ಪಿಎಂಇಂಡಿಯಾ
ಕಳೆದ 12 ವರ್ಷಗಳಲ್ಲಿ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಇದು ಎಲ್ಲಾ ವಲಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದ್ದು, ಆರ್ಥಿಕ ಸೇರ್ಪಡೆ ಮತ್ತು ಉದ್ಯಮಶೀಲತೆಯಿಂದ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ವಸತಿ, ಕ್ರೀಡೆ, ವಿಜ್ಞಾನ ಮತ್ತು ಆಡಳಿತದವರೆಗೆ, ಮಹಿಳೆಯರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸರ್ಕಾರದ ಪ್ರಯತ್ನಗಳು ಘನತೆ, ಅವಕಾಶ ಮತ್ತು ಸಬಲೀಕರಣದಲ್ಲಿ ಬೇರೂರಿದೆ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದ್ದಾರೆ. ಮಹಿಳೆಯರು ತಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ಬಲವಾಗಿ ಕೊಡುಗೆ ನೀಡುವ ವಾತಾವರಣವನ್ನು ಸೃಷ್ಟಿಸಲು ಅವು ಸಹಾಯ ಮಾಡಿವೆ ಎಂದು ಅವರು ಗಮನ ಸೆಳೆದಿದ್ದಾರೆ.
ಭಾರತದ ನಾರಿ ಶಕ್ತಿ ವಿಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆ ಮತ್ತಿತರ ಕ್ಷೇತ್ರಗಳಲ್ಲಿ ಛಾಪು ಮೂಡಿಸುವುದನ್ನು ನೋಡಿ ಪ್ರಧಾನಮಂತ್ರಿ ವಿಶೇಷವಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಡ್ರೋಣ್ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದರಿಂದ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಮತ್ತು ದೇಶಾದ್ಯಂತ ಅಭಿವೃದ್ಧಿಯ ಆಯಾಮವನ್ನು ಪರಿವರ್ತಿಸುತ್ತಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವಲ್ಲಿ ಬಹಳ ದೂರ ಸಾಗುತ್ತಿರುವ ಸ್ವಸಹಾಯ ಗುಂಪುಗಳನ್ನು ಸರ್ಕಾರ ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ, ಭಾರತದ ನಾರಿ ಶಕ್ತಿ ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದೆ ಎಂದು ಹೇಳಿದ್ದಾರೆ. ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇಂದು ಪ್ರತಿಯೊಂದು ವಲಯದಲ್ಲೂ ತಮ್ಮ ಅದ್ಭುತ ಪ್ರತಿಭೆ ಮತ್ತು ಕೌಶಲ್ಯದಿಂದ ಭಾರತ ಮಾತೆಯ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಸರಣಿ ಪೋಸ್ಟ್‌ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
”ಕಳೆದ 12 ವರ್ಷಗಳಲ್ಲಿ, ಎನ್‌ಡಿಎ ಸರ್ಕಾರವು ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ಕಾರ್ಯನಿರ್ವಹಿಸುತ್ತಿದೆ ಮತ್ತು ಇದು ಎಲ್ಲಾ ವಲಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಲ್ಪಡುತ್ತಿದೆ.
ಆರ್ಥಿಕ ಸೇರ್ಪಡೆ ಮತ್ತು ಉದ್ಯಮಶೀಲತೆಯಿಂದ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ವಸತಿ, ಕ್ರೀಡೆ, ವಿಜ್ಞಾನ ಮತ್ತು ಆಡಳಿತದವರೆಗೆ, ಮಹಿಳೆಯರು ವೈವಿಧ್ಯಮ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎನ್‌ಡಿಎ ಸರ್ಕಾರದ ಪ್ರಯತ್ನಗಳು ಘನತೆ, ಅವಕಾಶ ಮತ್ತು ಸಬಲೀಕರಣದಲ್ಲಿ ಬೇರೂರಿದೆ. ಮಹಿಳೆಯರು ತಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಮತ್ತಷ್ಟು ಶಕ್ತಿಶಾಲಿ ಕೊಡುಗೆ ನೀಡುವ ವಾತಾವರಣವನ್ನು ಸೃಷ್ಟಿಸಲು ಅವು ಸಹಾಯ ಮಾಡಿವೆ.
#12YearsOfNariShakti”
” ಭಾರತದ ನಾರಿ ಶಕ್ತಿ ವಿಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವುದನ್ನು ನೋಡಿ ನನಗೆ ವಿಶೇಷವಾಗಿ ಸಂತೋಷವಾಗಿದೆ. ಡ್ರೋನ್ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದರಿಂದ ದೇಶಾದ್ಯಂತ ಅವಕಾಶಗಳ ಹೊಸ ಮಾರ್ಗಗಳನ್ನು ತೆರೆದುಕೊಳ್ಳುತ್ತಿವೆ ಮತ್ತು ಅಭಿವೃದ್ಧಿಯ ಆಯಾಮವನ್ನು ಪರಿವರ್ತಿಸುತ್ತಿದೆ. ನಮ್ಮ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವಲ್ಲಿ ಬಹಳ ದೂರ ಸಾಗುತ್ತಿರುವ ಸ್ವಸಹಾಯ ಗುಂಪುಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ.
#12YearsOfNariShakti”
“भारत की नारीशक्ति राष्ट्र निर्माण की आधारशिला है। हमारी माताएं, बहनें और बेटियां आज हर क्षेत्र में अपनी अद्भुत प्रतिभा और कौशल से मां भारती का गौरव बढ़ा रही हैं।
नारी त्रैलोक्यजननी
नारी त्रैलोक्यरूपिणी।
नारी त्रिभुवनाधारा
नारी शक्तिस्वरूपिणी॥
#12YearsOfNariShakti”
ಮಹಿಳೆ ಮೂರು ಲೋಕಗಳ ತಾಯಿ. ಆಕೆ ಮೂರು ಲೋಕಗಳ ಅಭಿವ್ಯಕ್ತಿ. ಆಕೆ ಇಡೀ ವಿಶ್ವದ ಅಡಿಪಾಯ, ಮತ್ತು ಆಕೆಯ ಶಕ್ತಿಯೇ ನಿಜವಾದ ಸಾಕಾರ.
*****
Over the last 12 years, the NDA Government has worked to further women-led development. And, this is visible across sectors.
— Narendra Modi (@narendramodi) June 12, 2026
From financial inclusion and entrepreneurship to education, healthcare, sanitation, housing, sports, science and governance, women are playing a…
I am particularly happy to see India’s Nari Shakti make a mark in sectors like science, space and innovation. Their growing participation in emerging fields such as drone technology is opening new avenues of opportunity and transforming development landscape across the nation.…
— Narendra Modi (@narendramodi) June 12, 2026
भारत की नारीशक्ति राष्ट्र निर्माण की आधारशिला है। हमारी माताएं, बहनें और बेटियां आज हर क्षेत्र में अपनी अद्भुत प्रतिभा और कौशल से मां भारती का गौरव बढ़ा रही हैं।
— Narendra Modi (@narendramodi) June 12, 2026
नारी त्रैलोक्यजननी
नारी त्रैलोक्यरूपिणी।
नारी त्रिभुवनाधारा
नारी शक्तिस्वरूपिणी॥#12YearsOfNariShakti pic.twitter.com/066kcm5GaV