Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ನಾಯಕರಿಂದ ಅಭಿನಂದನೆಯ ಕರೆಗಳನ್ನು ಸ್ವೀಕರಿಸಿದ ಪ್ರಧಾನಮಂತ್ರಿ


2019ರ ಸಾರ್ವತ್ರಿಕ ಚುನಾವಣೆಯ ದಿಗ್ವಿಜಯದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ; ಭೂತಾನ್ ದೊರೆ ಶ್ರೀ ಜಿಗ್ಮೆ ಖೇಸರ್ ನಮಗ್ಯೇಲ್ ವಾಂಗ್ ಚುಕ್; ಭೂತಾನ್ ಪ್ರಧಾನಮಂತ್ರಿ ಡಾ. ಲೋಟೇ ಶೇರಿಂಗ್; ನೇಪಾಳದ ಪ್ರಧಾನಮಂತ್ರಿ ಶ್ರೀ ಕೆ.ಪಿ. ಶರ್ಮಾ ಓಲಿ; ಮಾಲ್ಡೀವ್ಸ್ ನ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮದ್ ಸೋಲಿಹ್; ಶ್ರೀಲಂಕಾದ ಪ್ರಧಾನಮಂತ್ರಿ ಶ್ರೀ ರೇನಿಲ್ ವಿಕ್ರಮಸಿಂಘೆ; ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್; ಫ್ರಾನ್ಸ್ ನ ಅಧ್ಯಕ್ಷ ಶ್ರೀ ಎಮ್ಯಾನ್ಯುಯಲ್ ಮೆಕ್ರಾನ್; ಜಪಾನ್ ಪ್ರಧಾನಮಂತ್ರಿ ಶ್ರೀ ಅಬೆ ಶಿಂಜೋ; ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಸ್ಕಾಟ್ ಮಾರಿಸನ್; ಮಾರಿಶಸ್ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಜುಗ್ನೌತ್; ಯುಎಇಯ ರಾಜಕುಮಾರ ಶ್ರೀ ಮೊರಮದ್ ಬಿನ್ ಜಾಯೆದ್ ಮತ್ತು ಇಸ್ರೇಲ್ ನ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಸೇರಿದಂತೆ ದೇಶದಾದ್ಯಂತದ ನಾಯಕರುಗಳಿಂದ ಅಭಿನಂದನಾ ಕರೆಗಳನ್ನು ಸ್ವೀಕರಿಸಿದರು.

ಪ್ರಧಾನಮಂತ್ರಿಯವರನ್ನು ಆತ್ಮೀಯವಾಗಿ ಅಭಿನಂದಿಸಿದ ನಾಯಕರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ದೇಶದ ಜನತೆ ಇಟ್ಟುಕೊಂಡಿರುವ ಅಚಲ ವಿಶ್ವಾಸವನ್ನು ಈ ಐತಿಹಾಸಿಕ ಜನಾದೇಶ ಬಿಂಬಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರ ಅಭಿನಂದನೆಗಳಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಸಾರ್ವತ್ರಿಕ ಚುನಾವಣೆ ವಿಶ್ವದ ಅತಿ ದೊಡ್ಡ ಭಾರತದ ಪ್ರಜಾಪ್ರಭುತ್ವ ಶಕ್ತಿಯನ್ನು ಸಾಕಾರಗೊಳಿಸಿದೆ ಎಂದು ತಿಳಿಸಿದರು. ಪರಸ್ಪರ ಅಭಿವೃದ್ಧಿ ಸಾಧಿಸುವ ಉಪಯುಕ್ತ ದ್ವಿಪಕ್ಷೀಯ ಬಾಂಧವ್ಯಕ್ಕೆ ನೀಡುತ್ತಿರುವ ಸಹಕಾರಕ್ಕಾಗಿ ಜಾಗತಿಕ ನಾಯಕರುಗಳಿಗೆ ಧನ್ಯವಾದ ಅರ್ಪಿಸಿದ ಅವರು, ಇನ್ನೂ ಬಲವಾದ ಸಂಬಂಧಗಳನ್ನು ಬೆಳೆಸಲು ಅವರೊಂದಿಗೆ ಮತ್ತಷ್ಟು ಆಪ್ತವಾಗಿ ಕೆಲಸ ಮಾಡುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು.

ಸಾಮಾಜಿಕ ತಾಣ ಮತ್ತು ಇತರ ಮಾಧ್ಯಮಗಳ ಮೂಲಕ ತಮಗೆ ಅಭಿನಂದನೆಗಳನ್ನು ಸಲ್ಲಿಸಿದ ಇತರ ವಿವಿಧ ನಾಯಕರುಗಳಿಗೂ ಪ್ರಧಾನಮಂತ್ರಿಯವರು ಕೃತಜ್ಞತೆ ಸಮರ್ಪಿಸಿದರು.

******