Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಜೈವಿಕ ಇಂಧನ ದಿನ-2018 ರಂದು ಪ್ರಧಾನಿ ಅವರು ಮಾಡಿದ ಭಾಷಣ

ವಿಶ್ವ ಜೈವಿಕ ಇಂಧನ ದಿನ-2018 ರಂದು ಪ್ರಧಾನಿ ಅವರು ಮಾಡಿದ ಭಾಷಣ

ವಿಶ್ವ ಜೈವಿಕ ಇಂಧನ ದಿನ-2018 ರಂದು ಪ್ರಧಾನಿ ಅವರು ಮಾಡಿದ ಭಾಷಣ

ವಿಶ್ವ ಜೈವಿಕ ಇಂಧನ ದಿನ-2018 ರಂದು ಪ್ರಧಾನಿ ಅವರು ಮಾಡಿದ ಭಾಷಣ


ಇಲ್ಲಿ ನೆರೆದ ಸಮಾಜದ ನಾನಾ ವರ್ಗಕ್ಕೆ ಸೇರಿದ ಮಹಿಳೆಯರೇ ಹಾಗೂ ಮಹನೀಯರೇ,
 
ಸ್ನೇಹಿತರೇ,
ಆಗಸ್ಟ್ ಮಾಸವು ಪಾವಿತ್ರ್ಯ ಹಾಗೂ ಸಂಕಲ್ಪಗಳ ವಾತಾವರಣವನ್ನು ತರುತ್ತದೆ. ಈ ಮಾಸದಲ್ಲಿ ನಾವು ಕ್ರಾಂತಿಯನ್ನು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುತ್ತೇವೆ. ಈ ಮಾಸದಲ್ಲಿ ಸ್ವಾತಂತ್ರ್ಯೋತ್ಸವ ಮಾತ್ರವಲ್ಲದೆ, ನಮ್ಮ ಸಾಮಾಜಿಕ ಹಾಗೂ ಸಾಂಸ್ಕøತಿಕ ಜೀವನವನ್ನು ಸಮೃದ್ಧಗೊಳಿಸಿದ ಹಲವು ಹಬ್ಬಗಳನ್ನು ಕೂಡ ನಾವು ಆಚರಿಸಿ, ಸಂಭ್ರಮಿಸುತ್ತೇವೆ. ನಿಮ್ಮೆಲ್ಲರಿಗೂ ಆಗಮಿಸಲಿರುವ ಹಬ್ಬಗಳಿಗೆ ಶುಭಾಷಯಗಳನ್ನು ಕೋರುತ್ತೇನೆ.
 
ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆಗಳಲ್ಲಿ ಪರಿಸರ ಸಂರಕ್ಷಣೆಗೆ ಉನ್ನತ ಸ್ಥಾನವಿದೆ. ಇಂದಿನ ಕಾರ್ಯಕ್ರಮ ಕೂಡ ಪರಿಸರ ಮತ್ತು ಆಧುನಿಕ ಸಂಪ್ರ ದಾಯದೊಂದಿಗೆ ಸಂಬಂಧ ಹೊಂದಿದೆ. ವಿಶ್ವ ಜೈವಿಕ ಇಂಧನ ದಿನದಂದು ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.
ಸ್ನೇಹಿತರೇ, 
125 ಕೋಟಿ ಭಾರತೀಯರ ಜೀವನಮಟ್ಟವನ್ನು ಸುಧಾರಿಸಲು ಸರ್ಕಾರವು ನಿರಂತರ ಪ್ರಯತ್ನ ಮಾಡುತ್ತಿದ್ದು, ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಗ್ರಾಮೀಣ ಆರ್ಥಿಕತೆಯ ಬಲವರ್ಧನೆ, ರೈತರ ಆದಾಯ ದುಪ್ಪಟ್ಟುಗೊಳಿಸುವಿಕೆ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ಪರ್ಯಾಯಗಳನ್ನು ಕಲ್ಪಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಜೈವಿಕ ಇಂಧನವು ಈ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೈವಿಕ ಇಂಧನವು ಪರಿಸರ ಹಾಗೂ ಆರ್ಥಿಕ ಅಭಿವೃದ್ಧಿ ನಡುವೆ ಸಮತೋಲವನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿದೆ.
ಸ್ನೇಹಿತರೇ, 
ಜೈವಿಕ ಇಂಧನ ಎನ್ನುವುದು ವಿಜ್ಞಾನ ಮಾತ್ರವಲ್ಲ, ಭಾರತವಲ್ಲದೆ ಇಡೀ ವಿಶ್ವಕ್ಕೆ ನವ ಶಕ್ತಿಯನ್ನು ನೀಡಬಲ್ಲ ಮಂತ್ರ. ಬೆಳೆಗಳು, ಬೆಳೆಗಳ ತ್ಯಾಜ್ಯಗಳು, ಕಸ ಹಾಗೂ ಅಳಿದುಳಿದ ವಸ್ತುಗಳಿಂದ ಉತ್ಪಾದಿಸುವ ಇಂಧನವೇ ಜೈವಿಕ ಇಂಧನ. ಅದು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಜೀವನದ ಗುಣಮಟ್ಟವನ್ನು ಸುಧಾರಿಸು ವುದಲ್ಲದೆ, ಸ್ಥಿತ್ಯಂತರಕ್ಕೆ ಕಾರಣವಾಗಲಿದೆ. ಇಂದು ಪ್ರದರ್ಶನಗೊಂಡ ಚಲನಚಿತ್ರವು ಗಾದೆಯೊಂದನ್ನು ದೃಢಪಡಿಸಿದೆ-“ಆಮ್ ಕೆ ಆಮ್ ಔರ್ ಗುತಲಿ ಕೆ ದಾಮ್’ ಅಂದರೆ, ವಸ್ತುವೊಂದರ ಸಂಪೂರ್ಣ ಇಲ್ಲವೇ ದುಪ್ಪಟ್ಟು ಬಳಕೆ. ಇದೊಂದು ಬಹಳ ಹಳೆಯ ಹೇಳಿಕೆ. ಇದನ್ನು ಆಧುನಿಕ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಜೈವಿಕ ಇಂಧನದ ಹೆಚ್ಚೆಚ್ಚು ಬಳಕೆಯು ರೈತರ ಆದಾಯವನ್ನು ಹೆಚ್ಚಿಸುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ, ದೇಶದ ಐಶ್ವರ್ಯವನ್ನು ಉಳಿಸುತ್ತದೆ ಮತ್ತು ನಮ್ಮ ಪರಿಸರಕ್ಕೆ ಅದೊಂದು ವರವಿದ್ದಂತೆ. ನಮ್ಮ ಮಹತ್ವದ ಮುನ್ನೋಟವಾದ ಸ್ವಚ್ಛತೆ, ಆರೋಗ್ಯ ಮತ್ತು ಬಡ ರೈತರು ಹಾಗೂ ಗ್ರಾಮಗಳ ಸಬಲೀಕರಣ ಪಥದ ಒಂದು ಭಾಗ ಅದು. ಜತೆಗೆ, ನಮ್ಮ ನಗರಾಭಿವೃದ್ಧಿಯ ಆಧುನಿಕ ಮಾದರಿಯ ಜೊತೆಗೂ ಅದು ಸಂಬಂಧ ಹೊಂದಿದೆ. ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಸರ್ಕಾರ ಕೈಗೊಂಡ ಹಲವು ಹಸಿರು ಉಪಕ್ರಮಗಳಲ್ಲಿ ಜೈವಿಕ ಅನಿಲದ ಬಳಕೆ ಕೂಡ ಒಂದು.   
ಸ್ನೇಹಿತರೇ,
ಇಂದು ಇಲ್ಲಿ ರೈತ ಸೋದರರು ಹಾಗೂ ಸೋದರಿಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ವಿಜ್ಞಾನ ಭವನದಲ್ಲಿ ರೈತರ ಉಪಸ್ಥಿತಿ ಒಂದು ಪ್ರಬಲ ಸಂಕೇತವಾಗಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆಯ ಸ್ವರೂಪ ಬೇರೆಯದೇ ರೀತಿ ಇದೆ. ಕೆಲವು ಪ್ರಾಂತ್ಯಗಳಲ್ಲಿ ಪ್ರವಾಹವಿದ್ದರೆ, ಇನ್ನು ಕೆಲವು ಪ್ರದೇಶಗಳು ಮಳೆಯನ್ನು ಎದುರು ನೋಡುತ್ತಿರುತ್ತವೆ. ನಾವು ಇಂಥ ಸುದ್ದಿಯನ್ನು ಸದಾ ನೋಡುತ್ತಿರುತ್ತೇವೆ. ಒಂದೆಡೆ ಸಾಕಷ್ಟು ಮಳೆಯಾಗಿ ಸಂತಸಪಟ್ಟರೆ,ಅದೇ ಹೊತ್ತಿನಲ್ಲಿ ಇನ್ನೊಂದು ಪ್ರಾಂತ್ಯದಲ್ಲಿ ಅಷ್ಟೇ ಪ್ರಮಾಣದ ಮಳೆಯಿಂದ ಸಂಕಷ್ಟ ಅನುಭವಿಸುತ್ತೇವೆ.
ಇದು ನನ್ನ ರೈತ ಸೋದರ ಮತ್ತು ಸೋದರಿಯರಿಗೆ ಬಹಳ ಮುಖ್ಯವಾದುದು. ದೇಶದ ಬಹುತೇಕ ಎಲ್ಲ ಭಾಗದಲ್ಲಿ ಭತ್ತ ಸೇರಿದಂತೆ ಇನ್ನಿತರ ಖಾರೀಫ್ ಬೆಳೆಗಳ ಬಿತ್ತನೆ ಈಗಾಗಲೇ ಮುಗಿದಿದೆ ಎಂದು ನಂಬಿದ್ದೇನೆ. 14 ಖಾರೀಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿ ವೆಚ್ಚದ 1.5 ರಷ್ಟು ನಿಗದಿಗೊಳಿಸಿರುವುದು ನಿಮಗೆ ಈಗಾಗಲೇ ಗೊತ್ತಿದೆ. ನಾವು ಕೃಷಿ ಕುರಿತು ಮಾತನ್ನಾಡಿದಾಗಲೆಲ್ಲ, ಎಂ ಎಸ್ ಸ್ವಾಮಿನಾಥನ್ ಅವರನ್ನು ಉಲ್ಲೇಖಿಸುತ್ತೇವೆ. ಎರಡು ಇಲ್ಲವೇ ಮೂರು ದಿನಗಳ ಹಿಂದೆ ಸ್ವಾಮಿನಾಥನ್ ಅವರು ಲೇಖನವೊಂದನ್ನು ಬರೆದಿದ್ದು, ಅದರಲ್ಲಿ ಕೃಷಿ ಕ್ಷೇತ್ರದ ಸ್ಥಿತ್ಯಂತರ, ಸರ್ಕಾರ ತೆಗೆದುಕೊಂಡ ಉಪಕ್ರಮಗಳು ಹಾಗೂ ಸರ್ಕಾರದ ಕಾರ್ಯನೀತಿಯನ್ನು ಸಮಗ್ರವಾಗಿ ವಿವರಿಸಿದ್ದಾರೆ. ಅವರು ಈ ವಿಷಯ ಕುರಿತು ಅಧಿಕಾರಬದ್ಧವಾಗಿ ಮಾತಾಡಬಲ್ಲವರು. ರೈತರಿಗೆ ಸಂಬಂಧಿಸಿದ ಯೋಜನೆಗಳು, ಕಾರ್ಯನೀತಿಗಳು, ಕಾರ್ಯಕ್ರಮಗಳು ಮತ್ತು ಪ್ರಯತ್ನಗಳನ್ನು ಅವರು ವಿಸ್ತøತವಾಗಿ ವಿವರಿಸಿದ್ದಾರೆ ಹಾಗೂ ಶ್ಲಾಘಿಸಿದ್ದಾರೆ.
ಪ್ರದರ್ಶನಗೊಂಡ ಚಲನಚಿತ್ರದಲ್ಲಿ ಖಾರೀಫ್ ಬೆಳೆಗಳೊಂದಿಗೆ ಕಬ್ಬಿನ ಎಂಎಸ್ಪಿಕಯನ್ನು ನಿಗದಿಪಡಿಸಿರುವುದನ್ನು ನೀವು ವೀಕ್ಷಿಸಿದ್ದು, ಇದರಿಂದ ರೈತರು ಕೃಷಿಗೆ ಮಾಡಿದ ವೆಚ್ಚಕ್ಕಿಂತ ಶೇ. 80ರಷ್ಟು ಅಧಿಕ ಆದಾಯ ಪಡೆಯಲಿದ್ದಾರೆ. ಈ ಋತುವಿನಲ್ಲಿ ಕಬ್ಬಿನ ಮೇಲಿನ ಎಂಎಸ್ಪಿಕಯನ್ನು 20 ರೂ.ನಿಂದ 275 ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ. ಇಷ್ಟಲ್ಲದೆ, ಕಬ್ಬಿನಿಂದ ಎಥೆನಾಲ್ನ್ನು  ಉತ್ಪಾದಿಸಲು ನೆರವಾಗುವ ಸರ್ಕಾರದ ಪ್ರಯತ್ನದಿಂದ ರೈತರಿಗೆ ಪ್ರಯೋಜನ ಆಗಲಿದೆ.
ಸ್ನೇಹಿತರೇ,
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಕಬ್ಬಿನಿಂದ ಎಥೆನಾಲ್ನ್ನುನ ಉತ್ಪಾದಿಸುವ ಆಲೋಚನೆ ಆರಂಭಗೊಂಡಿತು. ಆದರೆ, ನಂತರದ ದಶಕದಲ್ಲಿ ಆಡಳಿತ ನಡೆಸಿದ ಸರ್ಕಾರದ ಸ್ಥಿತಿಯಂತೆ, ಈ ಯೋಜನೆ ಕೂಡ ಕ್ಷಯಿಸಿತು. ಈ ಪ್ರಯತ್ನವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಶಎ ಸರ್ಕಾರ ರಚನೆಗೊಂಡ ಬಳಿಕ ಸೂಕ್ತ ಪಥವನ್ನು ರೂಪಿಸಲಾಯಿತು. ಎಥೆನಾಲ್ನ್ನುಿ ಮಿಶ್ರಗೊಳಿಸುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಇಂದು, ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸುಗಮವಾಗಿ ನಡೆಯುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ಎಥೆನಾಲ್ ಉತ್ಪಾದನೆ ದಾಖಲೆ ಪ್ರಮಾಣವನ್ನು ಮುಟ್ಟಿದ್ದು, ಮುಂದಿನ ನಾಲ್ಕು ವರ್ಷದಲ್ಲಿ 450 ಕೋಟಿ ಲೀಟರ್ ಎಥೆನಾಲ್ನ್ನುಣ ಉತ್ಪಾದಿಸುವ ದಿಕ್ಕಿನಲ್ಲಿ ದೇಶ ಮುನ್ನಡೆಯುತ್ತಿದೆ.
ಸ್ನೇಹಿತರೇ,
ಎಥೆನಾಲ್ ರೈತರಿಗೆ ನೆರವಾಗುವುದರ ಜತೆಗೆ, ದೇಶದ ಸಂಪತ್ತನ್ನು ಉಳಿಸಿದೆ. ಕಳೆದ ವರ್ಷ, ಎಥೆನಾಲ್ನ್ನುಣ ಪೆಟ್ರೋಲ್ ಜತೆಗೆ ಮಿಶ್ರಗೊಳಿಸಿದ್ದರಿಂದ ಆಮದಿಗೆ ವೆಚ್ಚ ಮಾಡುತ್ತಿದ್ದ 4,000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ.
ಮುಂದಿನ ನಾಲ್ಕು ವರ್ಷದಲ್ಲಿ ಉಳಿತಾಯವನ್ನು 12,000 ಕೋಟಿ ರೂ.ಗೆ ಹೆಚ್ಚಿಸುವುದು ಸರ್ಕಾರದ ಗುರಿ. ಅಷ್ಟಲ್ಲದೆ, ಮುಂದಿನ ನಾಲ್ಕು ವರ್ಷದಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವ ಮೂಲಕ 20,000 ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ. ಈ ಉಳಿತಾಯ ಹಾಗೂ ಕಬ್ಬಿನ ಪರ್ಯಾಯ ಬಳಕೆಯನ್ನು ಕಂಡುಕೊಂಡಿರುವುದರಿಂದ, ಬೆಳೆಗಾರರು ಪದೇಪದೆ ಎದುರಿಸುತ್ತಿದ್ದ ಸಮಸ್ಯೆಗೆ ಖಾತ್ರಿ ಪರಿಹಾರವೊಂದು ಲಭ್ಯವಾಗಲಿದೆ. ಎಥೆನಾಲ್ ಹಣವನ್ನು ಉಳಿಸುತ್ತದೆ. ಜತೆಗೆ, ಪೆಟ್ರೋಲ್ ಹೊರಸೂಸುವ ವಿಷಾನಿಲಗಳನ್ನು ಕಡಿಮೆಗೊಳಿಸುತ್ತದೆ.
ಸ್ನೇಹಿತರೇ, 
ಜೈವಿಕ ಇಂಧನಕ್ಕೆ ಸಂಬಂಧಿಸಿದ ಗುರಿಗಳನ್ನು ನಿಶ್ಚಯಿಸಲಾಗಿದೆ. ಇದರರ್ಥ, ಇದೊಂದು ಬರೀ ಆಲೋಚನೆಯಲ್ಲ. ದೃಢ ಕಾರ್ಯನೀತಿಗಳು, ಕಾನೂನು ಹಾಗೂ ಕಾರ್ಯತಂತ್ರಗಳನ್ನು ಸಿದ್ಧಗೊಳಿಸಲಾಗಿದ್ದು, ಜವಾಬ್ದಾರಿ ಹಾಗೂ ಉತ್ತರದಾಯಿತ್ವವನ್ನು ಸ್ಥಿರಪಡಿಸಲಾಗಿದೆ ಮತ್ತು ನಿಶ್ಚಿತ ಗುರಿಯನ್ನು ಸಾಧಿಸಲು ನಿಯತವಾಗಿ ಮೇಲುಸ್ತುವಾರಿ ಮಾಡಲಾಗು ತ್ತಿದೆ. ಎಥೆನಾಲ್ ಸೇರಿದಂತೆ ಎಲ್ಲ ಜೈವಿಕ ಇಂಧನಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ರಾಷ್ಟ್ರೀಯ ಕಾರ್ಯನೀತಿಯನ್ನು ರೂಪಿಸಿದೆ. 2022ರೊಳಗೆ ಎಥೆನಾಲ್ನೊಂ ದಿಗೆ ಪೆಟ್ರೋಲ್ ಮಿಶ್ರಣ ಸಾಮಥ್ರ್ಯವನ್ನು ಕನಿಷ್ಠ ಶೇ.10 ಹಾಗೂ 2030ರೊಳಗೆ ಶೇ.20ಕ್ಕೆ ಹೆಚ್ಚಿಸಲು ಕೆಲಸ ಮಾಡುತ್ತಿದೆ.
ಜೈವಿಕ ಇಂಧನಗಳು ಕಬ್ಬು ಬೆಳೆಗಾರರಿಗೆ ಪರ್ಯಾಯವೊಂದನ್ನು ಒದಗಿಸುವ ಜೊತೆಗೆ, ದೇಶದ ಇತರ ರೈತರಿಗೂ ಲಾಭವುಂಟು ಮಾಡಲಿವೆ. ಕೆಲವೊಮ್ಮೆ ಗೋಧಿ, ಭತ್ತ, ಜೋಳ, ಆಲೂಗೆಡ್ಡೆ ಮತ್ತು ತರಕಾರಿಗಳು ಕೆಟ್ಟ ಹವಾಮಾನ ಅಥವಾ ಸೂಕ್ತ ಸಂಗ್ರಹ ಸಾಮಥ್ರ್ಯವಿಲ್ಲದೆ, ಹಾಳಾಗುವುದಿದೆ. ರೈತರು ಹಾಳಾದ ಬೆಳೆಗಳನ್ನು ಎಸೆಯುತ್ತಾರೆ. ಆದರೆ, ಇದರಿಂದಲೂ ಎಥೆನಾಲ್ ಉತ್ಪಾದಿಸಲು ನಾವು ನಿರ್ಧರಿಸಿದ್ದೇವೆ.
ರೈತರಿಗೆ ಇನ್ನೊಂದು ಸಮಸ್ಯೆಯಿದೆ. ಕಲೆ-ಕಪ್ಪು ಚುಕ್ಕೆ, ಸಣ್ಣ ಗಾತ್ರ ಇತ್ಯಾದಿಯಿಂದಾಗಿ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುವುದರಿಂದ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಗ್ರಾಹಕರು ಇಂಥ ಉತ್ಪನ್ನಗಳನ್ನು ಖರೀದಿಸಲು ಹಿಂಜರಿಯುತ್ತಾರೆ. ವ್ಯಾಪಾರಿಗಳು ಇವನ್ನು ಖರೀದಿಸುವುದಿಲ್ಲ. ಇದ ರಿಂದಾಗಿ, ಕೆಟ್ಟ ಹವಾಮಾನದ ಪ್ರತಿಫಲವನ್ನು ರೈತರು ಅನುಭವಿಸಬೇಕಾಗಿ ಬರುತ್ತದೆ. ಆದರೆ, ಕಡಿಮೆ ಗಾತ್ರ, ಛಿದ್ರಗೊಂಡಿರುವಿಕೆ, ಬಣ್ಣ ಕಳೆದುಕೊಂಡಿರುವುದು ಇತ್ಯಾದಿ ಸೂಕ್ತ ಗುಣಮಟ್ಟವಿಲ್ಲದ, ನೇರವಾಗಿ ಬಳಸಲು ಸಾಧ್ಯವಿಲ್ಲದ ಬೆಳೆಗಳಿಂದಲೂ ಎಥೆನಾಲ್ ಉತ್ಪಾದಿಸಬಹುದು. ನನ್ನ ಮಾತು ನಂಬಿ, ನಾವು ವ್ಯವಸ್ಥಿತ ಕಾರ್ಯನೀತಿಯೊಂದನ್ನು ರೂಪುಗೊಳಿಸಿದ ಬಳಿಕ ರೈತರು ಉತ್ಪಾದಿಸಿದ ಒಂದೇ ಒಂದು ಕಾಳು ಕೂಡ ವ್ಯರ್ಥವಾಗುವುದಿಲ್ಲ. ಇದರಿಂದ ರೈತರು ಗಳಿಸಿಕೊಳ್ಳುವ ಬಲವನ್ನು ನೀವು ಊಹಿಸಿ ಕೊಳ್ಳಬಹುದು.
ಸ್ನೇಹಿತರೇ,
 
ರಾಷ್ಟ್ರೀಯ ಕಾರ್ಯನೀತಿಯಡಿ ಗೃಹ ತ್ಯಾಜ್ಯವನ್ನಲ್ಲದೆ, ಕೃಷಿ ತ್ಯಾಜ್ಯ ಹಾಗೂ ಪ್ರಾಣಿಗಳ ಸೆಗಣಿಯನ್ನು ಕೂಡ ಇಂಧನವನ್ನಾಗಿ ಪರಿವರ್ತಿಸುವ ರಾಷ್ಟ್ರವ್ಯಾಪಿ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಪ್ರತಿ ಮನೆಯಲ್ಲಿ ಉತ್ಪತ್ತಿಯಾಗುವ ಬಾಳೆ ಸಿಪ್ಪೆಯಲ್ಲದೆ, ತೋಟಗಳಲ್ಲಿ ಸೃಷ್ಟಿಯಾಗುವ ಬಾಳೆ ಹಣ್ಣಿನ ಸಿಪ್ಪೆಗಳನ್ನು ಕೂಡ ಭವಿಷ್ಯದಲ್ಲಿ ಇಂಧನವನ್ನಾಗಿ ಪರಿವರ್ತಿಸಲಾಗುವುದು.
 
ಜೊತೆಗೆ, ಹುಲ್ಲು ಹಾಗೂ ಬಿದಿರಿನಿಂದ ಕೂಡ ಎಥೆನಾಲ್ ಉತ್ಪಾದಿಸಬಹುದು. ಬಿದಿರನ್ನು ವಿಶೇಷವಾಗಿ ಈಶಾನ್ಯ ರಾಜ್ಯಗಳು ಹಾಗೂ ಆದಿವಾಸಿಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅವರ ಆರ್ಥಿಕತೆಯನ್ನು ರೂಪಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಲಿದ್ದು, ಬಿದಿರು ಬೆಳೆಗಾರರಿಗೆ ಅನುಕೂಲವಾಗಲಿದೆ.
 
ಸ್ನೇಹಿತರೇ,
ಕೃಷಿ ತ್ಯಾಜ್ಯ ಅಥವಾ ಕೂಳೆ ರೈತರ ಪ್ರಮುಖ ಸಮಸ್ಯೆಗಳಲ್ಲೊಂದು. ಆದರೆ, ಕೃಷಿ ತ್ಯಾಜ್ಯ ಬೆಲೆ ಬಾಳುವ ಸ್ವಾಭಾವಿಕ ಸಂಪನ್ಮೂಲ. ಆದರೆ, ಅರಿವಿನ ಕೊರತೆಯಿಂದ ಇದನ್ನು ನಾವು ಸುಡುತ್ತೇವೆ. ಕೃಷಿ ತ್ಯಾಜ್ಯ ಬಳಸಿ ನೆಲವನ್ನು ಫಲವತ್ತಾಗಿಸ ಬಹುದಾದರೂ, ನಮ್ಮದೇ ಕೈಯಿಂದ ನಮ್ಮ ಕಣ್ಣೆದುರಿಗೇ ಅದನ್ನು ಸುಡುತ್ತೇವೆ. ಪಂಜಾಬ್ ಹಾಗೂ ಹರಿಯಾಣದ ರೈತರು ಪ್ರತಿ ಋತುವಿನಲ್ಲೂ ಈ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಿಸಿದ್ದೇನೆ. ಇದೊಂದು ಗಂಭೀರ ಸವಾಲಾಗಿ ಪರಿಣಮಿಸಿದೆ.
 
ಕೃಷಿ ತ್ಯಾಜ್ಯವನ್ನು ಸುಡುವುದರಿಂದ ನೆಲದ ಫಲವತ್ತತೆ ಕಡಿಮೆಯಾಗುತ್ತದೆ ಹಾಗೂ ಇದರಿಂದ ಬಿಡುಗಡೆಯಾಗುವ ಹೊಗೆಯಿಂದ ವಾಯುಮಾಲಿನ್ಯವುಂಟಾಗಿ, ಪರಿಸರದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ನಾನು ಆಗಾಗ ರೈತ ಸೋದರರಿಗೆ ಹೇಳುತ್ತಲೇ ಇರುತ್ತೇನೆ. ಆದ್ದರಿಂದ, ಕೂಳೆಯಿಂದ ಎಥೆನಾಲ್ನ್ನು  ತಯಾರಿಸುವ ಸಾಧ್ಯತೆ ಕುರಿತ ಕೆಲಸ ಭಾರಿ ಪ್ರಮಾಣದಲ್ಲಿ ನಡೆಯಬೇಕಿದೆ. ಇದರಿಂದ ಕೂಳೆಗಳು ಕೂಡ ಆದಾಯದ ಮಾಧ್ಯಮವಾಗಲಿವೆ. ವಾಯುಮಾಲಿನ್ಯ ಕಡಿತಗೊಳ್ಳುವುದಲ್ಲದೆ, ರೈತರ ಆದಾಯ ಕೂಡ ಹೆಚ್ಚಲಿದೆ.
 
ಸ್ನೇಹಿತರೇ,
ಜೈವಿಕ ಪದಾರ್ಥವನ್ನು ಜೈವಿಕ ಇಂಧನವಾಗಿ ಪರಿವರ್ತಿಸಲು ಸರ್ಕಾರ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. 10,000 ಕೋಟಿ ರೂ. ವೆಚ್ಚದಲ್ಲಿ 12 ಆಧುನಿಕ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಇಂಥ ಸಂಸ್ಕರಣಾಗಾರವೊಂದು 1000-1500 ಜನರಿಗೆ ಉದ್ಯೋಗ ನೀಡಬಲ್ಲದು. ಇದರರ್ಥ-ಸಂಸ್ಕರ ಣಾಗಾರಗಳಿಂದ 1.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದಲ್ಲದೆ, ಪಶುಗಳ ಸಗಣಿಯಿಂದ ಇಂಧನವನ್ನು ತಯಾರಿಸುವ ಕಾರ್ಯಕ್ರಮ ಕೂಡ ತೀವ್ರ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.
 
ಕಳೆದ ಬಜೆಟ್ನೇಲ್ಲಿ “ಗೋಬರ್ಧಥನ್ ಯೋಜನೆ’ಯನ್ನು ಚಾಲನೆಗೊಳಿಸಿರುವುದನ್ನು ನೀವು ನೋಡಿರುತ್ತೀರಿ. ಗೋಬರ್ಧುನ್ ಯೋಜನೆಯಡಿ, ದೇಶದ ಎಲ್ಲ ಜಿಲ್ಲೆಗಳಲ್ಲೂ ಜೈವಿಕ ಇಂಧನ ಸ್ಥಾವರವೊಂದನ್ನು ಸ್ಥಾಪಿಸಲಾಗುತ್ತದೆ. ಪ್ರಸ್ತುತ 700 ಸ್ಥಾವರಗಳನ್ನು ಸ್ಥಾಪಿಸಿದ್ದು, ಭವಿಷ್ಯದಲ್ಲಿ ಇದನ್ನು ವಿಸ್ತರಿಸಲಾಗುವುದು. ರೈತರು ಹಾಗೂ ಸ್ವಸಹಾಯ ಸಂಘಗಳು ಇದರಲ್ಲಿ ಪಾಲ್ಗೊಂಡಿವೆ.
ಸ್ನೇಹಿತರೇ,
ಗೋಬರ್ಧತನ್, ವನ್ಧ‍ನ್ ಮತ್ತು ಜನ್ಧ ನ್ನಂಲಥ ಯೋಜನೆಗಳ ಮೂಲಕ ಬಡಜನರು, ರೈತರು ಹಾಗೂ ಆದಿವಾಸಿಗಳಿಗೆ ಆದಾಯ ಸೃಷ್ಟಿಯ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲಾಗುತ್ತಿದೆ. ನಿಮ್ಮ ಬೆಳೆಗಳು ಮಾತ್ರವಲ್ಲದೆ, ಪಶುಗಳ ತ್ಯಾಜ್ಯ, ಕೃಷಿ ತ್ಯಾಜ್ಯ, ಗೃಹ ತ್ಯಾಜ್ಯ ಮತ್ತು ಇನ್ನಿತರ ತ್ಯಾಜ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.
ಇದರ ಜೊತೆಗೆ, ಕಾಡಿನಲ್ಲಿ ಬೆಳೆಯುವ ಸಸ್ಯಗಳು ಹಾಗೂ ಹಣ್ಣುಗಳಿಂದ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಚಳಿಗಾಲದ ವೇಳೆ ಮರಗಳಿಂದ ಎಲೆಗಳು ಉದುರಿ, ಒಂದು ಇಲ್ಲವೇ ಎರಡು ಅಡಿ ಎತ್ತರದ ಗುಡ್ಡೆಗಳು ನಿರ್ಮಾಣವಾಗಿರುವುದನ್ನು ನೀವು ನೋಡಿರುತ್ತೀರಿ. ಇದು ಕೂಡ ಆದಾಯದ ಮಾಧ್ಯಮವಾಗಬಹುದು. ಇದೇ “ತ್ಯಾಜ್ಯದಿಂದ ಐಶ್ವರ್ಯ’ ಆಂದೋಲನ. ಈ ತ್ಯಾಜ್ಯ ಕೊಳಕಿಗೆ ಕಾರಣವಾಗಿರುವುದರಿಂದ, ಇದು ಸ್ವಚ್ಛ ಭಾರತ ಆಂದೋಲನಕ್ಕೆ ಇಂಬು ನೀಡುತ್ತಿದೆ.
 
ಸ್ನೇಹಿತರೇ,
ಈ ಆಂದೋಲನದಲ್ಲಿ ಬಳಕೆಯಾದ ತಂತ್ರಜ್ಞಾನದ ಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಹಾಗೂ ಸ್ಟಾರ್ಟ್ಅಲಪ್ಗದಳ ಯುವಜನರು ಗಮನಾರ್ಹ ಪಾತ್ರ ವಹಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರೆಲ್ಲರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಇಲ್ಲಿ ಬಳಕೆಯಾಗುವ ತಾಂತ್ರಿಕತೆಯನ್ನು ಇನ್ನಷ್ಟು ಉತ್ತಮಗೊಳಿಸಲು ನೀವೆಲ್ಲ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಈ ಕ್ಷೇತ್ರದಲ್ಲಿ ಮಾಡಬೇಕಾದ್ದು ಸಾಕಷ್ಟಿದೆ. ಉದಾಹರಣೆಗೆ, ಉತ್ತಮ ಗುಣಮಟ್ಟ ಹಾಗೂ ಹೆಚ್ಚು ಇಳುವರಿ ನೀಡಬಲ್ಲ ಜೈವಿಕ ಇಂಧನ ಬೆಳೆಗಳ ಶೋಧನೆ. ಇದು ಸಾಧ್ಯವಾಗಬೇಕೆಂದರೆ, ಹೊಸ ಸ್ಟಾರ್ಟ್ಅೈಪ್ಗೆಳ ಉದ್ಯಮಿಗಳು ಹಾಗೂ ನೂತನ ತಂತ್ರಜ್ಞಾನ ಇರುವವರು ಒಟ್ಟಾಗಬೇಕಿದೆ.
ಎಂಜಿನಿಯರಿಂಗ್ ಕಾಲೇಜು, ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜೈವಿಕ ಇಂಧನ ಕುರಿತ ಕೋರ್ಸ್ಗೆಿ ಆದ್ಯತೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ. ಇಷ್ಟಲ್ಲದೆ, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ಗಳ ಮೂಲಕ ಜೈವಿಕ ಇಂಧನ ಕುರಿತು ಹೆಚ್ಚು ಹೆಚ್ಚು ಮಾಹಿತಿ ರೈತರಿಗೆ ತಲುಪಬೇಕಿದೆ. ದೇಶದೆಲ್ಲೆಡೆ ನಡೆಯುವ ಕೃಷಿ ಮೇಳಗಳಲ್ಲಿ ಜೈವಿಕ ಇಂಧನವು ಕೇಂದ್ರ ವಿಷಯವನ್ನಾಗಿಸುವ ಮೂಲಕ ರೈತರಲ್ಲಿ ಅರಿವು ಮೂಡಿಸಬೇಕಿದೆ.
 
ಸ್ನೇಹಿತರೇ,
ನಗರಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಪ್ರಮುಖ ಸಂಗತಿ ಎಂದರೆ, ಘನ ತ್ಯಾಜ್ಯ ನಿರ್ವಹಣೆ. ಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರು ಸೇರಿದಂತೆ ನಾನಾ ಮೂಲ ಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಉತ್ತಮಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಸಣ್ಣ ನಗರವೊಂದರ ಚಹಾ ಮಾರಾಟಗಾರನ ಕುರಿತ ಸುದ್ದಿಯೊಂದನ್ನುನಾನು ಓದಿದ್ದೆ; ಆತ ಸಣ್ಣ ಚರಂಡಿ ಬಳಿ ಚಹಾ ಮಾರುತ್ತಿದ್ದ. ಚಹಾಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾನ್ಯವಾಗಿ ನನ್ನ ಗಮನವನ್ನು ಸೆಳೆಯುತ್ತವೆ. ಆತನಿಗೆ ಒಂದು ಆಲೋಚನೆ ಬಂತು. ಚರಂಡಿಯಲ್ಲಿದ್ದ ಮಲಿನ ನೀರಿನಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೀಗಾಗಿ, ಆತ ಬೋರಲು ಹಾಕಿದ ಬೋಗುಣಿಯಲ್ಲಿ ರಂಧ್ರವೊಂದನ್ನು ಮಾಡಿ, ಅದರೊಳಗೆ ಕೊಳವೆಯೊಂದನ್ನು ತೂರಿಸಿದ. ಚರಂಡಿಯಿಂದ ಹೊರಹೊಮ್ಮುತ್ತಿದ್ದ ಅನಿಲವು ಕೊಳವೆ ಮೂಲಕ ಆತನ ಅಂಗಡಿಗೆ ಬಂದು, ಅದನ್ನು ಬಳಸಿಕೊಂಡು ಆತ ಚಹಾ ತಯಾರಿಸತೊಡಗಿದ. ಇದೊಂದು ಸರಳ ತಂತ್ರಜ್ಞಾನ. 
ನಾನು ಗುಜರಾತಿಗೆ ತೆರಳಿದ್ದಾಗ ನನ್ನ ಬೆಂಗಾವಲು ವಾಹನಗಳ ಮುಂದೆ ಸ್ಕೂಟರ್ವೊಂರದು ಹೋಗುತ್ತಿತ್ತು. ಸ್ಕೂಟರ್ನೆಲ್ಲಿದ್ದ ವ್ಯಕ್ತಿ ದೊಡ್ಡ ಟ್ರ್ಯಾಕ್ಟರ್ ಟ್ಯೂಬ್ವೊಂ ದನ್ನು ಹಿಡಿದು ಕೊಂಡಿದ್ದ. ಟ್ಯೂಬ್ ಗಾಳಿಯಿಂದ ತುಂಬಿಕೊಂಡಿತ್ತು. ಸ್ಕೂಟರ್ನಿಲ್ಲಿ ದೊಡ್ಡದೊಂದು ಟ್ರ್ಯಾಕ್ಟರ್ ಟ್ಯೂಬ್ನ್ನುದ ತೆಗೆದುಕೊಂಡು ಹೋಗುವುದನ್ನು ನೀವು ಕಲ್ಪಿಸಿಕೊಳ್ಳಿ. ಹಿಂಬಾಲಿಸುತ್ತಿದ್ದ ವಾಹನಗಳು ಡಿಕ್ಕಿ ಮತ್ತು ಅಪಘಾತದ ಆತಂಕ ಪಡುವುದು ಸಹಜ. ನಾನು ಕೂಡ ಆಶ್ಚರ್ಯಚಕಿತನಾದೆ. ಸಾಮಾನ್ಯವಾಗಿ ಖಾಲಿ ಟ್ಯೂಬ್ ಕೊಂಡೊಯ್ದು, ಬಳಿಕ ಅದಕ್ಕೆ ಗಾಳಿ ತುಂಬಲಾಗುತ್ತದೆ. ಹೀಗಾಗಿ, ನಾನು ಆತನಿಗೆ ಸ್ಕೂಟರ್ ನಿಲ್ಲಿಸಲು ಹೇಳಿದೆ.
 
ನಾವೆಲ್ಲ ಕಾರಿನಿಂದ ಇಳಿದೆವು, ಏನು ಮಾಡುತ್ತಿರುವೆ ಎಂದು ಸ್ಕೂಟರ್ ಸವಾರನನ್ನು ಕೇಳಿದೆವು ಹಾಗೂ ಟ್ಯೂಬ್ನ್ನುದ ಏಕೆ ಕೊಂಡೊಯ್ಯುತ್ತಿದ್ದಾನೆ ಎಂದು ವಿಚಾರಿಸಿದೆವು. ತಾನು ಜಮೀನಿನ ಬಳಿ ಹೋಗುತ್ತಿರುವುದಾಗಿ ಆತ ಹೇಳಿದ. ನಿನ್ನ ಉದ್ದೇಶವೇನು ಎಂದು ಆತನನ್ನು ಕೇಳಿದೆ. ಗೃಹ ತ್ಯಾಜ್ಯ ಹಾಗೂ ಪಶುಗಳ ಸಗಣಿಯನ್ನು ಬಳಸಿಕೊಳ್ಳಲು ತಾನು ಮನೆಯಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿರುವುದಾಗಿ ಆತ ಹೇಳಿದ. ಅನಿಲವನ್ನು ಟ್ಯೂಬ್ನಲಲ್ಲಿ ತುಂಬಿಕೊಂಡು ಹೊಲಕ್ಕೆ ಕೊಂಡೊಯ್ಯುತ್ತಿದ್ದೇನೆ ಎಂದ. ಅನಿಲವನ್ನು ಬಳಸಿ ನೀರಿನ ಪಂಪ್ ಚಾಲನೆಗೊಳಿಸುತ್ತಿದ್ದ. ದೇಶದ ರೈತರ ಸಾಮಥ್ರ್ಯವನ್ನು ನೋಡಿ! ಇಂದು ನಮ್ಮ ರೈತರು ಹಾಗೂ ಗ್ರಾಮಸ್ಥರು ಕೂಡ ಅನ್ವೇಷಕ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ, ಸಂಶೋಧನೆ ಮಾಡುತ್ತಾರೆ.
 
ಇಂಥ ಆಲೋಚನೆಗಳನ್ನು ಬಳಸಿಕೊಳ್ಳುವ ಸ್ಟಾರ್ಟ್ಅಂಪ್ಗತಳನ್ನು ಆರಂಭಿಸಲು ನಾನು ಜನರನ್ನು ಕೋರುತ್ತೇನೆ. ದೊಡ್ಡ ಕಾಲೇಜುಗಳಲ್ಲಿ ಕಾಣದ ಭಾರಿ ಆಲೋಚನೆಗಳು ಕೆಲ ವೊಮ್ಮೆ ದೇಶದ ರೈತರಲ್ಲಿ ಮೂಡುವ ಸಾಧ್ಯತೆ ಇದೆ. ಎಲ್ಲವನ್ನೂ ಒಗ್ಗೂಡಿಸುವ ಮೂಲಕ ನಾವು ಇದನ್ನು ಮುಂದೊಯ್ಯಲು ಬಯಸುತ್ತೇವೆ.
 
ಇಂದು ನಾವು ಬಿ-3 ಎಂಬ ಅಗಾಧ ಕಾರ್ಯಕ್ರಮ ಕೈಗೆತ್ತಿ ಕೊಂಡಿದ್ದೇವೆ. ಬಿ-3 ಎಂದರೆ, ಬಯೋಮಾಸ್, ಬಯೋಫ್ಯುಯಲ್ ಮತ್ತು ಬಯೋಎನರ್ಜಿ ಎಂದರ್ಥ. ಎಥೆನಾಲ್ ಜೊತೆಗೆ ತ್ಯಾಜ್ಯದಿಂದ ಜೈವಿಕ ಸಿಎನ್ಜಿಯಯನ್ನು ಉತ್ಪಾದಿಸುವ ಕೆಲಸ ತ್ವರಿತ ಗತಿಯಲ್ಲಿ ನಡೆದಿದೆ. ಡೀಸೆಲ್ ಹಾಗೂ ಪೆಟ್ರೋಲ್ನಿಂ ದ ಆಗುವ ಮಾಲಿನ್ಯವನ್ನು ತಡೆಯಲು ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸಿಎನ್ಜಿಟ ಬಳಕೆ ಉತ್ತೇಜಿಸಲಾಗುತ್ತಿದೆ. ಪ್ರಸ್ತುತ ನಾವು ಸಿಎನ್ಜಿಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈವರೆಗೆ, ದೇಶದಲ್ಲಿ 175ಕ್ಕೂ ಅಧಿಕ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ನಗರ ಮಾತ್ರವಲ್ಲ, ಹಳ್ಳಿಗಳಲ್ಲೂ ಸಿಎನ್ಜಿೇ ವಾಹನಗಳು ಸಂಚರಿಸುವ ಕಾಲ ದೂರವೇನಿಲ್ಲ.
 
ಸ್ನೇಹಿತರೇ,
ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ರಬ್ಬರ್ ಟೈರ್ ಇತ್ಯಾದಿ ವಸ್ತುಗಳು ಕಳವಳಕ್ಕೆ ಕಾರಣವಾಗಿವೆ. ಇವುಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ರಸ್ತೆಗಳ ನಿರ್ಮಾಣದಲ್ಲಿ ದೇಶಿ ತ್ಯಾಜ್ಯಗಳ ಬಳಕೆ ಕುರಿತು ಸಂಶೋಧನೆ ಚಾಲ್ತಿಯಲ್ಲಿದೆ.
ಸಾಮಾಜಿಕ ಮಾಧ್ಯಮದಲ್ಲಿ ಆಫ್ರಿಕಾದ ದೇಶವೊಂದರಲ್ಲಿ ಬಡಜನರು ಮಾಡಿದ ಕೆಲಸವನ್ನು ನಾನು ಈಗ ತಾನೇ ನೋಡಿದೆ. ಅವರು ಗ್ರಾಮದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ನದಿ ತೀರಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಸುಟ್ಟು, ಮರಳಿನ ಜೊತೆಗೆ ಮಿಶ್ರಗೊಳಿಸುತ್ತಾರೆ. ಈ ರೀತಿ ತಯಾರಿಸಿದ ಇಟ್ಟಿಗೆಗಳನ್ನು ಮಾರುತ್ತಾರೆ. ಮಹಿಳಾ ಸ್ವಸಹಾಯ ಗುಂಪುಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಅವರು ಈ ಮೂಲಕ ತ್ಯಾಜ್ಯವನ್ನು ಶುಚಿಗೊಳಿಸುತ್ತಿರುವುದಲ್ಲದೆ, ಅದರಿಂದ ನೂತನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಹಾಗೂ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ.  
 
ಸರ್ಕಾರವು ಅಭಿವೃದ್ಧಿ ಹಾಗೂ ಪರಿಸರದ ನಡುವೆ ಸಮತೋಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಹಾಗೂ ಪರಿಸರದ ನಡುವೆ ಸಮತೋಲದ ಬಗ್ಗೆ ನಾವು ಮಾತನಾಡುವಾಗ, ಇದರಲ್ಲಿ ವಿದ್ಯುತ್ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯುತ್ ಉತ್ಪಾದನೆ ಹಾಗೂ ಬಳಕೆಯು ಪರಿಸರದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ.
 
ವಿದ್ಯುತ್ ಉತ್ಪಾದನೆಗೆ ಸೌರ ಶಕ್ತಿ ಅಲ್ಲದೆ ಸಾಂಪ್ರದಾಯಿಕ ಮೂಲಗಳಾದ ಕಲ್ಲಿದ್ದಲು ಮತ್ತು ಸ್ವಾಭಾವಿಕ ಅನಿಲ ಸೇರಿದಂತೆ ನಾನಾ ಇಂಧನ ಮೂಲಗಳ ಬಳಕೆಗೆ ನಾವು ಒತ್ತು ನೀಡುತ್ತಿದ್ದೇವೆ. ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನೆರವಿನ ಮೂಲಕ ಇಡೀ ಜಗತ್ತಿನಲ್ಲಿ ಸೌರ ವಿದ್ಯುತ್ನ್ನು  ಉತ್ತೇಜಿಸುತ್ತಿದ್ದೇವೆ. ಕೃಷಿಯಲ್ಲಿ ಸೌರ ಪಂಪ್, ಕೈಗಾರಿಕೆ ಹಾಗೂ ಕಚೇರಿಗಳಲ್ಲಿ ಸೌರ ವಿದ್ಯುತ್ ಬಳಕೆ ಅತ್ಯಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇದಲ್ಲದೆ, ಮನೆಗಳು ಹಾಗೂ ಕಚೇರಿಗಳಲ್ಲಿ ಎಲ್‍ಇಡಿಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಆಗುತ್ತಿದೆ. ದೇಶದ ರೈಲ್ವೆ ನಿಲ್ದಾಣಗಳನ್ನು ಎಲ್ಇಲಡಿ ದೀಪಗಳು ಬೆಳಗುತ್ತಿವೆ ಎನ್ನುವುದು ಸಂತಸದ ವಿಷಯ. ಅವರು ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಭವಿಷ್ಯದಲ್ಲಿ ರೈಲ್ವೆಯ ಎಲ್ಲ ಕಟ್ಟಡಗಳು ಹಾಗೂ ರೈಲ್ವೆಯ ವಸತಿಗಳಲ್ಲಿ ಎಲ್ಇಮಡಿ ದೀಪ ಅಳವಡಿಸುವುದು ನಮ್ಮ ಗುರಿ. ನಾವು ಎಲ್ಇ ಡಿ ದೀಪಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸ್ವಚ್ಛ ಭಾರತ ಹಾಗೂ ಸ್ವಚ್ಛ ಭಾರತ ಆಂದೋಲನಗಳು ಪರಿಸರ ಕಾಳಜಿಯನ್ನು ಒಳಗೊಂಡಿವೆ.
 
ಹೊಗೆರಹಿತ ಅಡುಗೆ ಕೋಣೆಗಳು ಕೂಡ ಈ ಮುನ್ನೋಟದ ಭಾಗವಾಗಿವೆ. ಹೊಗೆಯಿಂದ ಮುಕ್ತಿ ಪಡೆದ ಐದು ಕೋಟಿ ಕುಟುಂಬಗಳು, ತಾಯಂದಿರು ಹಾಗೂ ಸೋದರಿ ಯರಿಗೆ ನಾನು ಶುಭ ಕೋರುತ್ತೇನೆ. ಭಾರತದಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಈ ಕೆಲಸ ಮುಕ್ತಾಯಗೊಂಡದ್ದು ಆಶ್ಚರ್ಯವೇ ಸರಿ. ದೇಶದಲ್ಲಿ 125 ಕೋಟಿ ಜನ ಹಾಗೂ 25-26 ಕೋಟಿ ಕುಟುಂಬಗಳಿವೆ. ಈ 25-26 ಕೋಟಿ ಕುಟುಂಬಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ 5 ಕೋಟಿ ಕುಟುಂಬಗಳು ಅಡುಗೆ ಅನಿಲ ಸಂಪರ್ಕವನ್ನು ಪಡೆದುಕೊಂಡಿವೆ. ಕೆಲಸ ಇಷ್ಟೊಂದು ವೇಗವಾಗಿ ಸಾಗುತ್ತಿರುವಾಗ, ಫಲಿತಾಂಶ ಬರುತ್ತದೆ ಎನ್ನುವುದನ್ನು ನೀವೇ ನೋಡುತ್ತೀರಿ.
 
ಸ್ನೇಹಿತರೇ,
ಇಂದು ರೈತರು, ತಂತ್ರಜ್ಞಾನಿಗಳು ಮತ್ತು ಸರ್ಕಾರದ ಅಧಿಕಾರಿಗಳು ಒಟ್ಟು ಸೇರಿ ದಿನವಿಡೀ ಜೈವಿಕ ಇಂಧನ ಹಾಗೂ ಅದರ ಸವಾಲುಗಳ ಕುರಿತು ಆಲೋಚಿಸಲಿದ್ದೀರಿ. ರೈತರ ದಿನನಿತ್ಯದ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದೀರಿ. 125 ಕೋಟಿ ಭಾರತೀಯರ ಇಂಧನ ಅಗತ್ಯಗಳನ್ನು ಪೂರೈಸುವ ಕುರಿತು ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವ ಕುರಿತು ಹಲವು ಸಲಹೆಗಳು ಬರಲಿವೆ ಎನ್ನುವ ಖಾತ್ರಿ ನನಗಿದೆ.      
 
ಜೈವಿಕ ಇಂಧನ ತಂದ ಕ್ರಾಂತಿಕಾರಿ ಬದಲಾವಣೆಗಳು ಸರ್ಕಾರದ ಪ್ರಯತ್ನದಿಂದ ಮಾತ್ರವೇ ಆಗಿದ್ದಲ್ಲ: ಆದರೆ, ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು ಹಾಗೂ ಉದ್ಯಮಿಗಳನ್ನು ಒಳಗೊಂಡ ಸಾರ್ವಜನಿಕ ಸಹಭಾಗಿತ್ವದಿಂದ ಸಾಮೂಹಿಕ ಆಂದೋಳನವೊಂದನ್ನು ನಾವು ಸೃಷ್ಟಿಸಬೇಕಿದೆ. ಇಲ್ಲಿ ಉಪಸ್ಥಿತರಿರುವ ರಾಜ್ಯಗಳ ಪ್ರತಿನಿಧಿಗಳು ಪ್ರತಿ ಗ್ರಾಮಕ್ಕೂ ಜೈವಿಕ ಇಂಧನದ ಲಾಭಗಳು ಸಿಗುವಂತೆ ಮಾಡಲು ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರಯತ್ನಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇಂದು ಜಗತ್ತು ಜೈವಿಕ ಇಂಧನ ದಿನವನ್ನು ಆಚರಿಸುತ್ತಿದೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಹಲವು ಉಪಕ್ರಮಗಳನ್ನು ಆರಂಭಿಸಿದ್ದು, ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಜಗತ್ತಿಗೆ ಖಾತ್ರಿ ನೀಡಿದೆ. ಭಾರತ ತೆಗೆದುಕೊಂಡ ಕ್ರಮಗಳನ್ನು ಜಗತ್ತಿನೆಲ್ಲೆಡೆ ಶ್ಲಾಘಿಸಲಾಗಿದೆ.
 
ಜಗತ್ತು ಭಾರತದ ಯೋಜನೆಗಳು ಹಾಗೂ ಕಾರ್ಯನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಂದಿನ ಪ್ರಯತ್ನಗಳು ನವ ಚೇತನವನ್ನು ತುಂಬಲಿವೆ, ಹೊಸ ದಿಕ್ಕನ್ನು ತೋರಿಸಲಿದೆ ಹಾಗೂ ಪ್ರಗತಿಯ ವೇಗವನ್ನು ಹೆಚ್ಚಿಸಲಿದೆ. ಈ ಯಶಸ್ವಿ ಯೋಜನೆಗಾಗಿ ನಾನು ನಿಮ್ಮೆಲ್ಲರಿಗೂ ಹೃದಯದಾಳದಿಂದ ಶುಭಾಷಯ ಕೋರುತ್ತೇನೆ.
ಎಲ್ಲರಿಗೂ ಧನ್ಯವಾದ!