ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಹಸ್ತಾಂತರಕ್ಕೆ ಭಾರತ ಮತ್ತು ಎಸ್ಟೋನಿಯಾ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಎಸ್ಟೋನಿಯಾದಲ್ಲಿ ಬಂಧನದಲ್ಲಿರುವ ಭಾರತೀಯ ಕೈದಿಗಳು ಅಥವಾ ಭಾರತದಲ್ಲಿರುವ ಎಸ್ಟೋನಿಯಾ ಕೈದಿಯಾಗಳಿಗೆ ತಮ್ಮ ಕುಟುಂಬದವರಿಗೆ ಹತ್ತಿರವಾಗುವಂತೆ ಉಳಿದ ಶಿಕ್ಷೆಯ ಅವಧಿಯನ್ನು ಕಳೆಯಲು ಮತ್ತು ಅವರ ಸಾಮಾಜಿಕ ಜವಾಬ್ದಾರಿಗಳನ್ನು ಪೂರೈಸಲು ಅವಕಾಶ ನೀಡಲಿದೆ.
ಹಿನ್ನೆಲೆ:
2004ಕ್ಕೆ ಮುನ್ನ, ವಿದೇಶೀ ಕೈದಿಗಳು ತಮ್ಮ ಉಳಿದ ಶಿಕ್ಷೆಯ ಅವಧಿಯನ್ನು ಅವರ ಮೂಲ ದೇಶದಲ್ಲಿ ಕಳೆಯಲು ವರ್ಗಾವಣೆ ಮಾಡಲು ದೇಶೀಯ ಕಾನೂನು ಇರಲಿಲ್ಲ ಅಥವಾ ವಿದೇಶೀ ನ್ಯಾಯಾಲಯಗಳಲ್ಲಿ ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ಕೈದಿಗಳನ್ನು ಭಾರತಕ್ಕೆ ವರ್ಗಾಯಿಸಿ ಉಳಿದ ಶಿಕ್ಷೆಯ ಅವಧಿ ಪೂರೈಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇಂಥ ಕೈದಿಗಳನ್ನು ಅವರ ತವರು ರಾಷ್ಟ್ರಕ್ಕೆ ಹಸ್ತಾಂತರಿಸುವುದು ಅವರ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುತ್ತದೆ.
ಹೀಗಾಗಿ, ಮೇಲಿನ ಉದ್ದೇಶದ ಈಡೇರಿಕೆಗಾಗಿ ಕೈದಿಗಳ ವಾಪಸಾತಿ ಕಾಯಿದೆ 2003 ಜಾರಿಗೆ ತರಲಾಗಿದೆ. ಕಾಯಿದೆಯ ಉದ್ದೇಶದ ಈಡೇರಿಕೆಗಾಗಿ, ಪರಸ್ಪರ ಹಿತವುಳ್ಳ ರಾಷ್ಟ್ರದೊಂದಿಗೆ ಭಾರತ ಒಪ್ಪಂದವೊಂದಕ್ಕೆ ಅಂಕಿತ ಹಾಕುವ ಅಗತ್ಯವಿದೆ ಮತ್ತು ಇದನ್ನು ತರುವಾಯ ಅಧಿಕೃತ ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸಬೇಕಾಗಿದೆ.
ಭಾರತ ಸರ್ಕಾರವು ಈವರೆಗೆ ಶಿಕ್ಷೆಯಾದ ಕೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಕಿಂಗ್ಡಮ್, ಮಾರಿಷಸ್, ಬುಲ್ಗೇರಿಯಾ, ಫ್ರಾನ್ಸ್, ಈಜಿಪ್ಟ್, ಶ್ರೀಲಂಕಾ, ಕೊಲಂಬಿಯಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಇರಾನ್, ಬಂಗ್ಲಾದೇಶ, ಬ್ರೆಜಿಲ್, ಇಸ್ರೇಲ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಯು.ಎ.ಇ, ಇಟಲಿ, ಟರ್ಕಿ, ಮಾಲ್ಡೀವ್ಸ್, ಥಾಯ್ಲ್ಯಾಂಡ್, ರಷ್ಯಾ ಒಕ್ಕೂಟ, ಕುವೇತ್, ವಿಯಟ್ನಾಂ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಖತಾರ್, ಮಂಗೋಲಿಯಾ, ಕಜಕಿಸ್ತಾನ್ ಮತ್ತು ಬಹರೇನ್ ಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಿದೆ. ಈವರೆಗೆ ಒಟ್ಟಾರೆ 65 ಕೈದಿಗಳ ವಿನಿಮಯ ಆಗಿದ್ದು, ಇದರಲ್ಲಿ 55 ಭಾರತೀಯರಾಗಿದ್ದಾರೆ.
AKT/VBA/SH