ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವೇತನ ಹಾಗೂ ಪಿಂಚಣಿ ಸೌಲಭ್ಯ ಕುರಿತ 7ನೇ ಸಿಪಿಸಿ (ಕೇಂದ್ರೀಯ ವೇತನ ಆಯೋಗ) ಶಿಫಾರಸುಗಳ ಜಾರಿಯ ಪ್ರಕ್ರಿಯೆಯಲ್ಲಿ ಅವುಗಳಿಗೆ ಸಂಬಂಧಿಸಿದ ಮಾರ್ಪಾಡಿನ ಮಹತ್ವದ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ. ಇದಕ್ಕೂ ಮುನ್ನ 2016ರ ಜೂನ್ ನಲ್ಲಿ ಸಂಪುಟವು 2016-17ನೇ ಸಾಲಿಗಾಗಿ (2015-16ರ ಸಾಲಿನ 2 ತಿಂಗಳ ಬಾಕಿಯೂ ಸೇರಿ) 84,933 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ವೆಚ್ಚದ ಶಿಫಾರಸುಗಳಿಗೆ ತನ್ನ ಅನುಮೋದನೆ ನೀಡಿತ್ತು.
ಪ್ರಸ್ತಾಪಿತ ಮಾರ್ಪಾಡುಗಳ ಲಾಭವು 2016ರ ಜನವರಿ 1ರಿಂದ ದೊರಕಲಿದೆ, ಅಂದರೆ 7ನೇ ಸಿಪಿಸಿಯ ಶಿಫಾರಸುಗಳ ಜಾರಿಯ ದಿನಾಂಕ ಆಗಲಿದೆ. ಸಂಪುಟ ಅನುಮೋದಿಸಿರುವ ಹೆಚ್ಚಳದಲ್ಲಿ ಕೇಂದ್ರ ಸರ್ಕಾರದ ಪಿಂಚಣಿಯ ವಾರ್ಷಿಕ ಮೊತ್ತವೇ ಸುಮಾರು 1,76,071 ಕೋಟಿ ರೂಪಾಯಿ ಆಗಲಿದೆ. ಸಂಪುಟದ ಕೆಲವು ಮಹತ್ವದ ನಿರ್ಧಾರಗಳನ್ನು ಈ ಕೆಳಗೆ ನಮೂದಿಸಲಾಗಿದೆ:
1. 2016ರ ಮೊದಲಿನ ಪಿಂಚಣಿದಾರರ ಮತ್ತು ಕುಟುಂಬದ ಪಿಂಚಣಿದಾರರ ಪಿಂಚಣಿಯ ಪರಿಷ್ಕರಣೆ.
ಸಂಪುಟವು ತನ್ನ ಅನುಮೋದನೆಯ ಮೇರೆಗೆ ರಚಿಸಲಾಗಿದ್ದ ಕಾರ್ಯದರ್ಶಿ (ಪಿಂಚಣಿ)ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳ ಆಧಾರದ ಮೇಲೆ 7ನೇ ಸಿಪಿಸಿ ಶಿಫಾರಸುಗಳಲ್ಲಿ 2016ಕ್ಕೆ ಮೊದಲ ಪಿಂಚಣಿದಾರರ ಮತ್ತು ಕುಟುಂಬದ ಪಿಂಚಣಿಯ ಪರಿಷ್ಕರಣೆಯ ವಿಧಾನಕ್ಕೆ ಸಂಬಂಧಿಸಿದ ಮಾರ್ಪಾಡಿಗೆತನ್ನ ಅನುಮೋದನೆ ನೀಡಿದೆ. ಪರಿಷ್ಕೃತ ಪಿಂಚಣಿ ಸೂತ್ರೀಕರಣಕ್ಕೆ ಸಂಪುಟ ಅನುಮೋದನೆ ನೀಡಿರುವುದರಿಂದ ಪಿಂಚಣಿದಾರರಿಗೆ ಹೆಚ್ಚುವರಿ ಸೌಲಭ್ಯ ದೊರಕಲಿದೆ ಮತ್ತು ಈಗಾಗಲೇ ಪಿಂಚಣಿಯ ಪರಿಷ್ಕರಣೆಗಾಗಿ ಫಿಟ್ ಮೆಂಟ್ ಫ್ಯಾಕ್ಟರ್ ನಲ್ಲಿ ಎರಡನೇ ಸೂತ್ರೀಕರಣದ ಆಧಾರದಲ್ಲಿ ಮಾಡಿರುವ ವೆಚ್ಚಕ್ಕೆ ಮಿಗಿಲಾಗಿ 2016-17ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಅಂದಾಜು 5031 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ಇದರಿಂದ 2016ರ ಮುಂಚಿನ 55 ಲಕ್ಷ ನಾಗರಿಕ ಮತ್ತು ರಕ್ಷಣಾ ಇಲಾಖೆಯ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಲಾಭವಾಗಲಿದೆ.
7ನೇ ಸಿಪಿಸಿ ಶಿಫಾರಸುಗಳ ಜಾರಿಗೆ 2016ರ ಜೂನ್ 29ರಂದು ಅನುಮೋದನೆ ನೀಡಿದಾಗ, ಸಂಪುಟವು 7ನೇ ಸಿಪಿಸಿ 2016ಕ್ಕೆ ಮುಂಚಿನ ಎರಡು ಪರ್ಯಾಯ ಸೂತ್ರೀಕರಣ ಒಳಗೊಂಡ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರಥಮ ಸೂತ್ರೀಕರಣದ ಸಾಧ್ಯತೆಯನ್ನು ಸಮಿತಿ ಪರಿಶೀಲಿಸಿದ ತರುವಾಯಪಿಂಚಣಿ ಪರಿಷ್ಕರಣೆ ಪದ್ಧತಿಯ ಬದಲಾವಣೆಗೆ ಮಾಡಿದ್ ಶಿಫಾರಸಿಗೂ ಒಪ್ಪಿಗೆ ಸೂಚಿಸಿತ್ತು.
ಸಂಪುಟದ ನಿರ್ಧಾರದ ಅಂಶಗಂತೆ, 2016ಕ್ಕೆ ಮುಂಚಿನ ಪಿಂಚಣಿದಾರರ ಪಿಂಚಣಿಯನ್ನು ಫಿಟ್ ಮೆಂಟ್ ಸೆಕ್ಟರ್ ನ 2.57ರಲ್ಲಿ ಹಾಲಿ ಇರುವ ಪಿಂಚಣಿಯನ್ನು ಅಪವರ್ತನದೊಂದಿಗೆ ಎರಡನೇ ಸೂತ್ರೀಕರಣದ ರೀತ್ಯ ಪರಿಷ್ಕರಣೆ ಮಾಡಲಾಗಿದೆ, ಆದಾಗ್ಯೂ ಪಿಂಚಣಿದಾರರಿಗೆ 7ನೇ ಸಿಪಿಸಿ ಶಿಫಾರಸುಗಳ ಎರಡೂ ಸೂತ್ರೀಕರಣದಲ್ಲಿ ಹೆಚ್ಚು ಲಾಭದಾಯಕವಾದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಹೆಚ್ಚು ಲಾಭಕರವಾದ ಆಯ್ಕೆಯನ್ನು ಪಿಂಚಣಿದಾರರಿಗೆ ನೀಡುವ ಸಲುವಾಗಿ, ಸಂಪುಟವು ಸಮಿತಿಯ ಶಿಫಾರಸುಗಲನ್ನು ಒಪ್ಪಿಕೊಂಡಿದೆ, ಸಮಿತಿಯು ಪ್ರತಿಯೊಬ್ಬ ಪಿಂಚಣಿದಾರನಿಗೂ ನೀಡಲಾಗುವ ಪಿಂಚಣಿ ಪಾವತಿ ಆದೇಶ (ಪಿಪಿಓ)ದಲ್ಲಿ ಮಾಹಿತಿಯ ಆಧಾರದ ಮೇಲೆ ಪಿಂಚಣಿಯ ಪರಿಷ್ಕರಣೆಗೆ ಸಲಹೆ ಮಾಡಿತ್ತು. ನಾಮಮಾತ್ರದ ವೇತನದ ಪರಿಷ್ಕರಣೆಯ ಪರಿಷ್ಕೃತ ಪ್ರಕ್ರಿಯೆಯು ಎಲ್ಲಾ ಸಂದರ್ಭಗಳಲ್ಲಿ ಹೆಚ್ಚು ವೈಜ್ಞಾನಿಕ, ತರ್ಕಬದ್ಧ ಮತ್ತು ಕಾರ್ಯಗತಗೊಳಿಸಬಲ್ಲದ್ದಾಗಿದೆ. ಸಮಿತಿಯು ನೂರಾರು ಜೀವಂತ ಪಿಂಚಣಿ ಪ್ರಕರಣಗಳ ವಿಶ್ಲೇಷಣೆಯ ಬಳಿಕ ಈ ನಿರ್ಧಾರಕ್ಕೆ ಬಂದಿದೆ. ಪರಿಷ್ಕೃತ ಸೂತ್ರೀಕರಣವು 7ನೇ ಸಿಪಿಸಿ ಶಿಫಾರಸು ಮಾಡಿದ್ದ ಪ್ರಥಮ ಸೂತ್ರೀಕರಣಕ್ಕಿಂತ ಹೆಚ್ಚು ಪಿಂಚಣಿದಾರರಿಗೆ ಲಾಭಕರವಾಗಿದೆ, ಅದು ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ದಾಖಲೆಗಳ ಅಲಭ್ಯತೆಯ ಕಾರಣದಿಂದ ಜಾರಿ ಕಷ್ಟಸಾಧ್ಯವೆನಿಸಿತ್ತು ಮತ್ತು ಅದು ಹಲವು ತಾರತಮ್ಯಕ್ಕೆ ಎಡೆಮಾಡುತ್ತದೆ ಎಂದೆನಿಸಿತ್ತು.
2. ರಕ್ಷಣಾ ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ
ಸಂಪುಟವು 6 ನೇ ಸಿಪಿಸಿ ನಂತರ ಜಾರಿಗೊಳಿಸಲಾದ ಅಂಗವೈಕಲ್ಯ ಪಿಂಚಣಿ ಶೇಕಡಾವಾರು-ಆಧಾರಿತ ಆಡಳಿತವನ್ನು ಉಳಿಸಿಕೊಳ್ಳಲು ಸಹ ಅನುಮೋದನೆ ನೀಡಿದೆ, 7 ನೇ ಸಿಪಿಸಿಯನ್ನು ಸ್ಲ್ಯಾಬ್ ಆಧಾರಿತ ವ್ಯವಸ್ಥೆಯಾಗಿ ಬದಲಾಯಿಸಬೇಕೆಂದು ಶಿಫಾರಸು ಮಾಡಿದೆ.
ಹೊಸ ವ್ಯವಸ್ಥೆ ಶೇಕಡಾವಾರು ಆಧಾರ ಅಂಗವೈಕಲ್ಯ ಪಿಂಚಣಿಗೆ ಹೋಲಿಸಿದರೆ ಹಾಲಿ ಪಿಂಚಣಿದಾರರ ಅಂಗವೈಕಲ್ಯ ಪಿಂಚಣಿಯನ್ನು ಮುಂದೆ ನಿವೃತ್ತರಾಗುವವರಿಗೆ ಕಡಿಮೆ ಮೊತ್ತ ಬರುವಂತೆ ಮಾಡುವ ಕಾರಣ ಸ್ಲಾಬ್ ಆಧಾರಿತ ವ್ಯಸಸ್ಥೆ ಉಳಿಸಿಕೊಳ್ಳುವಂತೆ ಮನವಿಗಳು ಬಂದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯವು, ಅಂಗವೈಕಲ್ಯ ಪಿಂಚಣಿಯನ್ನು ರಾಷ್ಟ್ರೀಯ ಅನಾಮಲಿ ಸಮಿತಿ ಪರಿಶೀಲನೆಗೆ ಒಳಪಡಿಸಲಾಗಿತ್ತು,
ಈ ನಿರ್ಧಾರದಿಂದಾಗಿ ಹಾಲಿ ಮತ್ತು ಭವಿಷ್ಯದ ರಕ್ಷಣಾ ಸಿಬ್ಬಂದಿಗೆ ಹೆಚ್ಚುವರಿಯಾಗಿ ವಾರ್ಷಿಕ ಣಂದಾಜು 130 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚಕ್ಕೆ ಕಾರಣವಾಗುತ್ತದೆ.
AKT/VBA/SH