर्णता में,समग्रता में नहीं सोचेंगे: PM @narendramodi
— PMO India (@PMOIndia) December 25, 2019
हेल्थ सेक्टर के लिए सरकार का रोड मैप है-
— PMO India (@PMOIndia) December 25, 2019
पहला- Preventive healthcare पर काम करना,
दूसरा- Affordable healthcareका विस्तार करना,
तीसरा- Supply Side Interventions,यानि इस सेक्टर की हर डिमांड को देखते हुए सप्लाई को सुनिश्चित करना और चौथा- Mission Mode intervention:PM @narendramodi
स्वच्छ भारत से लेकर योग तक, उज्ज्वला से लेकर फिट इंडिया मूवमेंट तक और इन सबके साथ आयुर्वेद को बढ़ावा देने तक- इस तरह की हर पहल बीमारियों की रोकथाम में अपना अहम योगदान दे रही है: PM @narendramodi
— PMO India (@PMOIndia) December 25, 2019
Preventive Health Care की ही एक कड़ी है- देश के ग्रामीण इलाकों में सवा लाख से ज्यादा वेलनेस सेंटरों का निर्माण। ये सेंटर बीमारी के शुरुआती लक्षणों को पकड़कर, शुरुआत में ही उनके इलाज में मददगार साबित होंगे: PM @narendramodi
— PMO India (@PMOIndia) December 25, 2019
आयुष्मान भारत के कारण देश के करीब 70 लाख गरीब मरीजों का मुफ्त इलाज हो चुका है, जिसमें करीब 11 लाख यहीं यूपी के हैं: PM @narendramodi
— PMO India (@PMOIndia) December 25, 2019
स्वच्छता और स्वास्थ्य सुविधाओं को गांव-गांव तक सुलभ कराने का जो अभियान यहां की सरकार ने चलाया है, वो यूपी के लोगों के जीवन को आसान बनाने की दिशा में बड़ा कदम हैं: PM @narendramodi
— PMO India (@PMOIndia) December 25, 2019
हमारी सरकार के लिए सुशासन का अर्थ है-
— PMO India (@PMOIndia) December 25, 2019
सुनवाई, सबकी हो।
सुविधा, हर नागरिक तक पहुंचे।
सुअवसर, हर भारतीय को मिले।
सुरक्षा, हर देशवासी अनुभव करे।
और सुलभता, सरकार के हर तंत्र की सुनिश्चित हो: PM @narendramodi
आज अटल सिद्धि की इस धरती से मैं यूपी के युवा साथियों को, यहां के हर नागरिक को एक और आग्रह करने आया हूं।
— PMO India (@PMOIndia) December 25, 2019
आजादी के बाद के वर्षों में हमने सबसे ज्यादा जोर अधिकारों पर दिया है, लेकिन अब हमें अपने कर्तव्यों, अपने दायित्वों पर भी उतना ही बल देना है: PM @narendramodi
हक और दायित्व को हमें साथ-साथ और हमेशा याद रखना है।
— PMO India (@PMOIndia) December 25, 2019
उत्तम शिक्षा, सुलभ शिक्षा हमारा हक है, लेकिन शिक्षा के संस्थानों की सुरक्षा, शिक्षकों का सम्मान, हमारा दायित्व है: PM @narendramodi
हम अपना दायित्व निभाएं, अपने लक्ष्यों को प्राप्त करें, यही सुशासन दिवस पर हमारा संकल्प होना चाहिए, यही जनता की अपेक्षा है, यही अटल जी की भी भावना थी: PM @narendramodi
— PMO India (@PMOIndia) December 25, 2019