Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನಿಂದ ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026 ಅಂಗೀಕಾರಕ್ಕೆ ಪ್ರಧಾನಮಂತ್ರಿ ಶ್ಲಾಘನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026 ಅನ್ನು ಸಂಸತ್ತು ಅಂಗೀಕರಿಸಿರುವುದಕ್ಕೆ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ನಾಗರಿಕರನ್ನು ಸಬಲಗೊಳಿಸುವ ವಿಶ್ವಾಸ ಆಧಾರಿತ ಆಡಳಿತ ಚೌಕಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಮಸೂದೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದು ಈ ಕಾಲಘಟಕ್ಕೆ ಸರಿಹೊಂದದ ಹಳೆಯ ನಿಯಮಗಳು ಮತ್ತು ನಿಬಂಧನೆಗಳನ್ನು ತೆಗೆದುಹಾಕುವ ಜೊತೆಗೆ, ಅದೇ ವೇಳೆ ಪ್ರಕರಣಗಳ ತ್ವರಿತ ವಿಲೇವಾರಿ ಖಚಿತಪಡಿಸುತ್ತಾ ಅಪರಾಧಮುಕ್ತೀಕರಣದ ಮೂಲಕ ಮೊಕದ್ದಮೆಯ ಹೊರೆಯನ್ನು ಕಡಿಮೆ ಮಾಡಲಿದೆ.

ಮಸೂದೆಯ ಕರಡನ್ನು ರಚಿಸುವಲ್ಲಿ ಅಳವಡಿಸಿಕೊಂಡ ಸಮಾಲೋಚನಾ ವಿಧಾನವನ್ನು ಪ್ರಧಾನಮಂತ್ರಿಯವರು ವಿವರಿಸಿದ್ದು ಕರಡು ಪ್ರಕ್ರಿಯೆಗೆ ತಮ್ಮ ಅನುಭವದ ಆಳ ಜ್ಞಾನ ಹಂಚಿಕೊಂಡು ಸಂಸತ್ತಿನಲ್ಲಿ ಮಸೂದೆಗೆ ಬೆಂಬಲ ನೀಡಿದ ಎಲ್ಲರನ್ನೂ ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:

“ಸುಲಲಿತ ಜೀವನ” ಮತ್ತು “ಸುಲಭ ವ್ಯವಹಾರ” ಕ್ಕೆ ಬಹುದೊಡ್ಡ ಉತ್ತೇಜನ… 

ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ 2026 ಅನ್ನು ಸಂಸತ್ತು ಅಂಗೀಕರಿಸಿರುವುದು ಅಪಾರ ಹರ್ಷದ ಸಂಗತಿ. ಈ ಮಸೂದೆಯು ನಮ್ಮ ನಾಗರಿಕರನ್ನು ಸಬಲಗೊಳಿಸುವ ನಂಬಿಕೆ ಆಧಾರಿತ ಚೌಕಟ್ಟನ್ನು ಬಲಪಡಿಸಲಿದೆ. ಇದು ಪ್ರಸ್ತುತದ ಕಾಲಕ್ಕೆ‌ ಸೂಕ್ತವಲ್ಲದ ಹಳೆಯ ನಿಯಮಗಳು ಮತ್ತು ನಿಬಂಧನೆಗಳ ಅಂತ್ಯವನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಇದು ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಖಚಿತಪಡಿಸುತ್ತಾ, ಅಪರಾಧ ಮುಕ್ತಗೊಳಿಸುವಿಕೆಯೊಂದಿಗೆ ಮೊಕದ್ದಮೆಯ ಹೊರೆಯನ್ನು ಕಡಿಮೆ ಮಾಡಲಿದೆ.

ಈ ಕರಡು ರಚನೆಗಾಗಿ ಅನುಸರಿಸಿದ ಸಮಾಲೋಚನಾ ವಿಧಾನ ಕೂಡ ಅಷ್ಟೇ ಗಮನಾರ್ಹವಾಗಿದೆ.

ಮಸೂದೆಯ ಕರಡು ರಚನೆಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡ ಮತ್ತು ಸಂಸತ್ತಿನಲ್ಲಿ ಅದನ್ನು ಬೆಂಬಲಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು. ”

 

*****