ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೋಮಾಲಿಯಾ ನಡುವೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಹಸ್ತಾಂತರ ಕುರಿತ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ತದನಂತರ ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಸೋಮಾಲಿಯಾದೊಂದಿಗೆ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಸೋಮಾಲಿಯಾದ ಕಾರಾಗೃಹದಲ್ಲಿರುವ ಭಾರತೀಯ ಕೈದಿಗಳು ಅದೇ ರೀತಿ ಭಾರತದ ಕಾರಾಗೃಹಗಳಲ್ಲಿರುವ ಸೋಮಾಲೀಯಾ ಕೈದಿಗಳು ತಮ್ಮ ಉಳಿದ ಶಿಕ್ಷೆಯ ಅವಧಿಯನ್ನು ತಮ್ಮ ದೇಶದಲ್ಲೇ ಕಳೆಯುವುದರಿಂದ ಅವರನ್ನು ಅವರ ಕುಟುಂಬಕ್ಕೆ ಹತ್ತಿರವಾಗುವಂತೆ ಮಾಡಲು ಅನುಕೂಲವಾಗುತ್ತದೆ ಮತ್ತು ಅವರಿಗೆ ಸಾಮಾಜಿಕ ಪುನರ್ವಸತಿಯನ್ನೂ ಕಲ್ಪಿಸುತ್ತದೆ.
ಭಾರತ ಸರ್ಕಾರವು ಯುನೈಟೆಡ್ ಕಿಂಗ್ಡಮ್, ಮಾರಿಷಸ್, ಬಲ್ಗೇರಿಯಾ, ಫ್ರಾನ್ಸ್, ಈಜಿಪ್ಟ್, ಶ್ರೀಲಂಕಾ, ಕಾಂಬೋಡಿಯಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಇರಾನ್, ಬಾಂಗ್ಲಾದೇಶ, ಬ್ರೆಜಿಲ್, ಇಸ್ರೇಲ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಯುಎಇ, ಇಟಲಿ, ಟರ್ಕಿ, ಮಾಲ್ಡೀವ್ಸ್, ಥಾಯ್ಲೆಂಡ್, ರಷ್ಯಾ ಒಕ್ಕೂಟ, ಕುವೈತ್, ವಿಯೆಟ್ನಾಂ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಕತಾರ್, ಮೊಂಗೋಲಿಯ, ಕಝಾಕಿಸ್ತಾನ, ಬಹ್ರೇನ್ ಮತ್ತು ಎಸ್ಟೋನಿಯಾದೊಂದಿಗೆ ಶಿಕ್ಷೆಗೆ ಒಳಗಾದ ವ್ಯಕ್ತಿಗಳ ಹಸ್ತಾಂತರ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ಹಿನ್ನೆಲೆ:
2004ಕ್ಕೆ ಮುನ್ನ, ವಿದೇಶೀ ಕೈದಿಗಳು ತಮ್ಮ ಉಳಿದ ಶಿಕ್ಷೆಯ ಅವಧಿಯನ್ನು ಅವರ ಮೂಲ ದೇಶದಲ್ಲಿ ಕಳೆಯಲು ವರ್ಗಾವಣೆ ಮಾಡಲು ಅಥವಾ ವಿದೇಶೀ ನ್ಯಾಯಾಲಯಗಳಲ್ಲಿಶಿಕ್ಷೆಗೆಗುರಿಯಾದಭಾರತೀಯ ಮೂಲದ ಕೈದಿಗಳನ್ನು ಭಾರತಕ್ಕೆ ವರ್ಗಾಯಿಸಿ ಉಳಿದ ಶಿಕ್ಷೆಯ ಅವಧಿ ಪೂರೈಸಲು ದೇಶೀಯ ಕಾನೂನು ಇರಲಿಲ್ಲ. ಇಂಥ ಕೈದಿಗಳನ್ನು ಅವರ ತವರು ರಾಷ್ಟ್ರಕ್ಕೆ ಹಸ್ತಾಂತರಿಸುವುದು ಅವರ ಸಾಮಾಜಿಕ ಪುನರ್ವಸತಿಗೆ ಅವಕಾಶ ನೀಡುತ್ತದೆ.
ಹೀಗಾಗಿ, ಮೇಲಿನ ಉದ್ದೇಶದ ಈಡೇರಿಕೆಗಾಗಿ ಕೈದಿಗಳ ವಾಪಸಾತಿ ಕಾಯಿದೆ 2003 ಜಾರಿಗೆ ತರಲಾಗಿದೆ. ಕಾಯಿದೆಯ ಉದ್ದೇಶದ ಈಡೇರಿಕೆಗಾಗಿ, ಈ ವಿಷಯದಲ್ಲಿ ಪರಸ್ಪರ ಹಿತಾಸಕ್ತಿ ಇರುವ ರಾಷ್ಟ್ರದೊಂದಿಗೆ ಭಾರತ ಒಪ್ಪಂದವೊಂದಕ್ಕೆ ಅಂಕಿತ ಹಾಕುವ ಅಗತ್ಯವಿದೆ ಮತ್ತು ಇದನ್ನು ತರುವಾಯ ಅಧಿಕೃತ ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸಬೇಕಾಗಿದೆ.
*****
AKT/VBA/SH