Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀಲಂಕಾ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ನವದೆಹಲಿಗೆ ಆಗಮನ


ಶ್ರೀಲಂಕಾ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಸಂಜೆ ನವದೆಹಲಿಗೆ ಆಗಮಿಸಿದರು. ಅವರು ಪ್ರಧಾನಮಂತ್ರಿ ಅವರ ಆಮಂತ್ರಣದ ಮೇರೆಗೆ 2020ರ ಫೆಬ್ರವರಿ 8 ರಿಂದ 11ರ ವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಶ್ರೀಲಂಕಾದ ಪ್ರಧಾನಮಂತ್ರಿ ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ಆಗಮಿಸಿದೆ. ಫೆಬ್ರವರಿ 8 ರಂದು ಅವರು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಪ್ರಧಾನಮಂತ್ರಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸುವರು. ಅಲ್ಲದೆ ಅವರು, ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸಮಾಲೋಚಿಸುವರು ಮತ್ತು ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವರು ಶ್ರೀಲಂಕಾದ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡುವರು.

ದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಶ್ರೀಲಂಕಾದ ಪ್ರಧಾನಮಂತ್ರಿ ಅವರು ಕೊಲಂಬೋಗೆ ತೆರಳುವ ಮುನ್ನ ವಾರಣಾಸಿ, ಸಾರಾನಾಥ್, ಬೋಧ್ ಗಯಾ, ತಿರುಪತಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದೇಶಗಳ ನಡುವೆ ಹಲವು ಉನ್ನತ ಮಟ್ಟದ ಸರಣಿ ಭೇಟಿಗಳು ನಡೆಯುತ್ತಿವೆ. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ, ತಮ್ಮ ಚುನಾವಣಾ ಜಯಭೇರಿಯ ನಂತರ ಅಧ್ಯಕ್ಷರಾಗಿ ವಹಿಸಿಕೊಂಡ ಕೂಡಲೇ ಭಾರತವನ್ನು ತಮ್ಮ ಮೊದಲ ಭೇಟಿಗೆ ಆಯ್ಕೆ ಮಾಡಿಕೊಂಡಿದ್ದರು.

*********