Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವನ್ಯಮೃಗ ಸಂರಕ್ಷಣೆಯಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವನ್ಯಜೀವಿ ಸಂರಕ್ಷಣೆ ಮತ್ತು ವನ್ಯಮೃಗ ಕಳ್ಳ ಸಾಗಾಣಿಕೆ ತಡೆ ಕ್ಷೇತ್ರದಲ್ಲಿನ ಹೆಚ್ಚಿನ ಸಹಕಾರಕ್ಕಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಸಮ್ಮತಿ ಸೂಚಿಸಿದೆ. ಈ ಅನುಮೋದನೆಯೊಂದಿಗೆ ಅಮೆರಿಕದ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ ಮತ್ತು ಅಕ್ರಮ ವನ್ಯಮೃಗ ಹಾಗೂ ಅವುಗಳ ಉತ್ಪನ್ನಗಳ ವ್ಯಾಪಾರ ತಡೆ ಕುರಿತ ಸಂಸ್ಥೆಗಳ ಪರಿಣತಿಯ ಲಾಭ ಭಾರತಕ್ಕೆ ದೊರಕಲಿದೆ.

ಹಿನ್ನೆಲೆ:

ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳೆರಡೂ ಶ್ರೀಮಂತ ಜೀವ ವೈವಿಧ್ಯ ಮತ್ತು ಪ್ರಾಕೃತಿಕ ಪರಂಪರೆಯಿಂದ ಶ್ರೀಮಂತವಾಗಿವೆ ಮತ್ತು ಈ ಎರಡೂ ರಾಷ್ಟ್ರಗಳು ತಮ್ಮ ತಮ್ಮ ಸೀಮೆಯಲ್ಲಿ ಸಂಪಕ್ಷಿತ ಪ್ರದೇಶ ಜಾಲವನ್ನು ಸ್ಥಾಪಿಸಿವೆ. ಎರಡೂ ರಾಷ್ಟ್ರಗಳಿಗೆ ವನ್ಯಜೀವಿ ಸಂರಕ್ಷಣೆಯ ಕಾಳಜಿಯ ಸವಾಲುಗಳನ್ನು ಎದುರಿಸಲು ವೃತ್ತಿಪರ ಪರಿಣತಿಯ ವಿನಿಮಯಕ್ಕೆ ಉತ್ತಮ ಅವಕಾಶವಿದೆ, ಈ ಎಂ.ಓ.ಯು. ಈ ಸಹಯೋಗಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದ ಎರಡೂ ರಾಷ್ಟ್ರಗಳ ನಡುವೆ ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕಾರ ಬಯಸುತ್ತದೆ.:

a. ವನ್ಯಜೀವಿ ವಿಧಿವಿಜ್ಞಾನ ಮತ್ತು ತಳಿ ಸಂರಕ್ಷಣೆ: ತಳಿಗಳ ಸಂರಕ್ಷಣೆ ಪ್ರಯತ್ನಕ್ಕೆ ಮತ್ತು ವನ್ಯ ಜೀವಿ ಅಪರಾಧಕ್ಕೆ ಎಡೆಮಾಡುವಂಥವನ್ನು ತಡೆಯಲು ಉತ್ತಮ ಜಾರಿಗಾಗಿ ಉಪಯುಕ್ತ ಮತ್ತು ಉತ್ತಮ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಣೆ.

b. ಪ್ರಾಕೃತಿಕ ವಿಶ್ವ ಪರಂಪರೆಯ ಸಂರಕ್ಷಣೆ: ಭಾರತದ ವನ್ಯಜೀವಿ ಸಂಸ್ಥೆಯಲ್ಲಿ ಹಾಲಿ ಇರುವ ಯುನೆಸ್ಕೋ 2ನೇ ಪ್ರವರ್ಗದ ಕೇಂದ್ರಕ್ಕೆ ಸಾಂಸ್ಥಿಕ ಸಾಮರ್ಥ್ಯ ಒದಗಿಸುವುದು.

ಪ್ರಕೃತಿಯ ವ್ಯಾಖ್ಯಾನ ಮತ್ತು ಸಂರಕ್ಷಣೆಯ ಜಾಗೃತಿ: ಜೈವಿಕ ವೈವಿಧ್ಯತೆ ಸಂರಕ್ಷಣೆಯ ಸಂಕೀರ್ಣ ಸಮಸ್ಯೆಗಳನ್ನು ಜನತೆ ಅದರಲ್ಲೂ ಯುವಕರು ಮತ್ತು ಮಕ್ಕಳು ಅರ್ಥಮಾಡಿಕೊಳ್ಳಲು ಅರಣ್ಯ ವ್ಯವಸ್ಥಾಪನೆಯ ಇಂಟರ್ಫೇಸ್ ಬಲಪಡಿಸಲು ಮಾಹಿತಿ ತಂತ್ರಜ್ಞಾನದ ಬಳಕೆ.