Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಾಣಸಿಯ ರಾಷ್ಟ್ರೀಯ ಬೀಜ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಎನ್ಎಸ್ಆರ್.ಟಿ.ಸಿ)ದ ಆವರಣದಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್.ಆರ್.ಐ)ಯದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಐಎಸ್ಎಆರ್.ಸಿ) ಸ್ಥಾಪಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಾರಾಣಸಿಯ ರಾಷ್ಟ್ರೀಯ ಬೀಜ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಎನ್ಎಸ್ಆರ್.ಟಿ.ಸಿ)ದ ಆವರಣದಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್.ಆರ್.ಐ)ಯದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಐಎಸ್ಎಆರ್.ಸಿ) ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. 

 

ಈ ಪ್ರಸ್ತಾಪದಡಿ, ವಾರಣಾಸಿಯಲ್ಲಿ ಅಕ್ಕಿ ಮೌಲ್ಯವರ್ಧನೆ (ಸಿಇಆರ್.ವಿ.ಎ) ಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದರಲ್ಲಿ ಭತ್ತದ ಕಾಳು ಮತ್ತು ಹುಲ್ಲಿನರುವ ಭಾರೀ ಲೋಹಾಂಶಗಳ ಗುಣಮಟ್ಟ ಮತ್ತು ಸ್ಥಿತಿಯನ್ನು ನಿರ್ಧರಿಸುವ ಸಾಮರ್ಥ್ಯವುಳ್ಳ ಆಧುನಿಕ ಮತ್ತು ಸುಸಜ್ಜಿತ ಪ್ರಯೋಗಾಲಯವೂ ಸೇರಿರುತ್ತದೆ. ಈ ಕೇಂದ್ರವು ಅಕ್ಕಿ ಮೌಲ್ಯವರ್ಧನೆ ಸರಪಳಿಯ ಎಲ್ಲ ಬಾಧ್ಯಸ್ಥರ ಸಾಮರ್ಥ್ಯವರ್ಧನೆಗೂ ಕ್ರಮ ಕೈಗೊಳ್ಳುತ್ತದೆ.

ಈ ಕೇಂದ್ರವು ಪೂರ್ವ ಭಾರತದಲ್ಲಿ ಪ್ರಥಮ ಅಂತಾರಾಷ್ಟ್ರೀಯ ಕೇಂದ್ರವಾಗಿದೆ ಮತ್ತು ವಲಯದಲ್ಲಿ ಸುಸ್ಥಿರ ಅಕ್ಕಿ ಉತ್ಪಾದನೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪೂರ್ವ ಭಾರತದಲ್ಲಿ ಮತ್ತು ಇದೇ ಪ್ರಕಾರವಾದ ಪರಿಸರವನ್ನು ಒಳಗೊಂಡ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ಆಹಾರ ಉತ್ಪಾದನೆ ಮತ್ತು ಕೌಶಲ ಅಭಿವೃದ್ಧಿಗೆ ಇದು ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಐಎಸ್.ಎ.ಆರ್.ಸಿ.ಯಿಂದಾಗುವ ಲಾಭಗಳು 

ಈ ಕೇಂದ್ರವು ವಿಶೇಷ ಅಕ್ಕಿ ವಿಧಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದ ಶ್ರೀಮಂತ ಜೀವ ವೈವಿಧ್ಯವನ್ನು ಬಳಸಿಕೊಳ್ಳಲು  ನೆರವಾಗುತ್ತದೆ. ಇದು ಭಾರತಕ್ಕೆ ಪ್ರತಿ ಎಕರೆಗೆ ಹೆಚ್ಚು ಇಳುವರಿ ಸಾಧಿಸಲೂ ನೆರವಾಗುತ್ತದೆ ಮತ್ತು ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಇದರಿಂದ ಭಾರತದ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ವಿಷಯಗಳನ್ನು ನಿಭಾಯಿಸಬಹುದಾಗಿದೆ. ಈ ಕೇಂದ್ರವು ದೇಶದಲ್ಲಿ ಮೌಲ್ಯ ಸರಣಿ ಆಧಾರಿತ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೆಂಬಲ ನೀಡಲಿದೆ. ಇದು ಬೆಳೆಹಾಳು ಪ್ರಮಾಣವನ್ನು ತಗ್ಗಿಸುತ್ತದೆ, ಮೌಲ್ಯವನ್ನು ಕೂಡಿಸಿ, ರೈತರಿಗೆ ಹೆಚ್ಚಿನ ಆದಾಯ ತರುತ್ತದೆ. ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ಜೊತೆಗೆ ಪೂರ್ವ ಭಾರತದ ರೈತರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ.

ಐ.ಎಸ್.ಎ.ಆರ್.ಸಿ. ನಿರ್ವಹಣೆ 

 ಐಆರ್.ಆರ್.ಐ. ಟ್ರಸ್ಟಿಗಳ ಮಂಡಳಿ ಅಡಿಯಲ್ಲಿ ಐ.ಎಸ್.ಎ.ಆರ್.ಸಿ. ಕಾರ್ಯ ನಿರ್ವಹಿಸಲಿದೆ. ಐಆರ್.ಆರ್.ಐ.ನ ಸೂಕ್ತವಾದ ಸಿಬ್ಬಂದಿ ಸದಸ್ಯನನ್ನು ಮಂಡಳಿ ನಿರ್ದೇಶಕ ಎಂದು ನೇಮಕ ಮಾಡುತ್ತದೆ. ಅಧ್ಯಕ್ಷರಾಗಿ ಐಆರ್.ಆರ್.ಐ.ನ ಮಹಾ ನಿರ್ದೇಶಕರ ನೇತೃತ್ವದ ಸಮನ್ವಯ ಸಮಿತಿ ರಚಿಸಲಾಗುತ್ತದೆ, ಇದರ ಸಹ ಅಧ್ಯಕ್ಷತೆಯನ್ನು  ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿಎಫ್.ಡಬ್ಲ್ಯು) ಕಾರ್ಯದರ್ಶಿ ವಹಿಸುತ್ತಾರೆ.   ಈ ಸಮನ್ವಯ ಸಮಿತಿಯ ಇತರ ಸದಸ್ಯರಾಗಿ ಉಪ ಮಹಾ ನಿರ್ದೇಶಕರು (ಬೆಳೆ ವಿಜ್ಞಾನ), ಐ.ಸಿ.ಎ.ಆರ್; ನಿರ್ದೇಶಕರು ಎನ್.ಎಸ್.ಆರ್.ಟಿ.ಸಿ.; ಐಆರ್.ಆರ್.ಐ.ನ ಭಾರತದಲ್ಲಿನ ಪ್ರತಿನಿಧಿ, ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿ ಮತ್ತು  ನೇಪಾಳ ಮತ್ತು ಬಾಂಗ್ಲಾದೇಶ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಇರುತ್ತಾರೆ.  

 

ಈ ಕೇಂದ್ರ ಸ್ಥಾಪನೆಗಾಗಿ, ಡಿಎಸಿಅಂಡ್ಎಫ್.ಡಬ್ಲ್ಯು ಮತ್ತು ಐಆರ್.ಆರ್.ಐ, ಪಿಲಿಪ್ಪೀನ್ಸ್ ನಡುವೆ ಎಂ.ಓ.ಎ. (ಮೆಮೊರಾಂಡಮ್ ಆಫ್ ಅಗ್ರಿಮೆಂಟ್)ಗೆ ಸಹಿಹಾಕಲಾಗುತ್ತದೆ. ಡಿಎಸಿ ಮತ್ತು ಎಫ್.ಡಬ್ಲ್ಯು ಇಲಾಖೆಯು ಪ್ರಯೋಗಾಲಯ, ಕಚೇರಿಗಳು, ತರಬೇತಿ ಕೊಠಡಿ ಇತ್ಯಾದಿಗಳಿಗಾಗಿ ಮತ್ತು ಪೂರಕ ಮೂಲಸೌಕರ್ಯಕ್ಕಾಗಿ ಎನ್.ಎಸ್.ಆರ್.ಟಿ.ಸಿ., ವಾರಾಣಸಿಯಲ್ಲಿ ಭೌತಿಕ ಪ್ರದೇಶ ಒದಗಿಸುತ್ತದೆ. ಈ ಕೇಂದ್ರವನ್ನು ಆರು ತಿಂಗಳುಗಳ ಒಳಗೆ ಆರಂಭಿಸಲಾಗುತ್ತದೆ.

***

AKT/VBA