ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನಡಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಕೆನಡಾದ ಶೈಕ್ಷಣಿಕ ಸಂಸ್ಥೆಗಳ ನಡುವೆ ಆರ್ ಮತ್ತು ಡಿ ಮತ್ತು ವೈಜ್ಞಾನಿಕ ಸಹಕಾರವನ್ನು ಬೆಳೆಸಲು ಮತ್ತು ಒಂದು ವ್ಯವಸ್ಥೆಯನ್ನು ಒದಗಿಸಲು ಸಹಕಾರಿಯಾಗಿದೆ. .
ಪ್ರಮುಖ ಅಂಶಗಳು :
ಕೆನಡಾದ ಸ್ವಾಭಾವಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎನ್.ಎಸ್.ಇ.ಆರ್.ಸಿ.)ಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಖಾರುಗೊಳಿಸಿರುವ ಎಂ.ಓ.ಯು. ಅಡಿಯಲ್ಲಿ ಭಾರತ ಮತ್ತು ಕೆನಡಾ ನಡುವೆ ಒಂದು ನಾವಿನ್ಯಪೂರ್ಣ ಸಂಶೋಧನೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಜಾರಿಗೊಳಿಸಲಾಗುತ್ತದೆ.
ಹಿನ್ನೆಲೆ:
ಈ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಕೆನಡಾ ನಡುವೆ 2005ರ ನವೆಂಬರ್ ನಲ್ಲಿ ಆಖಾರುಗೊಂಡ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ಅಂತರ ಸರ್ಕಾರೀಯ ಒಪ್ಪಂದದ ಅನುಸರಣೆಯೊಂದಿಗೆ ಆಖೈರುಗೊಂಡಿದೆ.
******