Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಪಿ.ಜಿ. ಬರುವಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 


ಪ್ರಮುಖ ಇಂಗ್ಲೀಷ್ ದೈನಿಕ ‘ದಿ ಅಸ್ಸಾಂ ಟ್ರಿಬ್ಯೂನ್’ ಗ್ರೂಪ್‌ ಸಂಸ್ಥೆಯ ಸಂಪಾದಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಫುಲ್ಲ ಗೋವಿಂದ ಬರುವಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ: 

”ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್‌ನ ಸಂಪಾದಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಜಿ. ಬರುವಾ ಅವರ ನಿಧನ ವಾರ್ತೆ ಕೇಳಿ ದುಃಖವಾಗಿದೆ. ಮಾಧ್ಯಮ ಜಗತ್ತಿಗೆ ಅವರು ನೀಡಿದ ಕೊಡುಗೆಗಳಿಂದ ಅವರನ್ನು ಸ್ಮರಿಸಲಾಗುತ್ತದೆ. ಅವರು ಅಸ್ಸಾಂನ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು ರಾಜ್ಯದ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಬಗ್ಗೆಯೂ ಉತ್ಸುಕರಾಗಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು, ಓಂ ಶಾಂತಿ.”

“দ্য আছাম ট্ৰিবিউন গ্ৰুপৰ সম্পাদক তথা পৰিচালন সঞ্চালক শ্ৰী পি জি বৰুৱা দেৱৰ বিয়োগত মৰ্মাহত হৈছো। সংবাদ মাধ্যমৰ জগতখনলৈ আগবঢ়োৱা অৱদানৰ বাবে তেওঁ স্মৰণীয় হৈ ৰ’ব। অসমৰ প্ৰগতিক আগুৱাই নিয়াৰ লগতে ৰাজ্যৰ সংস্কৃতিক জনপ্ৰিয় কৰি তোলাৰ প্ৰতিও তেওঁ উৎসাহী আছিল। তেওঁৰ পৰিয়াল আৰু গুণমুগ্ধসকলৰ প্ৰতি মোৰ সমবেদনা জনাইছো। ঔম শান্তি। “

 

*****