ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಮೆ ಮಾಡಿಸಿದ ವಿಕಲಚೇತನ ವ್ಯಕ್ತಿಗಳಿಗೆ ವೃತ್ತಿ ಸಂಬಂಧಿ ಕಾಯಿಲೆಗಳು, ಪುನರ್ವಸತಿ ಮತ್ತು ವೃತ್ತಿ ತರಬೇತಿ ನೀಡುವ ಕ್ಷೇತ್ರದಲ್ಲಿನ ಸಹಯೋಗಕ್ಕಾಗಿ ಭಾರತ ಮತ್ತು ಜರ್ಮನಿ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಗಳಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ.
ಪ್ರಯೋಜನಗಳು:
ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯ (ಓಎಸ್ಎಚ್) ಮತ್ತು ಸಾಮಾಜಿಕ ಸುರಕ್ಷತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶಿಷ್ಠ ಸಂಸ್ಥೆ ಡಿಜಿವಿಯುನೊಂದಿಗಿನ ತಿಳಿವಳಿಕೆ ಒಪ್ಪಂದಗಳು ಈ ಕೆಳಗಿನ ಕ್ಷೇತ್ರದಲ್ಲಿ ವಿಸ್ತೃತವಾಗಿ ಸಹಕಾರಯಾಗಲಿವೆ:-
ವಿಮೆ ಮಾಡಿಸಿದ ವಿಕಲಚೇತನ ವ್ಯಕ್ತಿಗಳಿಗೆ ವೈದ್ಯಕೀಯ, ಔದ್ಯೋಗಿಕ ಮತ್ತು ಸಾಮಾಜಿಕ ಪುನರ್ವಸತಿ ಕ್ಷೇತ್ರದ ಚಟುವಟಿಕೆ ಉತ್ತೇಜನ ಮತ್ತು ಮಾಹಿತಿ ವಿನಿಮಯ, ಹಾಗೂ
ಔದ್ಯೋಗಿಕ ಕಾಯಿಲೆಗಳ ತಡೆ, ಪತ್ತೆ ಮತ್ತು ಚಿಕಿತ್ಸೆ
ಪ್ರಮುಖ ಪರಿಣಾಮಗಳು:
ಮಾಹಿತಿಯ ವಿನಿಮಯ ಮತ್ತು ಸಹಯೋಗ ವಿಮೆ ಮಾಡಿಸಿದ ವಿಕಲಚೇತನ ವ್ಯಕ್ತಿಗಳ ಸಾಮರ್ಥ್ಯ ವರ್ಧನೆ ಮತ್ತು ಸಾಮಾಜಿಕ ಪುನರ್ವಸತಿಗೆ ಅನುವುಮಾಡಿಕೊಡುವುದರ ಜೊತೆಗೆ, ಔದ್ಯೋಗಿಕ ಕಾಯಿಲೆಗಳ ತಡೆ, ಪತ್ತೆ ಮತ್ತು ಚಿಕಿತ್ಸೆಗೂ ಸಹಕಾರಿಯಾಗಿದೆ.