Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿರಿಯ ನಟ ಶ್ರೀ ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ನಾನಾ ಪಾಟೇಕರ್ ಅವರಂತಹ ತೀವ್ರತೆ, ವಿಶಿಷ್ಟ ವ್ಯಕ್ತಿತ್ವ ಮತ್ತು ಮರೆಯಲಾಗದ ಛಾಪು ಹೊಂದಿದ್ದ ನಟರು ಬಹಳ ವಿರಳ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ತಾವು ಮಾಡಿದ  ಪ್ರತಿಯೊಂದು ಪಾತ್ರಕ್ಕೂ ಅವರು ತಮ್ಮ ಅದ್ಭುತ ಬಹುಮುಖ ಪ್ರತಿಭೆ ಮತ್ತು ಸೃಜನಶೀಲತೆಯಿಂದ  ಹಲವು ತಲೆಮಾರುಗಳವರೆಗೆ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಹ ಜೀವ ತುಂಬಿದ್ದರು ಎಂದು ಶ್ರೀ ನರೇಂದ್ರ ಮೋದಿ ಸ್ಮರಿಸಿದರು. ತಮ್ಮ ನೇರ, ನಿಷ್ಠುರ ಹಾಗೂ ಮುಕ್ತ ಅಭಿಪ್ರಾಯಗಳಿಗಾಗಿ ಅವರು ಅಪಾರ ಮೆಚ್ಚುಗೆ ಗಳಿಸಿದ್ದರು. ತಾವು ನಂಬಿದ್ದನ್ನು ಅಭಿವ್ಯಕ್ತಪಡಿಸಲು ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ ಎಂದೂ ಪ್ರಧಾನಿ ಹೇಳಿದರು.

ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿ, ಅವರ ನಿಧನದಿಂದ ತುಂಬಲಾರದ ನಷ್ಟ ಸೃಷ್ಟಿಯಾಗಿದೆ ಎಂದು ಹೇಳಿದರು. ಅವರ ಕುಟುಂಬದವರು, ಸ್ನೇಹಿತರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಅವರು ಸಂತಾಪ ಸೂಚಿಸಿದರು.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಶ್ರೀ ನಾನಾ ಪಾಟೇಕರ್ ಅವರಲ್ಲಿದ್ದಂತಹ ತೀವ್ರತೆ, ವಿಶಿಷ್ಟ ವ್ಯಕ್ತಿತ್ವ ಮತ್ತು ಮರೆಲಾಗದ ಛಾಪು ಹೊಂದಿದ್ದ ನಟರು ಬಹಳ ವಿರಳ. ಅವರು ಪ್ರತಿಯೊಂದು ಪಾತ್ರಕ್ಕೂ ಅಸಾಧಾರಣ ಬಹುಮುಖ ಪ್ರತಿಭೆ ಮತ್ತು ಸೃಜನಶೀಲತೆಯನ್ನು ತುಂಬಿದರು. ಹಲವು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ನಮಗೆ ನೀಡಿದ್ದಾರೆ. ತಮ್ಮ ನೇರ ಮತ್ತು ನಿರ್ಭೀತ ಅಭಿಪ್ರಾಯಗಳಿಗಾಗಿಯೂ ಅವರು ಮೆಚ್ಚುಗೆ ಪಡೆದಿದ್ದರು. ತಾವು ನಂಬಿದ್ದನ್ನು ಅಭಿವ್ಯಕ್ತಪಡಿಸಲು ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ.

ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಶ್ರೀ ನಾನಾ ಪಾಟೇಕರ್ ಅವರ ಕೊಡುಗೆ ಅಪಾರವಾದುದು. ಅವರ ನಿಧನವು ತುಂಬಲಾರದ ನಷ್ಟವನ್ನು ಸೃಷ್ಟಿಸಿದೆ. ಅವರ ಕುಟುಂಬದವರು, ಸ್ನೇಹಿತರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

*****