Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಹೀದ್ ಉಧಮ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾನ್ ಕ್ರಾಂತಿಕಾರಿ ಹುತಾತ್ಮ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಅವರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು. ಉಧಮ್ ಸಿಂಗ್ ಅವರ ಜೀವನದಲ್ಲಿ ಸಾಕಾರಗೊಂಡಿರುವ ಧೈರ್ಯ ಮತ್ತು ಶೌರ್ಯದ ಸಾಹಸಗಾಥೆಯು ತಾಯ್ನಾಡಿನ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯಲು ದೇಶದ ಪ್ರತಿಯೊಂದು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ-

“न जातु शौर्यं पुरुषस्य भानुरस्तं गतो भवति कदापि शश्वत्।

यथा पुनस्तपति दिवाकरोऽयं तथा पुनर्विक्रमते स वीरः॥”

ಶೌರ್ಯದ ಸೂರ್ಯ ಎಂದಿಗೂ ಶಾಶ್ವತವಾಗಿ ಮುಳುಗುವುದಿಲ್ಲ ಎಂದು ಸುಭಾಷಿತಂ ತಿಳಿಸುತ್ತದೆ. ಸೂರ್ಯ ಉದಯಿಸಿ ಮತ್ತೆ ಪ್ರಕಾಶಮಾನವಾಗಿ ಹೊಳೆಯುವಂತೆಯೇ, ಧೈರ್ಯಶಾಲಿ ಮನುಷ್ಯನು ತನ್ನ ಶೌರ್ಯದಿಂದ ಪ್ರತಿಯೊಂದು ಪ್ರತಿಕೂಲವನ್ನು ಜಯಗಳಿಸುತ್ತಾನೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“महान क्रांतिकारी शहीद उधम सिंह को उनके बलिदान दिवस पर सादर नमन। हिम्मत और हौसले से भरी उनकी जीवनगाथा देश की हर पीढ़ी को मातृभूमि के स्वाभिमान की रक्षा के लिए प्रेरित करती रहेगी।

न जातु शौर्यं पुरुषस्य भानुरस्तं गतो भवति कदापि शश्वत्।

यथा पुनस्तपति दिवाकरोऽयं तथा पुनर्विक्रमते स वीरः॥”

 

*****