Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ ಸಂದರ್ಭ ಪ್ರಧಾನ ಮಂತ್ರಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯ ಕನ್ನಡ ಅವತರಣಿಕೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ ಸಂದರ್ಭ ಪ್ರಧಾನ ಮಂತ್ರಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯ ಕನ್ನಡ ಅವತರಣಿಕೆ.


ನಮಸ್ಕಾರ ಸ್ನೇಹಿತರೇ,

ಚಳಿಗಾಲದ ಅಧಿವೇಶನಕ್ಕೆ ನಿಮಗೆಲ್ಲರಿಗೂ ಸ್ವಾಗತ. ಈ ಅಧಿವೇಶನ ಬಹಳ ಮುಖ್ಯ. ಜನರ ಕಲ್ಯಾಣಕ್ಕೆ ಮತ್ತು ದೇಶದ ಹಿತಕ್ಕೆ ಅವಶ್ಯವಾದ ಸಾರ್ವಜನಿಕ ಪ್ರಾಮುಖ್ಯತೆಯ, ಮತ್ತು ದೇಶಕ್ಕೆ ಮಹತ್ವದ್ದಾದ ಗರಿಷ್ಟ ಸಂಖ್ಯಾ ಸಾಧ್ಯತೆಯ ಕೆಲಸಗಳನ್ನು ಸಾಧಿಸುವತ್ತ ನಾವೆಲ್ಲ ಪ್ರಯತ್ನ ಮಾಡುವ ಭರವಸೆಯನ್ನು ನಾನು ಹೊಂದಿದ್ದೇನೆ. ಸದನದ ಎಲ್ಲಾ ಸದಸ್ಯರೂ ಈ ಸ್ಪೂರ್ತಿಯೊಂದಿಗೆ ಮುನ್ನಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅಹರ್ನಿಶಿ ಕಾರ್ಯಪ್ರವೃತ್ತರಾಗುತ್ತೇವೆ. ಚರ್ಚೆ ಮುಕ್ತವಾಗಿರಬಹುದು ಮತ್ತು ಅದು ಬಿಸಿ ಬಿಸಿಯಾಗಿರಬಹುದು. ಆದರೆ ಅದು ನಡೆಯಲೇ ಬೇಕು. ಅಲ್ಲಿ ಚರ್ಚೆಗಳಿರಬಹುದು, ಮಾತುಕತೆಗಳಿರಬಹುದು ಮತ್ತು ಸಂಭಾಷಣೆಗಳಿರಬಹುದು.ನಿಗದಿತ ಅವಧಿಗಿಂತ ಹೆಚ್ಚು ಕಾಲ ಸದನವು ಕಾರ್ಯಪವೃತ್ತವಾಗಬೇಕು ಎಂದು ನಾನು ವಿನಂತಿಸುತ್ತೇನೆ ಹಾಗೂ ಚರ್ಚೆಯ ಎಲ್ಲಾ ವಿಷಯಗಳೂ ಒಂದು ಮುಕ್ತಾಯ ತಲುಪಬೇಕು ಎಂದು ಆಶಿಸುತ್ತೇನೆ. ಚರ್ಚೆಯನ್ನು ಹೆಚ್ಚು ಅರ್ಥಪೂರ್ಣ ಮತ್ತು ದೃಢವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಮೇ ತಿಂಗಳಲ್ಲಿ ಪರೀಕ್ಷೆ ಎದುರಿಸಲಿರುವ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಪಕ್ಷಗಳ ಹಿತಾಸಕ್ತಿಗೆ ಬದಲು ಜನ ಕಲ್ಯಾಣವನ್ನು ಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗುತ್ತವೆ ಎಂದು ನಾನು ಭಾವಿಸುತ್ತೇನೆ. ಈ ನಂಬಿಕೆಯೊಂದಿಗೆ ಎಲ್ಲರಿಗೂ ನನ್ನ ಶುಭ ಹಾರೈಕೆಗಳು.

ಧನ್ಯವಾದಗಳು.
***