Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಯುಪಡೆ ದಿನದಂದು ವಾಯು ಯೋಧರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾಯುಪಡೆ ದಿನದ ಅಂಗವಾಗಿ ವಾಯು ಯೋಧರಿಗೆ ಶುಭಾಶಯಗಳನ್ನು ಕೋರಿದರು.

ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ, ದೇಶದ ವಾಯುಪ್ರದೇಶವನ್ನು ರಕ್ಷಿಸುವಲ್ಲಿನ ಅವರ ಧೈರ್ಯ ಮತ್ತು ಬದ್ಧತೆಯನ್ನು ಶ್ಲಾಘನೀಯ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಭಾರತವು ನಮ್ಮ ವಾಯು ಯೋಧರ ಬಗ್ಗೆ ಹೆಮ್ಮೆಪಡುತ್ತದೆ.

ವಾಯುಪಡೆ ದಿನದಂದು, ನಮ್ಮ ವಾಯುಪ್ರದೇಶವನ್ನು ರಕ್ಷಿಸುವಲ್ಲಿನ ಅವರ ಧೈರ್ಯ ಮತ್ತು ಬದ್ಧತೆಗೆ ನಾವು ನಮನ ಸಲ್ಲಿಸುತ್ತೇವೆ!”

 

*****