Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಲಾದು ಕಿಶೋರ್ ಸ್ವೈನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಲಾದು ಕಿಶೋರ್ ಸ್ವೈನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಒಡಿಶಾದ ಆಸ್ಕಾ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಸಂಸತ್ ಸದಸ್ಯರಾಗಿದ್ದ ಶ್ರೀ ಲಾದೂ ಕಿಶೋರ್ ಸ್ವೈನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಮಾಜಕ್ಕೆ ನೀಡಿದ ಕೊಡುಗೆಯಿಂದ ಅವರು ಸ್ಮರಣೀಯರಾಗಿದ್ದಾರೆ. ಗ್ರಾಮೀಣಾಭಿವೃದ್ಧಿಗಾಗಿ ಅವರು ಮಾಡಿರುವ ಕಾರ್ಯ ಉಲ್ಲೇಖನಾರ್ಹ. ಅವರ ಪುತ್ರ ನಚೀಕೇತ್ ರೊಂದಿಗೆ ಮಾತನಾಡಿ, ಸಂತಾಪ ಸೂಚಿಸಿದ್ದೇನೆ”ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

****