ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಅನ್ವೇಷಣೆ ಸಹಕಾರಕ್ಕಾಗಿ ಭಾರತ ಮತ್ತು ವಿಯಟ್ನಾಂ ನಡುವೆ ಆಗಿರುವ ಚೌಕಟ್ಟು ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು. ಈ ಚೌಕಟ್ಟು ಒಪ್ಪಂದಕ್ಕೆ 2016ರ ಸೆಪ್ಟೆಂಬರ್ 3ರಂದು ಅಂಕಿತ ಹಾಕಲಾಗಿತ್ತು.
ಈ ಚೌಕಟ್ಟು ಒಪ್ಪಂದವು, ಭೂ ಸಂವೇದಿ;ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ಪಥದರ್ಶಕ; ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ; ವ್ಯೋಮನೌಕೆ ಮತ್ತು ಬಾಹ್ಯಾಕಾಶ ವ್ಯವಸ್ಥೆ ಮತ್ತು ಮೂಲ ವ್ಯವಸ್ಥೆ ಬಳಕೆ; ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳು ಸೇರಿದಂತೆ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಆನ್ವಯಿಕಗಳ ಕ್ಷೇತ್ರದಲ್ಲಿ ಸಾಮರ್ಥ್ಯ ಇರುವ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಅವಕಾಶ ನೀಡುತ್ತದೆ.
ಈ ಚೌಕಟ್ಟು ಒಪ್ಪಂದದ ಮೂಲಕವಾಗಿ ವಿಯಟ್ನಾಂ ಜೊತೆಗಿನ ಸಹಕಾರವು ಮಾನವತೆಯ ಉಪಯೋಗಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಚಟುವಟಿಕೆಗಳ ಅಭಿವೃದ್ಧಿಗೆ ಇಂಬು ನೀಡುತ್ತದೆ.
ಈ ಚೌಕಟ್ಟು ಒಪ್ಪಂದವು, ಭೂ ಸಂವೇದಿ; ಉಪಗ್ರಹ ಸಂವಹನ; ಬಾಹ್ಯಾಕಾಶ ಪಥದರ್ಶಕ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಅನ್ವೇಷಣೆಯಲ್ಲಿ ಹೊಸ ಸಂಶೋಧನಾ ಚಟುವಟಿಕೆಗಳು ಮತ್ತು ಆನ್ವಯಿಕಗಳ ಶಂಶೋಧನಾ ಸಾಧ್ಯತೆಗೆ ಪ್ರಚೋದನೆಯನ್ನು ನೀಡುತ್ತದೆ.
AKT/VBA/SH