Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಜಗಮೋಹನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಶ್ರೀ ಜಗಮೋಹನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: “ಜಗಮೋಹನ್ ಜೀ ಅವರ ಅಗಲಿಕೆ ನಮ್ಮ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರು ಅನುಕರಣೀಯ ಆಡಳಿತಗಾರ ಮತ್ತು ಹೆಸರಾಂತ ವಿದ್ವಾಂಸರಾಗಿದ್ದರು. ಸದಾ ಅವರು ಭಾರತದ ಒಳಿತಿಗಾಗಿ ಶ್ರಮಿಸುತ್ತಿದ್ದರು. ಅವರು ಸಚಿವರಾಗಿದ್ದ ಅಧಿಕಾರಾವಧಿಯನ್ನು ನಾವಿನ್ಯಪೂರ್ಣ ನೀತಿ ನಿರೂಪಣೆಯಿಂದ ಗುರುತಿಸಲಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.” ಎಂದು ತಿಳಿಸಿದ್ದಾರೆ.

***