ಪಿಎಂಇಂಡಿಯಾ
ಖ್ಯಾತ ಶಿಕ್ಷಣ ತಜ್ಞ ಮತ್ತು ದಾನಿ ಶ್ರೀ ಡಿ.ವೈ. ಪಾಟೀಲ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಶ್ರೀ ಡಿ.ವೈ. ಪಾಟೀಲ್ ಅವರು ಯಾವಾಗಲೂ ಇತರರ ಜೀವನ, ವಿಶೇಷವಾಗಿ ಬಡವರ ಜೀವನವನ್ನು ಸುಧಾರಿಸಲು ಶ್ರಮಿಸುತ್ತಿದ್ದರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಶ್ರೀ ಡಿ.ವೈ. ಪಾಟೀಲ್ ಅವರು ಪರೋಪಕಾರಿಯಾಗಿ ಮತ್ತು ವಿಶೇಷವಾಗಿ ಶಿಕ್ಷಣದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದರು. ಯಾವಾಗಲೂ ಅವರು ಇತರರ, ಅದರಲ್ಲೂ ಬಡವರ ಜೀವನವನ್ನು ಸುಧಾರಿಸಲು ಶ್ರಮಿಸಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಈ ಶೋಕದ ಸಮಯದಲ್ಲಿ ಅವರ ಕುಟುಂಬವರ್ಗದವರು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಓಂ ಶಾಂತಿ.”
*****
Shri DY Patil Ji was at the forefront of serving society through philanthropy and education in particular. He always worked to improve the lives of others, especially the poor. Pained by his demise. My thoughts are with his family and admirers in this sad hour. Om Shanti. pic.twitter.com/paYN8qzJsz
— Narendra Modi (@narendramodi) August 4, 2026