Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಖನೌಗೆ ಇಂದು ಭೇಟಿ ನೀಡಲಿರುವ ಪ್ರಧಾನಿ; ನಾಳೆ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಲಖನೌ ಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರು ನಾಳೆ ಯೋಗ ದಿನದ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇಂದು ಸಂಜೆ ಪ್ರಧಾನಿಯವರು, ಸಿಎಸ್.ಐ.ಆರ್- ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ (ಸಿಎಸ್.ಐ.ಆರ್-ಸಿಡಿಆರ್.ಐ.)ಗೆ ಭೇಟಿ ನೀಡಲಿದ್ದಾರೆ.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡವನ್ನೂ ಅವರು ಉದ್ಘಾಟಿಸಲಿದ್ದಾರೆ. ಲಖನೌ ನಲ್ಲಿ ಪ್ರಧಾನಿಯವರು ಲಖನೌ –ಕಾನ್ಪುರ ನಡುವಿನ 400 ಕಿ.ವ್ಯಾ. ಡಿ.ಸಿ. ವಿದ್ಯುತ್ ಸರಬರಾಜು ಮಾರ್ಗವನ್ನೂ ದೇಶಕ್ಕೆ ಸಮರ್ಪಿಸಲಿದ್ದಾರೆ.
ಪಿ.ಎಂ. ವಸತಿ ಯೋಜನೆಯ ಫಲಾನುಭವಿಗಳಿಗೆ ಅವರು ಹಂಚಿಕೆ ಪತ್ರವನ್ನೂ ವಿತರಿಸಲಿದ್ದಾರೆ.
ನಾಳೆ ಬೆಳಗ್ಗೆ ಲಖನೌನಲ್ಲಿನ ರಾಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ 3ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.
ನೀವು ಪ್ರಧಾನಮಂತ್ರಿಯವರ ಲಖನೌ ಕಾರ್ಯಕ್ರಮವನ್ನು  http://nm4.in/dnldapp ನಲ್ಲಿ ನೋಡಬಹುದು.
                                                                         ***
VBA/SH/HS