Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದ ಕುರಿತು ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್. ಅಂಡ್ ಟಿ) ಕ್ಷೇತ್ರದ ಸಹಕಾರಕ್ಕಾಗಿ ರಷ್ಯಾ ಮತ್ತು ಭಾರತ ನಡುವೆ 2016ರ ಅಕ್ಟೋಬರ್ ನಲ್ಲಿ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

ರಷ್ಯಾ ಒಕ್ಕೂಟದ ಮತ್ತು ಭಾರತ ಗಣರಾಜ್ಯದ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ಅಧೀನ ಸಂಸ್ಥೆಗಳ ನಡುವೆ ಜಂಟಿ ವೈಜ್ಞಾನಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಡಿಎಸ್.ಟಿ. ಮೂಲಕ ಬೆಂಬಲ ಮತ್ತು ಅವಕಾಶ ನೀಡುವುದು ಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.

ಈ ತಿಳಿವಳಿಕೆ ಒಪ್ಪಂದದ ಅಡಿ, ಎರಡೂ ಪಕ್ಷಕಾರರು ಈ ಕೆಳಗಿನ ರೀತಿಯಲ್ಲಿ ಸಹಕಾರ ನೀಡುತ್ತಾರೆ:

i) ಪರಸ್ಪರರ ಹಿತಾಸಕ್ತಿಯಿಂದ ಏರ್ಪಡಿಸಿದ ಸಮಾವೇಶ, ವೇದಿಕೆಗಳು, ವಸ್ತುಪ್ರದರ್ಶನ, ವಿಚಾರ ಸಂಕಿರಣಗಳ ಮಾಹಿತಿಯ ವಿನಿಮಯ;

ii) ಪಕ್ಷಕಾರರು ಜಂಟಿಯಾಗಿ ನಿರ್ಧರಿಸುವ ಧ್ಯೇಯಗಳು, ಜಂಟಿ ಸಂಶೋಧನೆ ಕೈಗೊಳ್ಳುವ ಗುರಿಯೊಂದಿಗೆ ವೈಜ್ಞಾನಿಕ ಯೋಜನೆ ರೂಪಿಸಲು ಬೆಂಬಲ ಮತ್ತು ಷರತ್ತುಗಳಿಗೆ ಉಪಬಂಧ;

iii) ಜಂಟಿಯಾಗಿ ವೈಜ್ಞಾನಿಕ ಕಾರ್ಯಕ್ರಮಗಳ (ವಿಚಾರ ಸಂಕಿರಣ, ಸಮಾವೇಶ, ದುಂಡು ಮೇಜಿನ ಸಭೆಗಳು) ನಿಯೋಜನೆ ಗುರಿಯೊಂದಿಗೆ ಪಕ್ಷಕಾರರು ನಿರ್ಧರಿಸುವ ಕ್ಷೇತ್ರಗಳಲ್ಲಿ ಎರಡೂ ದೇಶಗಳ ವಿಜ್ಞಾನಿಗಳ ನಡುವೆ ನೇರ ಸಂಪರ್ಕ ಸ್ಥಾಪನೆ;
iv) ಪಕ್ಷಕಾರರ ತಜ್ಞರು ಮತ್ತು ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳ ನಡುವೆ ನೇರ ಸಂಪರ್ಕ ಸ್ಥಾಪನೆಗೆ ಬೆಂಬಲ;
v) ವಿಜ್ಞಾನವನ್ನು ಜನಪ್ರಿಯಗೊಳಿಸುವ ಗುರಿಯೊಂದಿಗೆ ಜಂಟಿ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಅವಕಾಶ;
vi) ಕೈಗಾರಿಕೆಗಳನ್ನು ತೊಡಗಿಸಿಕೊಳ್ಳುವ ಮೂಲಕಅಂತರ – ಶಿಸ್ತು ಮತ್ತು ಬಹು ಸಾಂಸ್ಥಿಕ ಯೋಜನೆಗಳ ಅಭಿವೃದ್ಧಿ.

ಈ ತಿಳಿವಳಿಕೆ ಒಪ್ಪಂದವು ಅಂಕಿತ ಹಾಕಿದ ದಿನದಿಂದ ಜಾರಿಗೆ ಬರಲಿದೆ ಮತ್ತು 5 ವರ್ಷಗಳ ಕಾಲ ಇದಕ್ಕೆ ಮಾನ್ಯತೆ ಇರುತ್ತದೆ. ಯಾವುದೇ ಪಕ್ಷಕಾರರು 5 ವರ್ಷಗಳ ಒಪ್ಪಂದದ ಅವಧಿ ಪೂರ್ಣಗೊಳ್ಳುವ ಆರು ತಿಂಗಳುಗಳ ಮೊದಲು ಅದನ್ನು ಬರಖಾಸ್ತು ಮಾಡಲು ಲಿಖಿತವಾಗಿ ತಿಳಿಸದ ಹೊರತು ಹಾಲಿ ಎಂ.ಓ.ಯು. ಜಾರಿಯನ್ನು ಮುಂದಿನ 5 ವರ್ಷಗಳ ಅವಧಿಗೆ ವಿಸ್ತರಳಾಯಾಗಲಿದೆ.

****

AKT/VBA/SH