ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ರಾಷ್ಟ್ರೀಯ ವಾತಾವರಣ ಸಂಶೋಧನಾ ಪ್ರಯೋಗಾಲಯ (ಎನ್.ಎ.ಆರ್.ಎಲ್.) ಮತ್ತು ಜಪಾನ್ ನ ಕ್ಯೋಟೋದ ಕ್ಯೋಟೋ ವಿಶ್ವವಿದ್ಯಾಲಯದ ಸುಸ್ಥಿರ ಮಾನವಗೋಳ ಸಂಶೋಧನಾ ಸಂಸ್ಥೆ (ಆರ್.ಐ.ಎಸ್.ಎಚ್) ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರ ಹಾಗೂ ವಿನಿಮಯಕ್ಕಾಗಿ ಎರಡೂ ಸಂಸ್ಥೆಗಳ ನಡುವೆ 2020ರ ನವೆಂಬರ್ 4 ಮತ್ತು 2020 ನವೆಂಬರ್ 11ರಂದು ಅಂಕಿತ ಹಾಕಲಾಗಿರುವ ಮತ್ತು ಅಂಚೆಯ ಮೂಲಕ ವಿನಿಮಯ ಮಾಡಿಕೊಳ್ಳಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.
ಉದ್ದೇಶಗಳು
ಹಿನ್ನೆಲೆ
ಎನ್.ಎ.ಆರ್.ಎಲ್ ಮತ್ತು ಆರ್.ಐ.ಎಸ್.ಎಚ್.ಗಳು ವಾಯುಮಂಡಲ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ವಿಜ್ಞಾನಿಗಳ ವಿನಿಮಯಕ್ಕೆ ಸಹಕರಿಸುತ್ತಿವೆ. ಈ ವ್ಯವಸ್ಥೆಯನ್ನು 2008ರಲ್ಲಿ ತಿಳಿವಳಿಕೆ ಒಪ್ಪಂದದ ಮೂಲಕ ಜಾರಿಗೊಳಿಸಲಾಯಿತು. ಮೇಲಿನ ಒಪ್ಪಂದವನ್ನು 2013ರಲ್ಲಿ ನವೀಕರಿಸಲಾಯಿತು. ಹೊಸ ಮಾರ್ಗಸೂಚಿಗಳ ಪ್ರಕಾರ ಸಹಕಾರಿ ಸಂಶೋಧನೆಯನ್ನು ಉತ್ತೇಜಿಸುವ ಹೊಸ ತಿಳಿವಳಿಕೆ ಒಪ್ಪಂದವನ್ನು 2020ರ ನವೆಂಬರ್ ನಲ್ಲಿ ಎರಡೂ ಕಡೆಯವರು ಸಹಿ ಮಾಡಿ ವಿನಿಮಯ ಮಾಡಿಕೊಂಡರು.
ಎನ್.ಎ.ಆರ್.ಎಲ್. ವಿಜ್ಞಾನಿಗಳು ಆರ್.ಐ.ಎಸ್.ಎಚ್. ನಡೆಸಿದ ವಾತಾವರಣದ ರೇಡಾರ್ ಕುರಿತು ಅಂತಾರಾಷ್ಟ್ರೀಯ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿದರು. ಕ್ಯೋಟೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಂಶೋಧಕರ ತಂಡ ಎನ್.ಎ.ಆರ್.ಎಲ್.ಗೆ ಭೇಟಿ ನೀಡಿ, ಎರಡೂ ಸಂಸ್ಥೆಗಳು ನಡೆಸುತ್ತಿರುವ ಸಹಕಾರಿ ಸಂಶೋಧನೆಯನ್ನು ಬಲಪಡಿಸಲು ಕೇಂದ್ರೀಕೃತ ಕಾರ್ಯಾಗಾರವನ್ನು ನಡೆಸಿದವು.
***