Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವೈದ್ಯರ ದಿನದಂದು ಡಾ. ಬಿ.ಸಿ. ರಾಯ್ ಗೆ ಗೌರವ ನಮನ ಸಲ್ಲಿಸಿ, ವೈದ್ಯರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈದ್ಯರ ದಿನವಾದ ಇಂದು ಡಾ. ಬಿ.ಸಿ. ರಾಯ್ ಅವರಿಗೆ ಗೌರವ ನಮನ ಸಲ್ಲಿಸಿದ್ದು, ವೈದ್ಯರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಸಮಾಜವನ್ನು ಸ್ವಸ್ಥ ಮತ್ತು ಆರೋಗ್ಯಪೂರ್ಣಗೊಳಿಸಲು ಹಗಲಿರುಳು ಶ್ರಮಪಟ್ಟ ದುಡಿಯುತ್ತಿರುವ ಎಲ್ಲ ವೈದ್ಯರುಗಳನ್ನು ನಾನು ವೈದ್ಯರ ದಿನದಂದು ಅಭಿನಂದಿಸುತ್ತೇನೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಅವರು ನೀಡುತ್ತಿರುವ ಸ್ಮರಣಾರ್ಹ ಕೊಡುಗೆಗೆ ಯಾವುದೇ ಪದ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನಾನು ವಿಶಿಷ್ಠ ವೈದ್ಯ ಡಾ. ಬಿ.ಸಿ. ರಾಯ್ ಅವರಿಗೂ, ಶ್ರದ್ಧಾಂಜಲಿ ಸಲ್ಲಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.

#ವೈದ್ಯರ ದಿನದಂದು, ನಾನು ಸಮಾಜವನ್ನು ಸ್ವಸ್ಥ ಮತ್ತು ಆರೋಗ್ಯಪೂರ್ಣವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರನ್ನು ಅಭಿನಂದಿಸುತ್ತೇನೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಅವರು ನೀಡುತ್ತಿರುವ ಸ್ಮರಣಾರ್ಹ ಕೊಡುಗೆಗೆ ಯಾವುದೇ ಬಣ್ಣನೆಯ ಪದ ನ್ಯಾಯ ಒದಗಿಸಲು ಸಾಧ್ಯವಿಲ್ಲ.

ನಾನು ಡಾ. ಬಿ.ಸಿ. ರಾಯ್ ಅವರಿಗೂ ಅವರ ವಿಶಿಷ್ಠ ಸೇವೆಗಾಗಿ ಗೌರವ ನಮನ ಸಲ್ಲಿಸುತ್ತೇನೆ.

— ನರೇಂದ್ರ ಮೋದಿ (@narendramodi) July 1, 2019