Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಿಸ್ತುಬದ್ಧ ಮಾತು ಮತ್ತು ಮನಸ್ಸು, ಸಂಯಮ, ಸ್ವತ್ಯಾಗ ಮತ್ತು ಸತ್ಯದ ಮಹತ್ವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತ ಪುಸ್ತಕವನ್ನು ಹಂಚಿಕೊಂಡಿದ್ದಾರೆ. ಯಾರ ಮಾತು ಮತ್ತು ಮನಸ್ಸು ಸುಸಂಸ್ಕೃತ ಹಾಗೂ ಏಕಾಗ್ರತೆಯಿಂದ ಕೂಡಿರುತ್ತವೆಯೋ ಮತ್ತು ಯಾರ ಜೀವನವು ತಪಸ್ಸು, ತ್ಯಾಗ ಹಾಗೂ ಸತ್ಯನಿಷ್ಠೆಯಿಂದ ಕೂಡಿದೆಯೋ, ಅಂತಹ ವ್ಯಕ್ತಿಯು ಜೀವನದಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡುತ್ತಾನೆ ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“यस्य वाङ्मनसी स्यातां सम्यक् प्रणिहिते सदा।

तपस्त्यागश्च सत्यं च स वै सर्वमवाप्नुयात्॥”

ಯಾರ ಮಾತು ಮತ್ತು ಮನಸ್ಸು ಸದಾ ಸುಸಂಸ್ಕೃತ ಹಾಗೂ ಏಕಾಗ್ರತೆಯಿಂದ ಕೂಡಿರುತ್ತವೆಯೋ ಮತ್ತು ಯಾರ ಜೀವನವು ತಪಸ್ಸು, ತ್ಯಾಗ ಹಾಗೂ ಸತ್ಯನಿಷ್ಠೆಯಿಂದ ಕೂಡಿದೆಯೋ, ಅಂತಹ ವ್ಯಕ್ತಿಯು ನಿಸ್ಸಂದೇಹವಾಗಿ ಜೀವನದಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡುತ್ತಾನೆ.

 

*****